Advertisement

ಐಪಿಎಲ್‌ ಫಾರ್ಮ್ ವಿಶ್ವಕಪ್‌ಗೆ ಮಾನದಂಡವಲ್ಲ: ಮೊಹಿಂದರ್‌

12:30 AM Feb 01, 2019 | |

ಹೊಸದಿಲ್ಲಿ: ಐಪಿಎಲ್‌ನಲ್ಲಿ ಕಂಡುಬರುವ ಕ್ರಿಕೆಟಿಗರ ಫಾರ್ಮ್ ಏಕದಿನ ವಿಶ್ವಕಪ್‌ ಆಯ್ಕೆಗೆ ಮಾನದಂಡವಲ್ಲ ಎಂದು 1983ರ ವಿಶ್ವಕಪ್‌ ಹೀರೋ ಮೊಹಿಂದರ್‌ ಅಮರ್‌ನಾಥ್‌ ಹೇಳಿದ್ದಾರೆ.

Advertisement

“ವಿಶ್ವಕಪ್‌ಗ ಮುನ್ನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಡೆಯಲಿದೆ. ಈ ಲೀಗ್‌ನಲ್ಲಿ ಆಡುವ ಆಟಗಾರರ ಫಾರ್ಮ್ ಅನ್ನು ವಿಶ್ವಕಪ್‌ ತಂಡದ ಆಯ್ಕೆಯ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ಅರಿಯಬೇಕು’ ಎಂದು ಅಮರ್‌ನಾಥ್‌ ಹೇಳಿದರು.

ಅಮೋಘ ಸಾಧನೆ
“ಆಸ್ಟ್ರೇಲಿಯ ನೆಲದಲ್ಲಿ ಭಾರತದ ಸಾಧನೆ ಅಮೋಘವಾಗಿತ್ತು. ಆದರೆ ನ್ಯೂಜಿಲ್ಯಾಂಡ್‌ನ‌ಲ್ಲಿ ಇದಕ್ಕಿಂತ ಮಿಗಿಲಾದ ಸಾಧನೆ ನಮ್ಮವರದ್ದಾಗಿದೆ. 2009ರಿಂದ ಭಾರತ ತಂಡ ನ್ಯೂಜಿಲ್ಯಾಂಡ್‌ ವಿರುದ್ಧ ಏಕದಿನ ಪಂದ್ಯವನ್ನು ಜಯಿಸಿದ್ದೇ ಅಪರೂಪ. ಈಗ ಸರಣಿಯನ್ನೇ ವಶಪಡಿಸಿಕೊಂಡಿದೆ. ನಾಯಕ ವಿರಾಟ್‌ ಕೊಹ್ಲಿ ಅವರ ಉಪಸ್ಥಿತಿ, ಅವರ ನಡವಳಿಕೆ, ತಂಡವನ್ನು ಮುನ್ನಡೆಸುವ ರೀತಿ ಎಲ್ಲವೂ ಶ್ಲಾಘನೀಯ. ಒಟ್ಟಾರೆಯಾಗಿ ವಿಶ್ವಕಪ್‌ಗೆ ಇದು ಉತ್ತಮ ತಯಾರಿ. ಭಾರತ ಹೊಸ ಆಟಗಾರರನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಿದೆ. ಅದರಲ್ಲಿ ಕೆಲವು ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ವಿಶ್ವಕಪ್‌ಗೆ ತಂಡವನ್ನು ಅಂತಿಮಗೊಳಿಸುವುದು ಆಯ್ಕೆಗಾರರಿಗೆ ತಲೆನೋವಾಗಲಿದೆ’ ಎಂದು ಅಮರ್‌ನಾಥ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next