Advertisement

IPL 2018: ಸನ್‌ –ಚೆನ್ನೈ ನಡುವೆ Megha ಫೈನಲ್‌

12:09 AM May 26, 2018 | Team Udayavani |

ಕೋಲ್ಕತಾ: ಜಿದ್ದಾಜಿದ್ದಿನ ಹೋರಾಟ ನಡೆದ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್‌
ರೈಡರ್ಸ್‌ ನಿರಾಶೆಯ ಕಡಲಲಿ ಮುಳುಗಿತು. ಕಡೆಯ ಹಂತದಲ್ಲಿ 13 ರನ್‌ಗಳಿಂದ ಗೆದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಫೈನಲ್‌ಗೇರಿತು. ಮೇ 27ರಂದು ಮುಂಬೈನಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಿ ಅದು ಧೋನಿ ನೇತೃತ್ವದ ಚೆನ್ನೈ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

Advertisement

ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್‌ ವಿರುದ್ಧ ಸೋತು ಫೈನಲ್‌ಗೇರುವ ಅವಕಾಶ ತಪ್ಪಿಸಿ 
ಕೊಂಡಿದ್ದ ಹೈದರಾಬಾದ್‌ 2ನೇ ಅವಕಾಶವನ್ನು ಹಾಳು ಮಾಡಿಕೊಳ್ಳಲಿಲ್ಲ. ಬ್ಯಾಟಿಂಗ್‌,ಬೌಲಿಂಗ್‌ನಲ್ಲಿ ಖಡಕ್‌ ಹೋರಾಟ ನಡೆಸಿ ಪಂದ್ಯವನ್ನು ಕೋಲ್ಕತಾ ಕೈನಿಂದ ಕಸಿಯಿತು.

ಜೊತೆಗೆ ಸತತ 6ನೇ ಪಂದ್ಯದಲ್ಲಿ ಸೋಲುವ ಅವಮಾನದಿಂದ ಪಾರಾಯಿತು. ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 174 ರನ್‌ಗಳಿಸಿತು. ಇದನ್ನು ಬೆನ್ನತ್ತಿದ ಕೋಲ್ಕತಾ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 161 ರನ್‌ ಮಾತ್ರ ಗಳಿಸಿತು.

ಕೋಲ್ಕತಾ ಅನಿರೀಕ್ಷಿತ ಕುಸಿತ: ಸನ್‌ರೈಸರ್ಸ್‌ ಹೈದರಾಬಾದ್‌ 174 ರನ್‌ ಗಳಿಸಿದ್ದಾಗ ಅದು ಭಾರೀ ಮೊತ್ತವೆಂದು ಕೋಲ್ಕತಾ ಭಾವಿಸಿರಲಿಲ್ಲ. ಆತಿಥೇಯ ತಂಡ ಬೇರೆ ಆಗಿರುವುದರಿಂದ ಈ ಮೊತ್ತ ಬೆನ್ನತ್ತಬಹುದು ಎಂಬ ನಿರೀಕ್ಷೆಯಿತ್ತು. ತಂಡದ ಮೊತ್ತ 108 ರನ್‌ಗಳಾಗುವರೆಗೂ ಪರಿಸ್ಥಿತಿ ಕೋಲ್ಕತಾ ಪರವಾಗಿಯೇ ಇತ್ತು. 

ಕ್ರಿಸ್‌ ಲಿನ್‌ (48), ಸುನೀಲ್‌ ನಾರಾಯಣ್‌ (26) ಅದಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದರು. ಆದರೆ 108 ರನ್‌ಗಳಾಗಿದ್ದಾಗ ನಾಯಕ ದಿನೇಶ್‌ ಕಾರ್ತಿಕ್‌ ಹಾಗೂ ಭರವಸೆಯ ಬ್ಯಾಟ್ಸ್‌ಮನ್‌ ಕ್ರಿಸ್‌ಲಿನ್‌ ಒಬ್ಬರ ಹಿಂದೊಬ್ಬರು ಔಟಾದರು. ಇಲ್ಲಿಂದ ಪರಿಸ್ಥಿತಿ ಹೈದರಾಬಾದ್‌ ಪರವಾಗಿ ಬದಲಾಯಿತು. ಕಡೆಯಲ್ಲಿ ಶುಬ್ಮುನ್‌ ಗಿಲ್‌ (30) ಭರ್ಜರಿ ಹೋರಾಟ ನಡೆಸಿದರೂ ಅದು ಗೆಲ್ಲಲು ಸಾಕಾಗಲಿಲ್ಲ. ಹೈದರಾಬಾದ್‌ ಪರ ಬೌಲಿಂಗ್‌ನಲ್ಲಿ ಜಾದೂ ಮಾಡಿದ್ದು ರಶೀದ್‌ ಖಾನ್‌ ಹಾಗೂ ಸಿದ್ಧಾರ್ಥ್ ಕೌಲ್‌. ರಶೀದ್‌ 19 ರನ್‌ ನೀಡಿದ ಮಹತ್ವದ 3 ವಿಕೆಟ್‌ ಕಿತ್ತರು. ಕೌಲ್‌ 2 ವಿಕೆಟ್‌ ಪಡೆದರು. ವೃದ್ಧಿಮಾನ್‌ ಸಹಾ – ಶಿಖರ್‌ ಧವನ್‌ ಮೊದಲ ವಿಕೆಟಿಗೆ 56 ರನ್‌ ಪೇರಿಸಿ ಸನ್‌ರೈಸರ್ ಹೈದರಾಬಾದ್‌ಗೆ ಉತ್ತಮ ಆರಂಭ ಒದಗಿಸಿದರು. ಕ್ರಮವಾಗಿ 35 ಹಾಗೂ 34 ರನ್‌ ಮಾಡಿದರು. ಆದರೆ ರನ್‌ ಮಷಿನ್‌, ನಾಯಕ ಕೇನ್‌ ವಿಲಿಯಮ್ಸನ್‌ (3) ವಿಫ‌ಲರಾದರು. ಶಕೀಬ್‌ – ಹೂಡಾ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಲು ಮುಂದಾದರೂ ಇವರ ಆಟದಲ್ಲಿ T20 ಜೋಶ್‌ ಇರಲಿಲ್ಲ.ಬಿಗ್‌ ಹಿಟ್ಟರ್‌ಗಳಾದ ಯೂಸುಫ್ ಪಠಾಣ್‌ (3) ಮತ್ತು ಕಾರ್ಲೋಸ್‌ ಬ್ರಾಥ್‌ವೇಟ್‌ (8) ಕೈಕೊಟ್ಟರು.

Advertisement

19ನೇ ಓವರ್‌ ಆರಂಭವಾಗುತ್ತಿದ್ದಂತೆಯೆ 138 ರನ್ನಿಗೆ 7 ವಿಕೆಟ್‌ ಉರುಳಿತು. ಈ ಹಂತದಲ್ಲಿ ರಶೀದ್‌ ಖಾನ್‌ ಸಿಡಿದು ನಿಂತದ್ದು ಹೈದರಾಬಾದ್‌ ಇನಿಂಗ್ಸಿನ ಆಕರ್ಷಣೆ ಎನಿಸಿಕೊಂಡಿತು. ತಮ್ಮ ಘಾತಕ ಲೆಗ್‌ಸ್ಪಿನ್‌ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಬಲೆ ಬೀಸುತ್ತಿದ್ದ ರಶೀದ್‌ ಮೊದಲ ಬಾರಿಗೆ ತಾನು ಬ್ಯಾಟಿಂಗಿಗೂ ಸೈ ಎಂಬುದನ್ನು ತೋರಿಸಿ ಕೊಟ್ಟರು. ಕೇವಲ 10 ಎಸೆತಗಳಿಂದ ಅಜೇಯ 34 ರನ್‌ ಬಾರಿಸಿ ಈಡನ್‌ನಲ್ಲಿ ಮಿಂಚು ಹರಿಸಿದರು. ಈ ಆರ್ಭಟದ ವೇಳೆ 4 ಸಿಕ್ಸರ್‌ ಹಾಗೂ 2 ಬೌಂಡರಿ ಸಿಡಿಯಲ್ಪಟ್ಟಿತು.

ರಶೀದ್‌ ಖಾನ್‌ ಬ್ಯಾಟಿಂಗ್‌ ಪರಾಕ್ರಮದಿಂದ ಕೊನೆಯ 11 ಎಸೆತಗಳಲ್ಲಿ 36 ರನ್‌ ಹರಿದು ಬಂತು. ಪ್ರಸಿದ್‌ಟಛಿ ಕೃಷ್ಣ ಚೆನ್ನಾಗಿ ದಂಡಿಸಲ್ಪಟ್ಟರು. ಅವರ ಅಂತಿಮ ಓವರಿನಲ್ಲಿ 24 ರನ್‌ ಸೋರಿ ಹೋಯಿತು. ಕೆಕೆಆರ್‌ ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ (29ಕ್ಕೆ 2) ಮತ್ತು ಸುನೀಲ್‌ ನಾರಾಯಣ್‌ (24ಕ್ಕೆ 1) ಉತ್ತಮ ನಿಯಂತ್ರಣ ಸಾಧಿಸಿದರು.

ಸ್ಕೋರ್‌ಪಟ್ಟಿ
ಸನ್‌ರೈಸರ್ ಹೈದರಾಬಾದ್‌

ವೃದ್ಧಿಮಾನ್‌ ಸಾಹಾ    ಸ್ಟಂಪ್ಡ್ ಕಾರ್ತಿಕ್‌ ಬಿ ಚಾವ್ಲಾ    35
ಶಿಖರ್‌ ಧವನ್‌    ಎಲ್‌ಬಿಡಬ್ಲ್ಯು ಕುಲದೀಪ್‌    34
ಕೇನ್‌ ವಿಲಿಯಮ್ಸನ್‌    ಸಿ ಕಾರ್ತಿಕ್‌ ಬಿ ಕುಲದೀಪ್‌    3
ಶಕಿಬ್‌ ಅಲ್‌ ಹಸನ್‌    ರನೌಟ್‌    28
ದೀಪಕ್‌ ಹೂಡಾ    ಸಿ ಚಾವ್ಲಾ ಬಿ ನಾರಾಯಣ್‌    19
ಯೂಸುಫ್ ಪಠಾಣ್‌    ಸಿ ಚಾವ್ಲಾ ಬಿ ಮಾವಿ    3
ಕಾರ್ಲೋಸ್‌ ಬ್ರಾತ್‌ವೇಟ್‌    ರನೌಟ್‌    8
ರಶೀದ್‌ ಖಾನ್‌    ಔಟಾಗದೆ    34
ಭುವನೇಶ್ವರ್‌ ಕುಮಾರ್‌    ಔಟಾಗದೆ    5
ಇತರ        5
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)        174
ವಿಕೆಟ್‌ ಪತನ: 1-56, 2-60, 3-84, 4-113, 5-124, 6-134, 7-138.

ಬೌಲಿಂಗ್‌:
ಶಿವಂ ಮಾವಿ        4-0-33-1
ಎಂ. ಪ್ರಸಿದ್ಧ್ ಕೃಷ್ಣ        4-0-56-0
ಆ್ಯಂಡ್ರೆ ರಸೆಲ್‌        1-0-9-0
ಸುನೀಲ್‌ ನಾರಾಯಣ್‌        4-0-24-1
ಪೀಯೂಷ್‌ ಚಾವ್ಲಾ        3-0-22-1
ಕುಲದೀಪ್‌ ಯಾದವ್‌        4-0-29-2

ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌    ಎಲ್‌ಬಿಡಬ್ಲ್ಯು ರಶೀದ್‌  48  
ಸುನೀಲ್‌ ನಾರಾಯಣ್‌    ಸಿ ಬ್ರಾತ್‌ವೇಟ್‌ ಬಿ ಕೌಲ್‌    26
ನಿತೀಶ್‌ ರಾಣ    ರನೌಟ್‌    22
ರಾಬಿನ್‌ ಉತ್ತಪ್ಪ    ಬಿ ರಶೀದ್‌    2
ದಿನೇಶ್‌ ಕಾರ್ತಿಕ್‌    ಬಿ ಶಕಿಬ್‌    8
ಶುಭಮನ್‌ ಗಿಲ್‌    ಸಿ ರಶೀದ್‌ ಬಿ ಬ್ರಾತ್‌ವೇಟ್‌    30
ಆ್ಯಂಡ್ರೆ ರಸೆಲ್‌    ಸಿ ಧವನ್‌ ಬಿ ರಸೀದ್‌    3
ಪೀಯೂಷ್‌ ಚಾವ್ಲಾ    ಬಿ ಕೌಲ್‌    12
ಶಿವಂ ಮಾವಿ    ಸಿ ರಶೀದ್‌ ಬಿ ಬ್ರಾತ್‌ವೇಟ್‌    6
ಕುಲದೀಪ್‌ ಯಾದವ್‌    ಔಟಾಗದೆ    1
ಪ್ರಸಿದ್ಧ್ ಕೃಷ್ಣ    ಔಟಾಗದೆ    0
ಇತರ        3

ಒಟ್ಟು  (20 ಓವರ್‌ಗಳಲ್ಲಿ 9 ವಿಕೆಟಿಗೆ)        161
ವಿಕೆಟ್‌ ಪತನ: 1-40, 2-87, 3-93, 4-108, 5-108, 6-118, 7-145, 8-160, 9-160.

ಬೌಲಿಂಗ್‌:

ಭುವನೇಶ್ವರ್‌ ಕುಮಾರ್‌        4-0-38-0
ಖಲೀಲ್‌ ಅಹ್ಮದ್‌        3-0-38-0
ಸಿದ್ಧಾರ್ಥ್ ಕೌಲ್‌        4-0-32-2
ರಶೀದ್‌ ಖಾನ್‌        4-0-19-3
ಕಾರ್ಲೋಸ್‌ ಬ್ರಾತ್‌ವೇಟ್‌        2-0-16-2
ಶಕಿಬ್‌ ಅಲ್‌ ಹಸನ್‌        3-0-16-1

ಪಂದ್ಯಶ್ರೇಷ್ಠ: ರಶೀದ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next