ಈ ನೂತನ ಸ್ಟೇಡಿಯಂನಲ್ಲಿ ಈವರೆಗೆ ನಡೆದದ್ದು ಒಂದು ಐಪಿಎಲ್ ಪಂದ್ಯ ಮಾತ್ರ. ಡೆಲ್ಲಿ ವಿರುದ್ಧದ ಈ ಮುಖಾಮುಖೀಯಲ್ಲಿ ಪಂಜಾಬ್ 4 ವಿಕೆಟ್‌ಗಳ ಜಯ ಸಾಧಿಸಿತ್ತು. 63 ರನ್ ಬಾರಿಸಿದ ಸ್ಯಾಮ್ ಕರನ್ ಗೆಲುವಿನ ರೂವಾರಿಯಾಗಿದ್ದರು. ಡೆಲ್ಲಿ 9ಕ್ಕೆ 174, ಪಂಜಾಬ್ 6ಕ್ಕೆ 177 ರನ್ ಬಾರಿಸಿತ್ತು.
Advertisement
ಹೊಸಬರ ಮಿಂಚುಅನಂತರದ 2 ಪಂದ್ಯಗಳಲ್ಲಿ ಪಲ್ಟಿ ಹೊಡೆದ ಪಂಜಾಬ್, ಅಹ್ಮದಾಬಾದ್‌ನಲ್ಲಿ ಗುಜರಾತ್‌ಗೆ 3 ವಿಕೆಟ್‌ಗಳ ಆಘಾತವಿಕ್ಕುವ ಮೂಲಕ ಗೆಲುವಿನ ಹಳಿ ಏರಿದೆ. ಇಲ್ಲಿ 200 ರನ್ ಟಾರ್ಗೆಟ್ ವೇಳೆ ಮಿಂಚಿದ ಕ್ರಿಕೆಟಿಗರಿಬ್ಬರೂ ಹೊಸಬರೆಂಬುದನ್ನು ಮರೆಯುವಂತಿಲ್ಲ. ಇವರೆಂದರೆ ಕೆಳ ಕ್ರಮಾಂಕದ ಆಟಗಾರರಾದ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮ. ಪಂಜಾಬ್‌ನ ಅಗ್ರ ಸರದಿಯ ಬ್ಯಾಟರ್‌ಗಳಾದ ಧವನ್, ಬೇರ್‌ಸ್ಟೊ, ಪ್ರಭ್‌ಸಿಮ್ರಾನ್, ಲಿವಿಂಗ್‌ಸ್ಟೋನ್, ಕರನ್, ಜಿತೇಶ್, ರಝ ಅವರೆಲ್ಲ ದೊಡ್ಡ ಮೊತ್ತ ಪೇರಿಸಬೇಕಾದ ಅಗತ್ಯವಿದೆ.
ಈ ಕೂಟದಲ್ಲಿ ಸರ್ವಾಧಿಕ ಮೊತ್ತದ ಐಪಿಎಲ್ ದಾಖಲೆ ಬರೆದಿರುವ ಹೈದರಾಬಾದ್ ಅನಂತರ ಇದೇ ಮಟ್ಟದ ಬ್ಯಾಟಿಂಗ್ ಅಬ್ಬರ ತೋರ್ಪಡಿಸಿಲ್ಲ. ಆದರೆ ಇದೊಂದು ಅತ್ಯಂತ ಅಪಾಯಕಾರಿ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಹೆಡ್, ಅಭಿಷೇಕ್ ಶರ್ಮ, ಮಾರ್ಕ್‌ರಮ್, ಶಾಬಾಜ್, ನಿತೀಶ್ ರೆಡ್ಡಿ, ಇವರೆಲ್ಲರಿಗಿಂತ ಮಿಗಿಲಾಗಿ ಕೀಪರ್ ಹೆನ್ರಿಚ್ ಕ್ಲಾಸೆನ್ ಎಸ್‌ಆರ್‌ಎಚ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ.
Related Articles
Advertisement