Advertisement

ಐಪಿಎಲ್ ಲೀಗ್ ಹಂತಕ್ಕೆ ಹೊಸ ನಿಯಮ: 10 ತಂಡಗಳನ್ನು ಎರಡು ಗುಂಪು ಮಾಡಿದ ಬಿಸಿಸಿಐ

04:23 PM Feb 25, 2022 | Team Udayavani |

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಸೀಸನ್ ಮಾರ್ಚ್ 26 ರಂದು ನಡೆಯಲಿದೆ ಮತ್ತು ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಘೋಷಿಸಿದೆ.

Advertisement

2022ರ ಐಪಿಎಲ್ 10 ತಂಡಗಳ ಸೀಸನ್ ಆಗಿರಲಿದ್ದು, 74 ಪಂದ್ಯಗಳು ನಡೆಯಲಿದೆ. ಮುಂಬೈ ಮತ್ತು ಪುಣೆಯ ನಾಲ್ಕು ಸ್ಥಳಗಳಲ್ಲಿ 70 ಲೀಗ್ ಹಂತದ ಪಂದ್ಯಗಳು ನಡೆಯಲಿದೆ.

ಗುರುವಾರ ವರ್ಚುವಲ್ ಆಗಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಪಿಎಲ್ 2022 ರ ವೇಳಾಪಟ್ಟಿಯನ್ನು ದೃಢಪಡಿಸಿದ್ದಾರೆ.

“ಐಪಿಎಲ್ 2022 ಅನ್ನು ಜೈವಿಕ-ಸುರಕ್ಷಿತ ವಾತಾವರಣದಲ್ಲಿ ಆಡಲಾಗುವುದು. ಹೀಗಾಗಿ ಕೇವಲ ಎರಡು ಆತಿಥೇಯ ನಗರಗಳನ್ನು ಆಯ್ಕೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. “ಕೋವಿಡ್ -19 ಸೋಂಕಿನ ಹರಡದಂತೆ ತಡೆಯಲು ವಿಮಾನ ಪ್ರಯಾಣವನ್ನು ತಪ್ಪಿಸಲು ಮುಂಬೈ ಮತ್ತು ಪುಣೆಯಲ್ಲಿ ಕೂಟ ನಡೆಸಲಾಗುವುದು” ಎಂದು ಬಿಸಿಸಿಐ ಹೇಳಿದೆ.

10 ತಂಡಗಳು ಒಟ್ಟು 14 ಲೀಗ್ ಪಂದ್ಯಗಳನ್ನು (7 ತವರಿನ ಪಂದ್ಯಗಳು ಮತ್ತು 7 ಹೊರಗಿನ ಪಂದ್ಯಗಳು) ಒಟ್ಟು 70 ಲೀಗ್ ಪಂದ್ಯಗಳನ್ನು ಆಡುತ್ತವೆ. ನಂತರ 4 ಪ್ಲೇಆಫ್ ಪಂದ್ಯಗಳು ನಡೆಯಲಿದೆ. ಪ್ರತಿ ತಂಡವು ಐದು ತಂಡಗಳನ್ನು ಎರಡು ಬಾರಿ ಮತ್ತು ಉಳಿದ ನಾಲ್ಕು ತಂಡಗಳನ್ನು ಒಮ್ಮೆ ಮಾತ್ರ ಎದುರಿಸಲಿದೆ.

Advertisement

ಇದನ್ನೂ ಓದಿ:ಯುದ್ಧದ ನಡುವೆಯೂ ರಷ್ಯಾಗೆ ಸಿಹಿ ಸುದ್ದಿ ನೀಡಿದ ಡೇನಿಯಲ್ ಮೆಡ್ವೆಡೇವ್

ಪ್ಲೇ-ಆಫ್ ಮತ್ತು ಫೈನಲ್‌ನ ಸ್ಥಳಗಳನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಬಿಸಿಸಿಐ ಸೇರಿಸಲಾಗಿದೆ.

10 ತಂಡಗಳನ್ನು ತಲಾ 5ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗ್ರೂಪ್ ಎ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗ್ರೂಪ್ ಬಿ ಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನದಲ್ಲಿದೆ. ಇದನ್ನು ಐಪಿಎಲ್ ಚಾಂಪಿಯನ್‌ ಶಿಪ್‌ ಗಳನ್ನು ಗೆದ್ದ ಸಂಖ್ಯೆ ಮತ್ತು ತಂಡಗಳು ಫೈನಲ್ ಪ್ರವೇಶಿಸಿದ ಕೊನೆಯ ದಿನಾಂಕವನ್ನು ಪರಿಗಣಿಸಿ ಎರಡು ಗುಂಪು ಮಾಡಲಾಗಿದೆ.

ಪ್ರತಿ ತಂಡಗಳು ವಾಂಖೆಡೆ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ತಲಾ 4 ಪಂದ್ಯಗಳು ಮತ್ತು ಬ್ರೆಬೋರ್ನ್ ಸ್ಟೇಡಿಯಂ ಮತ್ತು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ತಲಾ 3 ಪಂದ್ಯಗಳನ್ನು ಆಡಲಿದೆ.

ಪ್ರತಿ ತಂಡವು ತಮ್ಮ ಗುಂಪಿನಲ್ಲಿರುವ ತಂಡಗಳೊಂದಿಗೆ ಮತ್ತು ಎರಡನೇ ಗುಂಪಿನಲ್ಲಿ ಅದೇ ಸಾಲಿನ ತಂಡದೊಂದಿಗೆ ಎರಡು ಬಾರಿ ಆಡುತ್ತದೆ. ಎರಡನೇ ಗುಂಪಿನಲ್ಲಿರುವ ಉಳಿದ ತಂಡಗಳೊಂದಿಗೆ, ಅವರು ಋತುವಿನ ಲೀಗ್ ಹಂತದಲ್ಲಿ ಒಮ್ಮೆ ಮಾತ್ರ ಆಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next