Advertisement
“ಮಿಸ್ಟರ್ 360 ಡಿಗ್ರಿ’ ಖ್ಯಾತಿಯ, ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ಎಬಿಡಿ 2016ರಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ 12 ಸಿಕ್ಸರ್, 10 ಬೌಂಡರಿ ಒಳಗೊಂಡಂತೆ 43 ಎಸೆತಗಳಲ್ಲಿ 129 ರನ್ ಬಾರಿಸಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದರು. 5 ವರ್ಷ ಉರುಳಿದರೂ ಅವರ ಆಟ ಕಣ್ಮುಂದೆ ಕುಣಿಯುತ್ತಿದೆ.
Related Articles
Advertisement
ದಕ್ಷಿಣ ಆಫ್ರಿಕಾದ ಎಡಗೈ ಆಟಗಾರ ಡೇವಿಡ್ ಮಿಲ್ಲರ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ ಬಿಗ್ ಹಿಟ್ಟರ್. ಮಿಲ್ಲರ್ 2013ರ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧ ಕೇವಲ 38 ಎಸೆತಗಳಲ್ಲಿ 101 ರನ್ (8 ಬೌಂಡರಿ, 7 ಸಿಕ್ಸರ್) ಬಾರಿಸಿ ಪಂಜಾಬ್ ತಂಡದ ಗೆಲುವಿನ ಹೀರೋ ಎನಿಸಿದ್ದರು
ಯೂಸುಫ್ ಪಠಾಣ್ :
ರಾಜಸ್ಥಾನ್ ರಾಯಲ್ಸ್ ತಂಡದ ಮೂಲಕ ಬೆಳಕಿಗೆ ಬಂದ ಆಲ್‌ರೌಂಡರ್ ಯೂಸುಫ್ ಪಠಾಣ್. 2010ರಲ್ಲಿ ಮುಂಬೈ ಇಂಡಿಯನ್ಸ್ ಎದುರು ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್, 9 ಬೌಂಡರಿ ಸೇರಿದ್ದವು.
ಕ್ರಿಸ್ ಗೇಲ್ :
“ಯುನಿವರ್ಸ್ ಬಾಸ್’ ಖ್ಯಾತಿಯ ಕ್ರಿಸ್ ಗೇಲ್ ಅವರ ಐಪಿಎಲ್ ದಾಖಲೆಯೂ ಕಮ್ಮಿಯಲ್ಲ. 2013ರ ಪುಣೆ ವಾರಿಯರ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಸರ್-ಬೌಂಡರಿಗಳ ಸುರಿಮಳೆಗೈದ ಗೇಲ… ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದರಲ್ಲದೆ 66 ಎಸೆತಗಳಲ್ಲಿ 175 ರನ್ ಪೇರಿಸಿ ಅಜೇಯರಾಗಿ ಉಳಿದಿದ್ದರು. ಅವರ ಈ ಅಸಾಮಾನ್ಯ ಆಟದ ವೇಳೆ 13 ಬೌಂಡರಿ, 17 ಸಿಕ್ಸರ್ ಸಿಡಿದವು.