Advertisement

 ಐಪಿಎಲ್‌: ಡೆಲ್ಲಿ ಕ್ಯಾಪಿಟಲ್ಸ್‌  ವಿರುದ್ದ ಚೆನ್ನೈಗೆ 91 ರನ್‌ ಗೆಲುವು

12:09 AM May 09, 2022 | Team Udayavani |

ನವಿ ಮುಂಬಯಿ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಸಾಧಾರಣ ನಿರ್ವಹಣೆ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 91 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ.

Advertisement

ಚೆನ್ನೈ ಬೌಲರ್‌ಗಳ ಮಾರಕ ದಾಳಿಗೆ ಕುಸಿದ ಡೆಲ್ಲಿ ತಂಡವು 17.4 ಓವರ್‌ಗಳಲ್ಲಿ 117 ರನ್ನಿಗೆ ಆಲೌಟಾಗಿ ಶರಣಾಯಿತು. ಈ ಮೊದಲು ಅಗ್ರ ಆಟಗಾರರ ಉತ್ತಮ ಆಟದಿಂದಾಗಿ ಚೆನ್ನೈ ತಂಡವು 6 ವಿಕೆಟಿಗೆ 208 ರನ್ನುಗಳ ಬೃಹತ್‌ ಮೊತ್ತ ಪೇರಿಸಿತ್ತು.

ಮೊಯಿನ್‌ ಅಲಿ ಸಹಿತ ಚೆನ್ನೈ ಬೌಲರ್‌ಗಳ ದಾಳಿಗೆ ಡೆಲ್ಲಿ ನಿರಂತರ ಕುಸಿಯಿತು. ವಾರ್ನರ್‌, ರಿಷಬ್‌ ಪಂತ್‌, ಮಿಚೆಲ್‌ ಮಾರ್ಷ್‌, ರೋವ¾ನ್‌ ಪೊವೆಲ್‌ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರು. 25 ರನ್‌ ಗಳಿಸಿದ ಮಿಚೆಲ್‌ ಮಾರ್ಷ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ಈ ಮೊದಲು ಆರಂಭಿಕರಾದ ಗಾಯಕ್ವಾಡ್‌ ಮತ್ತು ಡೆವೋನ್‌ ಕಾನ್ವೆ ಚೆನ್ನೈ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಡೆಲ್ಲಿ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅವರು ಮೊದಲ ವಿಕೆಟಿಗೆ ಶತಕದ ಜತೆಯಾಟ ನಡೆಸಿದರು. ಓವರಿಗೆ ಹತ್ತರಂತೆ ರನ್‌ ಪೇರಿಸಿದ ಅವರಿಬ್ಬರು ತಂಡ ಬೃಹತ್‌ ಮೊತ್ತ ಪೇರಿಸುವ ಸೂಚನೆ ಇತ್ತರು.

ಹನ್ನೊಂದನೇ ಓವರಿನಲ್ಲಿ ಗಾಯಕ್ವಾಡ್‌ ಮೊದಲಿಗರಾಗಿ ಔಟಾದರು. ಆಗ ತಂಡದ ಮೊತ್ತ 110 ರನ್‌ ತಲುಪಿತ್ತು. 33 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 41 ರನ್‌ ಹೊಡೆದರು.

Advertisement

ಆಬಳಿಕ ಕಾನ್ವೆ ಅವರನ್ನು ಸೇರಿಕೊಂಡ ಶಿವಂ ದುಬೆ ಮತ್ತೆ ಬಿರುಸಿನ ಆಟಕ್ಕೆ ಇಳಿದರು. ದ್ವಿತೀಯ ವಿಕೆಟಿಗೆ 59 ರನ್‌ ಹರಿದು ಬಂತು. ಈ ಹಂತದಲ್ಲಿ ಶತಕದ ನಿರೀಕ್ಷೆಯಲ್ಲಿದ್ದ ಕಾನ್ವೆ ಔಟಾದರು. 49 ಎಸೆತ ಎದುರಿಸಿದ ಅವರು 87 ರನ್‌ ಗಳಿಸಿ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದರು. 7 ಬೌಂಡರಿ ಬಾರಿಸಿದ್ದ ಅವರು 5 ಭರ್ಜರಿ ಸಿಕ್ಸರ್‌ ಸಿಡಿಸಿದ್ದರು. ಆಬಳಿಕ ತಂಡ ಕೆಲವೊಂದು ವಿಕೆಟ್‌ ಕಳೆದುಕೊಂಡರೂ ತಂಡದ ಬೃಹತ್‌ ಮೊತ್ತಕ್ಕೆ ಯಾವುದೇ ತೊಂದರೆಯಾಗಲಿಲ್ಲ.
ಕೊನೆ ಹಂತದಲ್ಲಿ ನಾಯಕ ಧೋನಿ ಸಿಡಿದ ಕಾರಣ ತಂಡದ ಮೊತ್ತ 200ರ ಗಡಿ ದಾಟುವಂತಾಯಿತು. ಧೋನಿ 8 ಎಸೆತಗಳಿಂದ 1 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 21 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಬಿಗು ದಾಳಿ ಸಂಘಟಿಸಿದ ಆ್ಯನ್ರಿಚ್‌ ನೋರ್ಜೆ ತನ್ನ 4 ಓವರ್‌ಗಳ ದಾಳಿಯಲ್ಲಿ 42 ರನ್ನಿಗೆ 3 ವಿಕೆಟ್‌ ಕಿತ್ತು ಮಿಂಚಿದರು.

ರವೀಂದ್ರ ಜಡೇಜಗೆ ಗಾಯ
ಚೆನ್ನೈ ತಂಡದ ಯಶಸ್ವಿ ಆಟಗಾರರಲ್ಲಿ ಒಬ್ಬರಾದ ರವೀಂದ್ರ ಜಡೇಜ ಅವರು ಕೈಯ ಗಾಯದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಆಡಿಲ್ಲ. ಈ ಬಗ್ಗೆ ವಿವರಣೆ ನೀಡಿದ ನಾಯಕ ಎಂ.ಎಸ್‌. ಧೋನಿ ಅವರು ಆಲ್‌ರೌಂಡರ್‌ ಆಗಿರುವ ಜಡೇಜ ಬೆರಳ ಗಾಯಕ್ಕೆ ಒಳಗಾಗಿದ್ದಾರೆ. ಹಾಗಾಗಿ ಡೆಲ್ಲಿ ವಿರುದ್ಧ ಆಡುತ್ತಿಲ್ಲ ಎಂದರು.

ಸ್ಕೋರ್‌ ಪಟ್ಟಿ
ಚೆನ್ನೈ ಸೂಪರ್‌ ಕಿಂಗ್ಸ್‌
ಋತುರಾಜ್‌ ಗಾಯಕ್ವಾಡ್‌ ಸಿ ಪಟೇಲ್‌ ಬಿ ನೋರ್ಜೆ 41
ಡೆವೋನ್‌ ಕಾನ್ವೆ ಸಿ ಪಂತ್‌ ಬಿ ಅಹ್ಮದ್‌ 87
ಶಿವಂ ದುಬೆ ಸಿ ವಾರ್ನರ್‌ ಬಿ ಮಾರ್ಷ್‌ 32
ಅಂಬಾಟಿ ರಾಯುಡು ಸಿ ಪಟೇಲ್‌ ಬಿ ಅಹ್ಮದ್‌ 5
ಎಂಎಸ್‌ ಧೋನಿ ಔಟಾಗದೆ 21
ಮೊಯಿನ್‌ ಅಲಿ ಸಿ ವಾರ್ನರ್‌ ಬಿ ನೋರ್ಜೆ 9
ರಾಬಿನ್‌ ಉತ್ತಪ್ಪ ಸಿ ಬದಲಿಗ ಬಿ ನೋರ್ಜೆ 0
ಡ್ವೇನ್‌ ಬ್ರಾವೊ ಔಟಾಗದೆ 1
ಇತರ: 12
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 208
ವಿಕೆಟ್‌ ಪತನ: 1-110, 2-169, 3-170, 4-187, 5-203, 6-203
ಬೌಲಿಂಗ್‌: ಶಾರ್ದೂಲ್ ಠಾಕೂರ್ 3-0-38-0
ಖಲೀಲ್‌ ಅಹ್ಮದ್‌ 4-0-29-2
ಆ್ಯನ್ರಿಚ್‌ ನೋರ್ಜೆ 4-0-42-3
ಅಕ್ಷರ್‌ ಪಟೇಲ್‌ 3-0-23-0
ಕುಲದೀಪ್‌ ಯಾದವ್‌ 3-0-43-0
ಮಿಚೆಲ್‌ ಮಾರ್ಷ್‌ 3-0-34-1

ಡೆಲ್ಲಿ ಕ್ಯಾಪಿಟಲ್ಸ್‌

ಡೇವಿಡ್‌ ವಾರ್ನರ್‌ ಎಲ್‌ಬಿಡಬ್ಲ್ಯು ಬಿ ತೀಕ್ಷಣ 19
ಶ್ರೀಕರ್‌ ಭರತ್‌ ಸಿ ಅಲಿ ಬಿ ಸಿಂಗ್‌ 8
ಮಿಚೆಲ್‌ ಮಾರ್ಷ್‌ ಸಿ ಗಾಯಕ್ವಾಡ್‌ ಬಿ ಅಲಿ 25
ರಿಷಬ್‌ ಪಂತ್‌ ಬಿ ಅಲಿ 21
ಪೊವೆಲ್‌ ಸಿ ಧೋನಿ ಬಿ ಮುಕೇಶ್‌ 3
ರಿಪಾಲ್‌ ಪಟೇಲ್‌ ಸಿ ಕಾನ್ವೆ ಬಿ ಅಲಿ 6
ಅಕ್ಷರ್‌ ಪಟೇಲ್‌ ಬಿ ಮುಕೇಶ್‌ ಚೌಧರಿ 1
ಶಾರ್ದೂಲ್ ಠಾಕೂರ್ ಸಿ ಧೋನಿ ಬಿ ಬ್ರಾವೊ 24
ಕುಲದೀಪ್‌ ಯಾದವ್‌ ಸಿ ಉತ್ತಪ್ಪ ಬಿ ಸಿಂಗ್‌ 5
ಆ್ಯನ್ರಿಚ್‌ ನೋರ್ಜೆ ಔಟಾಗದೆ 1
ಖಲೀಲ್‌ ಅಹ್ಮದ್‌ ಬಿ ಬ್ರಾವೊ 0
ಇತರ: 4
ಒಟ್ಟು (17.4 ಓವರ್‌ಗಳಲ್ಲಿ ಆಲೌಟ್‌) 117
ವಿಕೆಟ್‌ ಪತನ: 1-16, 2-36, 3-72, 4-75, 5-81, 6-82, 7-85, 8-99, 9-117
ಬೌಲಿಂಗ್‌: ಮುಕೇಶ್‌ ಚೌಧರಿ 3-0-22-2
ಸಿಮ್ರಾನ್‌ಜಿತ್‌ ಸಿಂಗ್‌ 4-0-27-2
ಮಹೀಶ್‌ ತೀಕ್ಷಣ 4-0-29-1
ಡ್ವೇನ್‌ ಬ್ರಾವೊ 2.4-0-24-2
ಮೊಯಿನ್‌ ಅಲಿ 4-0-13-3
ಪಂದ್ಯಶ್ರೇಷ್ಠ: ಡೆವೋನ್‌ ಕಾನ್ವೆ

Advertisement

Udayavani is now on Telegram. Click here to join our channel and stay updated with the latest news.

Next