Advertisement

 ಐಪಿಎಲ್‌ ಪಂದ್ಯ: ಪ್ರೇಕ್ಷಕರ ಸಾಮರ್ಥ್ಯ ಹೆಚ್ಚಳ

11:46 PM Apr 01, 2022 | Team Udayavani |

ಮುಂಬಯಿ: ಹಾಲಿ ಋತುವಿನ ಎಪ್ರಿಲ್‌ 6ರ ಬಳಿಕದ ಐಪಿಎಲ್‌ ಪಂದ್ಯಗಳಿಗೆ ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರ ಸಾಮರ್ಥ್ಯವನ್ನು ಶೇ. 50ಕ್ಕೆ ಹೆಚ್ಚಿಸ ಲಾಗಿದೆ ಎಂದು ಐಪಿಎಲ್‌ನ ಟಿಕೆಟ್‌ ಪಾಲುದಾರಿಕೆ ಹೊಂದಿರುವ ಬುಕ್‌ಮೈ ಶೋ ಹೇಳಿದೆ.

Advertisement

ಮಹಾರಾಷ್ಟ್ರ ಸರಕಾರವು ಆರಂಭದಲ್ಲಿ ಐಪಿಎಲ್‌ ಪಂದ್ಯ ನಡೆಯುವ ನಾಲ್ಕು ತಾಣಗಳಾದ ಮುಂಬಯಿಯ ವಾಂಖೇಡೆ, ಬ್ರೆಬೋರ್ನ್ ಕ್ರೀಡಾಂಗಣ, ನವೀ ಮುಂಬಯಿಯ ಡಿ.ವೈ. ಪಾಟೀಲ್‌ ಕ್ರೀಡಾಂಗಣ ಮತ್ತು ಪುಣೆಯ ಗಹುಂಜೆಯಲ್ಲಿರುವ ಮಹಾ ರಾಷ್ಟ್ರ ಕ್ರಿಕೆಟ್‌ ಅಸೋಸಿಯೇಶನ್‌ ಕ್ರೀಡಾಂಗಣದಲ್ಲಿ ಶೇ. 25ರಷ್ಟು ಪ್ರೇಕ್ಷಕರ ಸಾಮರ್ಥ್ಯಕ್ಕೆ ಅವಕಾಶ ಕಲ್ಪಿಸಿತ್ತು.

ಐಪಿಎಲ್‌ನ ಮುಂದಿನ ಪಂದ್ಯ ಗಳಿಗೆ ಟಿಕೆಟ್‌ ಮಾರಾಟವು ನೇರ ವಾಗಿ ಸಿಗಲಿದೆ. ಇದೇ ವೇಳೆ ದೇಶದ ವಿವಿಧೆಡೆ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳನ್ನು ಕಣ್ಣಾರೆ ವೀಕ್ಷಿಸುವ ಉದ್ದೇಶದಿಂದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರೇಕ್ಷಕರ ಸಾಮರ್ಥ್ಯವನ್ನು ಈಗಿರುವ ಶೇ. 25ರಿಂದ ಶೇ. 50ಕ್ಕೆ ಹೆಚ್ಚಿಸುವು ದಾಗಿ ಪ್ರಕಟಿಸಿದೆ ಎಂದು ಬುಕ್‌ಮೈ ಶೋ ತಿಳಿಸಿದೆ.

ಎಪ್ರಿಲ್‌ 2ರಿಂದ ರಾಜ್ಯಾ ದ್ಯಂತ ಎಲ್ಲ ಕೋವಿಡ್‌ ನಿರ್ಬಂಧ ವನ್ನು ಮಹಾರಾಷ್ಟ್ರ ಸರಕಾರ ಹಿಂತೆಗೆದು ಕೊಂಡಿದೆ. ಇದರಿಂದ ಐಪಿಎಲ್‌ಗೆ ಲಾಭ ವಾಗುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next