Advertisement

IPL Auction: ಈ ಆಟಗಾರರ ಮೇಲೆ ಕಣ್ಣಿಟ್ಟಿವೆ ಹಲವು ಫ್ರಾಂಚೈಸಿಗಳು

03:25 PM Dec 05, 2023 | Team Udayavani |

ಮುಂಬೈ: ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ 2024ರ ಮಿನಿ ಹರಾಜು ನಡೆಯಲಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಹರಾಜು ಕಾರ್ಯ ನಡೆಯಲಿದೆ. ಎಲ್ಲಾ ಹತ್ತು ಫ್ರಾಂಚೈಸಿಗಳು ಬಿಡುಗಡೆಯಾದ ಮತ್ತು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಈಗಾಗಲೇ ರಿಲೀಸ್ ಮಾಡಿವೆ.

Advertisement

ಪ್ರತಿ ತಂಡಕ್ಕೆ ಅಂತಿಮ ಪರ್ಸ್ ಅನ್ನು ಬಿಡುಗಡೆ ಮಾಡಿದ ಆಟಗಾರರಿಂದ ಉತ್ಪತ್ತಿಯಾಗುವ ಹಣ ಮತ್ತು 2023 ರ ಹರಾಜಿನ ಖರ್ಚು ಮಾಡದ ಪರ್ಸ್‌ನಿಂದ ಉಳಿದ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ಕೆಲವು ಆಟಗಾರರು ಈ ಬಾರಿಯ ಮಿನಿ ಹರಾಜಿನಲ್ಲಿ ಪ್ರಮುಖ ಪಾತ್ರ ವಹಿಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೆಲವು ಆಟಗಾರರು ಈ ಬಾರಿಯ ಹರಾಜಿನಲ್ಲಿ ಉತ್ತಮ ಬೆಲೆ ಪಡೆಯುವ ಸಾಧ್ಯತೆಯಿದೆ. ಈ ಆಟಗಾರರ ಪಟ್ಟಿ ಇಲ್ಲಿದೆ.

ಟ್ರಾವಿಸ್ ಹೆಡ್

ಆಸ್ಟ್ರೇಲಿಯಾದ ವಿಶ್ವಕಪ್ ಹೀರೋ ಟ್ರಾವಿಸ್ ಹೆಡ್ ಅವರು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳ ಹಾಟ್ ಫೇವರೇಟ್ ಆಗುವ ಸಾಧ್ಯತೆಯಿದೆ. ಸ್ಫೋಟಕ ಆರಂಭಿಕ ಆಟಗಾರನನ್ನು ಹುಡುಕುತ್ತಿರುವ ತಂಡಗಳು ಅವರನ್ನು ಪಡೆಯಲು ಹೆಚ್ಚು ಬಿಡ್ ಮಾಡಬಹುದು. ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ಹೋರಾಡುವ ತಂಡಗಳಾಗಿರಬಹುದು.

Advertisement

ರಚಿನ್ ರವೀಂದ್ರ

ನ್ಯೂಜಿಲ್ಯಾಂಡ್ ತಂಡದ ಹೊಸ ಬ್ಯಾಟಿಂಗ್ ಸೆನ್ಸೇಶನ್ ರಚಿನ್ ರವೀಂದ್ರ ಅವರು ಈ ಬಾರಿ ಹಲವು ತಂಡಗಳ ಲಿಸ್ಟ್ ನಲ್ಲಿದ್ದಾರೆ. ಸ್ಪಿನ್ ಬೌಲಿಂಗ್ ಮಾಡುವ ರಚಿನ್ ಗಾಗಿ ಹಲವು ಫ್ರಾಂಚೈಸಿಗಳು ಮುಗಿಬೀಳಲಿದ್ದಾರೆ.

ಮಿಚೆಲ್ ಸ್ಟಾರ್ಕ್

ಬಹಳ ಕಾಲದ ಬಳಿಕ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಈ ಬಾರಿ ಐಪಿಎಲ್ ಆಡಲು ಸಿದ್ದರಾಗಿದ್ದಾರೆ. ಈ ಹಿಂದೆ ಆರ್ ಸಿಬಿ ಪರವಾಗಿ ಆಡಿದ್ದ ಸ್ಟಾರ್ಕ್ ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಹಣ ಪಡೆಯುವ ಆಟಗಾರರಲ್ಲಿ ಒಬ್ಬರು. ಹಲವು ತಂಡಗಳಿಗೆ ಬೌಲರ್ ನ ಅಗತ್ಯವಿದೆ. ಹೀಗಾಗಿ ಹಲವರು ಸ್ಟಾರ್ಕ್ ಹಿಂದೆ ಬೀಳಲಿದ್ದಾರೆ. ಆರ್ ಸಿಬಿ ಸಿರಾಜ್ ಹೊರತುಪಡಿಸಿ ತನ್ನ ಎಲ್ಲಾ ವೇಗಿಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಸ್ಟಾರ್ಕ್ ರನ್ನು ಮತ್ತೆ ಪಡೆಯಲು ಪ್ರಯತ್ನ ಮಾಡಬಹುದು. ಮುಂಬೈ ಇಂಡಿಯನ್ಸ್ ಅವರು ಜೋಫ್ರಾ ಆರ್ಚರ್ ಅವರನ್ನು ಬಿಡುಗಡೆ ಮಾಡಿರುವುದರಿಂದ ಸ್ಟಾರ್ಕ್ ರತ್ತ ಒಲವು ಹೊಂದಬಹುದು.

ಡ್ಯಾರೆಲ್ ಮಿಚೆಲ್

ನ್ಯೂಜಿಲ್ಯಾಂಡ್ ನ ಬಿಗ್ ಮ್ಯಾಚ್ ಆಟಗಾರ ಡ್ಯಾರೆಲ್ ಮಿಚೆಲ್ ಅವರು ಈ ಬಾರಿಯ ಹರಾಜಿನಲ್ಲಿ ಗಮನ ಸೆಳೆಯುವ ಮತ್ತೋರ್ವ ಆಟಗಾರ. ಟಿ20 ಆಟಕ್ಕೆ ಬೇಕಾದ ಕ್ವಾಲಿಟಿ ಹೊಂದಿರುವ ಮಿಚೆಲ್ ಅವರು ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸಸ್ ಹೈದರಾಬಾದ್‌ ನಂತಹ ತಂಡಗಳಿಗೆ ಉತ್ತಮ ಆಯ್ಕೆಯಾಗಿದ್ದಾರೆ. ಮಿಚೆಲ್ ಅವರು ಉತ್ತಮ ಕ್ರಿಕೆಟಿಂಗ್ ಬ್ರೈನ್ ಹೊಂದಿರುವುದರಿಂದ ನಾಯಕತ್ವದ ಆಯ್ಕೆಯೂ ಹೌದು.

ಜೆರಾಲ್ಡ್ ಕೋಟ್ಜಿ

ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೋಟ್ಜಿ ಈ ಬಾರಿಯ ಏಕದಿನ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಉತ್ತಮ ವೇಗಿಯಾಗಿರುವ ಜೆರಾಲ್ಡ್ ಕೋಟ್ಜಿ ಅವರು ಯಾವುದೇ ತಂಡಕ್ಕೆ ಉತ್ತಮ ಆಟಗಾರನಾಗಬಲ್ಲರು.

Advertisement

Udayavani is now on Telegram. Click here to join our channel and stay updated with the latest news.

Next