Advertisement

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

12:10 AM Apr 28, 2024 | Team Udayavani |

ಅಹ್ಮದಾಬಾದ್‌: ಬಲಾಡ್ಯ ಹೈದರಾಬಾದ್‌ ತಂಡವನ್ನು ಅವರದೇ ಅಂಗಳದಲ್ಲಿ ಕೆಡವಿ ಹೊಸ ಉತ್ಸಾಹದಲ್ಲಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ರವಿವಾರ ಅಪರಾಹ್ನ ಅಹ್ಮದಾಬಾದ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಸವಾಲನ್ನು ಎದುರಿಸಲಿದೆ.

Advertisement

ಎರಡೂ ತಂಡಗಳು ತಲಾ 9 ಪಂದ್ಯಗಳನ್ನಾಡಿವೆ. ಶುಭಮನ್‌ ಗಿಲ್‌ ಪಡೆ ನಾಲ್ಕನ್ನು ಗೆದ್ದು 7ನೇ ಸ್ಥಾನ ದಲ್ಲಿದೆ. ಆರ್‌ಸಿಬಿ ಗೆದ್ದದ್ದು ಎರಡನ್ನು ಮಾತ್ರ. ಅದಿನ್ನೂ ಕೊನೆಯ ಸ್ಥಾನವನ್ನು ಬಿಟ್ಟು ಮೇಲೆದ್ದಿಲ್ಲ. ರನ್‌ರೇಟ್‌ ಕೂಡ ಮೈನಸ್‌ನಲ್ಲಿದೆ. ಉಳಿದೆಲ್ಲ ಪಂದ್ಯ ಗೆದ್ದರೂ ಒಟ್ಟುಗೂಡುವುದು 14 ಅಂಕ ಮಾತ್ರ. ಆದ್ದರಿಂದ ಪ್ಲೇ ಆಫ್ ಪ್ರವೇಶ ಅಸಾಧ್ಯ. ಹೀಗಾಗಿ ಹೈದರಾಬಾದ್‌ಗೆ ಸೋಲುಣಿಸಿದಂತೆ ಒಂದೊಂದೇ ತಂಡಕ್ಕೆ ಆಘಾತ ನೀಡಿ, ಆ ತಂಡಗಳ ಹಾದಿಗೆ ಮುಳ್ಳಾ ಗುವು ದೊಂದೇ ಆರ್‌ಸಿಬಿ ಮುಂದಿರುವ ಯೋಜನೆ. ಹೀಗಾಗಿ ಗುಜರಾತನ್ನು ಅವರದೇ ನೆಲದಲ್ಲಿ ಮಣಿ ಸುವ ಮೂಲಕ ಆರ್‌ಸಿಬಿ ತನ್ನ ಅಭಿಮಾನಿಗಳನ್ನು ಒಂದಿಷ್ಟು ಸಮಾಧಾನ ಪಡಿಸಬಹುದು. ಹಾಗೆಯೇ ಇನ್ನೊಂದು ಪಂದ್ಯ ಸೋತರೂ ನಿರ್ಗಮನ ಖಾತ್ರಿಗೊಳ್ಳಲಿದೆ.

ಮಿಂಚಿದ ಮಿಡ್ಲ್ ಆರ್ಡರ್‌
ಆರ್‌ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಹೆಚ್ಚು ಬಲಿಷ್ಠಗೊಂಡಿರುವುದು ಕಳೆದ ಪಂದ್ಯದಲ್ಲಿ ಸಾಬೀತಾಗಿದೆ. ಮುಖ್ಯವಾಗಿ ರಜತ್‌ ಪಾಟಿದಾರ್‌ ಅವರ ಸಿಡಿಲಬ್ಬರದ ಫಿಫ್ಟಿ ಆರ್‌ಸಿಬಿ ಪಾಲಿಗೊಂದು ವರದಾನವೆಂದೇ ಹೇಳಬೇಕು. ಕ್ಯಾಮರಾನ್‌ ಗ್ರೀನ್‌ ಕೂಡ ಲಯ ಕಂಡುಕೊಂಡಿದ್ದಾರೆ. ವನ್‌ಡೌನ್‌ ಬ್ಯಾಟರ್‌ ವಿಲ್‌ ಜಾಕ್ಸ್‌ ಹೈದರಾಬಾದ್‌ ವಿರುದ್ಧ ಬೇಗ ಔಟಾದರೂ ಅಪಾಯದ ಮುನ್ಸೂಚನೆ ನೀಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಕಾರ್ತಿಕ್‌-ಲೊನ್ರೋರ್‌ ಇದ್ದಾರೆ. ವಿರಾಟ್‌ ಕೊಹ್ಲಿ-ಡು ಪ್ಲೆಸಿಸ್‌ ಉತ್ತಮ ಆರಂಭ ಒದಗಿಸಿದರೆ ಆರ್‌ಸಿಬಿ ದೊಡ್ಡ ಮೊತ್ತ ಪೇರಿಸುವುದರಲ್ಲಿ ಅನುಮಾನವಿಲ್ಲ. ಇಲ್ಲಿಯೂ ಟಾಸ್‌ ನಿರ್ಣಾಯಕವಾಗಲಿದೆ. ಟಾಸ್‌ ಗೆದ್ದರೆ ಆರ್‌ಸಿಬಿ ಬ್ಯಾಟಿಂಗ್‌ ಆಯ್ದುಕೊಳ್ಳುವುದು ಉತ್ತಮ.

ಆರ್‌ಸಿಬಿ ಅತ್ಯಂತ ದುರ್ಬಲ ಬೌಲಿಂಗ್‌ ಪಡೆಯನ್ನು ಹೊಂದಿರುವ ತಂಡ. ಆದರೆ ಹೈದರಾಬಾದ್‌ ವಿರುದ್ಧ ಐದೇ ಓವರ್‌ಗಳಲ್ಲಿ ಹೆಡ್‌, ಅಭಿಷೇಕ್‌ ಶರ್ಮ, ಮಾರ್ಕ್‌ರಮ್‌ ಮತ್ತು ಕ್ಲಾಸೆನ್‌ ವಿಕೆಟ್‌ ಉಡಾಯಿಸಿದ ಸಾಹಸವನ್ನು ಮರೆಯುವಂತಿಲ್ಲ. ಲೆಗ್‌ಸ್ಪಿನ್ನರ್‌ ಕರ್ಣ್‌ ಶರ್ಮ, ಪಾರ್ಟ್‌ಟೈಮ್‌ ಪೇಸರ್‌ ಗ್ರೀನ್‌ ಹೈದರಾಬಾದ್‌ ವಿರುದ್ಧ ಉತ್ತಮ ನಿಯಂತ್ರಣ ಸಾಧಿಸಿದ್ದರು. ಎಡಗೈ ಸ್ಪಿನ್ನರ್‌ ಸ್ವಪ್ನಿಲ್‌ ಸಿಂಗ್‌ ಸಾಹಸವನ್ನೂ ಮರೆಯುವಂತಿಲ್ಲ.

ಕಳೆಗುಂದಿದ ಚಾರ್ಮ್
ಗುಜರಾತ್‌ ಆರಂಭದ 2 ಸೀಸನ್‌ಗಳಲ್ಲಿ ಮೂಡಿಸಿದ ಚಾರ್ಮ್ ಹೊಂದಿಲ್ಲ. ಮುಖ್ಯವಾಗಿ ಬ್ಯಾಟಿಂಗ್‌ ವಿಭಾಗ ಅಷ್ಟೇನೂ ಅಪಾಯಕಾರಿಯಾಗಿ ಗೋಚರಿಸಿಲ್ಲ. ನಾಯಕ ಶುಭಮನ್‌ ಗಿಲ್‌ ಮತ್ತು ಸಾಯಿ ಸುದರ್ಶನ್‌ ಮಾತ್ರ ಮುನ್ನೂರರ ಗಡಿ ದಾಟಿದ್ದಾರೆ. ಡೇವಿಡ್‌ ಮಿಲ್ಲರ್‌ (138), ರಾಹುಲ್‌ ತೆವಾಟಿಯ (153), ಸಾಹಾ (130), ವಿಜಯ್‌ ಶಂಕರ್‌ (73), ಶಾರುಖ್‌ ಖಾನ್‌ (30) ಒಂದು ತಂಡವಾಗಿ ಆಡುವಲ್ಲಿ ವಿಫ‌ಲರಾಗುತ್ತಿದ್ದಾರೆ. ಆದರೂ ಡೆಲ್ಲಿ ವಿರುದ್ಧ ಚೇಸಿಂಗ್‌ ವೇಳೆ 220 ರನ್‌ ಪೇರಿಸಿದ್ದನ್ನು ಮರೆಯುವಂತಿಲ್ಲ.

Advertisement

ಹಳಿ ಏರುವ ನಿರೀಕ್ಷೆಯಲ್ಲಿ ಚೆನ್ನೆ „-ಹೈದರಾಬಾದ್‌
ಚೆನ್ನೈ: ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಈ ಕೂಟದ ಬಿಗ್‌ ಹಿಟ್ಟಿಂಗ್‌ ಟೀಮ್‌ ಆಗಿರುವ ಸನ್‌ರೈಸರ್ ಹೈದರಾಬಾದ್‌ ರವಿವಾರ ಮುಖಾಮುಖೀಯಾಗಲಿವೆ. ಗೆಲುವಿನ ಟ್ರ್ಯಾಕ್‌ ಏರುವ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ಇದೊಂದು ಮಹತ್ವದ ಪಂದ್ಯವಾಗಲಿದೆ.

ಕಳೆದ ಪಂದ್ಯದಲ್ಲಿ ಚೆನ್ನೈಯನ್ನು ಲಕ್ನೋ ಸೂಪರ್‌ ಜೈಂಟ್ಸ್‌ ಅವರದೇ ಅಂಗಳದಲ್ಲಿ ಭರ್ಜರಿಯಾಗಿ ಮಣಿ ಸಿತ್ತು. ಮಾರ್ಕಸ್‌ ಸ್ಟೋಯಿನಿಸ್‌ ಅವರ ಸುಂಟರಗಾಳಿಗೆ ಚೆನ್ನೈ ತತ್ತರಿ ಸಿತ್ತು. ಚೆನ್ನೈಯನ್ನು ತವರಿನಂಗಳದಲ್ಲೂ ಮಣಿ ಸಲು ಸಾಧ್ಯ ಎಂಬುದನ್ನು ಲಕ್ನೋ ತೋರಿಸಿ ಕೊಟ್ಟಿದೆ. ಇನ್ನೊಂದೆಡೆ ಹೈದರಾಬಾದ್‌ ಕೂಡ ಕಳೆದ ಪಂದ್ಯದಲ್ಲಿ ತವರಿನಂಗಳದಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದೆ. ಆರ್‌ಸಿಬಿಗೆ ಶರಣಾಗಿ ಚೆನ್ನೈಗೆ ಬಂದಿಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next