Advertisement

ವೆಸ್ಟ್‌ ಇಂಡೀಸ್‌ ಆಲ್‌ರೌಂಡರ್‌ ಜೇಸನ್‌ ಹೋಲ್ಡರ್‌ ಸೆಳೆಯಲು ಆರ್‌ಸಿಬಿ ಯತ್ನ

10:35 PM Feb 07, 2022 | Team Udayavani |

ಬೆಂಗಳೂರು: ಪ್ರಚಂಡ ಫಾರ್ಮ್ ನಲ್ಲಿರುವ ವೆಸ್ಟ್‌ ಇಂಡೀಸ್‌ ಆಲ್‌ರೌಂಡರ್‌ ಜೇಸನ್‌ ಹೋಲ್ಡರ್‌ ಅವರನ್ನು ಸೆಳೆಯಲು ಆರ್‌ಸಿಬಿ ಗರಿಷ್ಠ ಪ್ರಯತ್ನ ಮಾಡುವ ಸಾಧ್ಯತೆ ಇದೆ.

Advertisement

ಇದಕ್ಕೂ ಮಿಗಿಲಾದ ಸುದ್ದಿಯೆಂದರೆ, ತಂಡದ ನಾಯಕತ್ವವನ್ನೂ ಹೋಲ್ಡರ್‌ಗೆ ವಹಿಸಲು ಆರ್‌ಸಿಬಿ ಸಜ್ಜಾಗಿರುವುದು. ಇದಕ್ಕಾಗಿ ಎಷ್ಟೇ ಹಣ ವ್ಯಯಿಸಲು ಫ್ರಾಂಚೈಸಿ ಸಿದ್ಧವಿದೆ ಎಂದು ವರದಿಯಾಗಿದೆ.

ಹೋಲ್ಡರ್‌ ಈಗಾಗಲೇ ಸನ್‌ರೈಸರ್, ಕೆಕೆಆರ್‌, ಚೆನ್ನೈ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಮೆಗಾ ಹರಾಜಿಗೂ ಮುನ್ನ ಸನ್‌ರೈಸರ್ ಹೋಲ್ಡರ್‌ ಅವರನ್ನು ಬಿಡುಗಡೆ ಮಾಡಿತ್ತು.

ಇದನ್ನೂ ಓದಿ:ಪ್ರೊ ಕಬಡ್ಡಿ : ಜೈಪುರ್‌ ಪಿಂಕ್‌ ಪ್ಯಾಂಥರ್ ಎಂಟನೇ ಗೆಲುವು

ಆಲ್‌ರೌಂಡರ್‌ ಆಟಗಾರನಾಗಿರುವುದರಿಂದ ಹೋಲ್ಡರ್‌ಗೆ ಬಹಳ ಬೇಡಿಕೆ ಇದೆ. ಪಿಟಿಐ ವರದಿ ಪ್ರಕಾರ, ಜೇಸನ್‌ ಹೋಲ್ಡರ್‌ ಅವರಿಗಾಗಿ ಆರ್‌ಸಿಬಿ 12 ಕೋಟಿ ರೂ. ಸುರಿಯುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next