Advertisement

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

12:45 AM Apr 29, 2024 | Team Udayavani |

ಕೋಲ್ಕತಾ: ಕಳೆದ 5 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು ಭರವಸೆಯ ಓಟ ಆರಂಭಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ಸೋಮವಾರದ ಈಡನ್‌ ಗಾರ್ಡನ್ಸ್‌ ಮುಖಾಮುಖಿಯಲ್ಲಿ ಆತಿಥೇಯ ಕೋಲ್ಕತಾ ನೈಟ್‌ರೈಡರ್ ವಿರುದ್ಧ ಸೆಣಸಲಿದೆ.

Advertisement

ಇದು ಇತ್ತಂಡಗಳ ನಡುವಿನ ದ್ವಿತೀಯ ಸುತ್ತಿನ ಪಂದ್ಯ. ಮೊದಲ ಮುಖಾಮುಖೀಯಲ್ಲಿ 106 ರನ್ನುಗಳ ಹೀನಾಯ ಸೋಲುಂಡಿದ್ದ ಡೆಲ್ಲಿ ಸೇಡು ತೀರಿಸಲು ಕಾದು ನಿಂತಿದೆ.

ಡೆಲ್ಲಿ ಸರ್ವಾಧಿಕ 10 ಪಂದ್ಯಗಳನ್ನಾಡಿದ್ದು, ಐದನ್ನು ಗೆದ್ದು ಐದರಲ್ಲಿ ಸೋಲನುಭವಿಸಿದೆ. ಕೆಕೆಆರ್‌ ಎಂಟರಲ್ಲಿ 5 ಪಂದ್ಯ ಜಯಿಸಿದೆ. ಆದರೆ ಪಂಜಾಬ್‌ ವಿರುದ್ಧ ಈಡನ್‌ನಲ್ಲೇ ಆಡಿದ ಕಳೆದ ಪಂದ್ಯದಲ್ಲಿ 6ಕ್ಕೆ 261 ರನ್‌ ಪೇರಿಸಿಯೂ ಇದನ್ನು ಉಳಿಸಿಕೊಳ್ಳಲಾಗದಿದ್ದುದು ಕೆಕೆಆರ್‌ಗೆ ಎದುರಾಗಿರುವ ಭಾರೀ ಹಿನ್ನಡೆ. ಪಂಜಾಬ್‌ ಇನ್ನೂ 8 ಎಸೆತ ಬಾಕಿ ಇರುವಂತೆಯೇ, ಕೇವಲ ಎರಡೇ ವಿಕೆಟ್‌ ನಷ್ಟದಲ್ಲಿ ಗುರಿ ಮುಟ್ಟಿ ವಿಶ್ವದಾಖಲೆ ನಿರ್ಮಿಸಿತ್ತು. ಸೋಮವಾರದ ಪಂದ್ಯ ಯಾವ ಟ್ರ್ಯಾಕ್‌ನಲ್ಲಿ ನಡೆಯಲಿದೆ ಎಂಬುದರ ಮೇಲೆ ಇತ್ತಂಡಗಳ ಭವಿಷ್ಯ ನಿರ್ಧಾರವಾಗಲಿದೆ.

ಡೆಲ್ಲಿ ಮೊನ್ನೆಯಷ್ಟೇ ಮುಂಬೈಯನ್ನು 10 ರನ್ನುಗಳಿಂದ ಮಣಿಸಿದ ಉತ್ಸಾಹದಲ್ಲಿದೆ. ಇದೇನೂ ವೀರೋಚಿತ ಜಯವಾಗಿರಲಿಲ್ಲ. ಡೆಲ್ಲಿ ಮೊದಲ ಸಲ ಇನ್ನೂರೈವತ್ತರ ಗಡಿ ದಾಟಿ ಸವಾಲೊಡ್ಡಿತ್ತು. ಆದರೆ ಬೌಲಿಂಗ್‌ನಲ್ಲಿ ನಿಯಂತ್ರಣ ಸಾಧಿಸಲು ವಿಫ‌ಲವಾಗಿತ್ತು. ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡಿರುವ ಕೆಕೆಆರ್‌ ವಿರುದ್ಧ ಪಂತ್‌ ಪಡೆ ಬೌಲಿಂಗ್‌ ಮ್ಯಾಜಿಕ್‌ ನಡೇಸೀತೇ ಎಂಬುದೊಂದು ಕುತೂಹಲ.

ಆರಂಭಕಾರ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ ಆಗಮನದಿಂದ ಡೆಲ್ಲಿಯ ಬ್ಯಾಟಿಂಗ್‌ ಬಲಿಷ್ಠಗೊಂಡಿದೆ. ಆಡಿದ 5 ಪಂದ್ಯಗಳಲ್ಲಿ 237.50 ಸ್ಟ್ರೆ „ಕ್‌ರೇಟ್‌ನೊಂದಿಗೆ 247 ರನ್‌ ಪೇರಿಸಿದ ಹೆಗ್ಗಳಿಕೆ ಈ ಆಸ್ಟ್ರೇಲಿಯನ್‌ ಕ್ರಿಕೆಟಿಗನದ್ದು. ರಿಷಭ್‌ ಪಂತ್‌, ಟ್ರಿಸ್ಟನ್‌ ಸ್ಟಬ್ಸ್, ಅಭಿಷೇಕ್‌ ಪೊರೆಲ್‌, ಶೈ ಹೋಪ್‌ ಅವರೆಲ್ಲ ಡೆಲ್ಲಿಯ ಬ್ಯಾಟಿಂಗ್‌ ಭರವಸೆಗಳಾಗಿದ್ದಾರೆ.

Advertisement

ಕೆಕೆಆರ್‌ ಬಲಿಷ್ಠ ಬ್ಯಾಟಿಂಗ್‌
ಕೆಕೆಆರ್‌ ಬ್ಯಾಟಿಂಗ್‌ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಹಾಗೆಯೇ ತವರಲ್ಲಿ ಇನ್ನೊಂದು ಸೋಲನುಭವಿಸಲು ಅದು ಸಿದ್ಧವಿಲ್ಲ. ಸುನೀಲ್‌ ನಾರಾಯಣ್‌-ಫಿಲ್‌ ಸಾಲ್ಟ್ ಪ್ರಚಂಡ ಫಾರ್ಮ್ನಲ್ಲಿರುವ ಕಾರಣ ಭದ್ರ ಬುನಾದಿ ನಿರ್ಮಿಸುವುದರಲ್ಲಿ ಅನುಮಾನವಿಲ್ಲ.

ಮೊದಲ ಸುತ್ತಿನಲ್ಲಿ…
ಎ. 3ರಂದು ವಿಶಾಖಪಟ್ಟಣದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕೆಕೆಆರ್‌ 106 ರನ್ನುಗಳ ಬೃಹತ್‌ ಅಂತರದಿಂದ ಡೆಲ್ಲಿಯನ್ನು ಕೆಡವಿತ್ತು. ಕೆಕೆಆರ್‌ 7ಕ್ಕೆ 272 ರನ್‌ ಪೇರಿಸಿದರೆ, ಡೆಲ್ಲಿ 17.2 ಓವರ್‌ಗಳಲ್ಲಿ 166ಕ್ಕೆ ಆಲೌಟ್‌ ಆಗಿತ್ತು.

ಕೆಕೆಆರ್‌ ಪರ ಸುನೀಲ್‌ ನಾರಾಯಣ್‌ 85, ರಘುವಂಶಿ 54, ರಸೆಲ್‌ 41 ರನ್‌ ಬಾರಿಸಿದ್ದರು. ಡೆಲ್ಲಿ ಸರದಿಯಲ್ಲಿ ಮಿಂಚಿದ್ದು ನಾಯಕ ರಿಷಭ್‌ ಪಂತ್‌ (55) ಮತ್ತು ಟ್ರಿಸ್ಟನ್‌ ಸ್ಟಬ್ಸ್ (54) ಮಾತ್ರ. ವೈಭವ್‌ ಅರೋರ ಮತ್ತು ವರುಣ್‌ ಚಕ್ರವರ್ತಿ ತಲಾ 3 ವಿಕೆಟ್‌ ಉರುಳಿಸಿ ಡೆಲ್ಲಿಯನ್ನು ಕಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next