Advertisement

IPL ಹರಾಜು:  ಮೊದಲ ಸಲ ವಿದೇಶದಲ್ಲಿ ಕ್ರಿಕೆಟಿಗರ ಏಲಂ

11:56 PM Dec 03, 2023 | Team Udayavani |

ಹೊಸದಿಲ್ಲಿ: ಐಪಿಎಲ್‌ ಮಿನಿ ಹರಾಜು ಪ್ರಕ್ರಿಯೆ ಸಾಗರದಾಚೆ ನಡೆ ಯಲಿದೆ. ಇದಕ್ಕಾಗಿ ಬಿಸಿಸಿಐ ಆಯ್ಕೆ ಮಾಡಿರುವ ಕೇಂದ್ರ ದುಬಾೖ. ಡಿ. 19ರಂದು ಇಲ್ಲಿನ “ಕೊಕಾ ಕೋಲಾ ಅರೇನಾ’ ದಲ್ಲಿ ಕ್ರಿಕೆಟಿಗರ ಏಲಂ ನಡೆಯ ಲಿದೆ. ಇದು ವಿದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಐಪಿಎಲ್‌ ಹರಾಜು ಎಂಬುದು ವಿಶೇಷ.

Advertisement

ಮುಂದಿನ ವರ್ಷದ ಮೆಗಾ ಹರಾ ಜಿಗೂ ಮೊದಲು ನಡೆಯುವ ಕೊನೆಯ ಮಿನಿ ಹರಾಜು ಇದಾಗಿದ್ದು, 1,166 ಕ್ರಿಕೆಟಿಗರು ನೋಂದಾಯಿಸಲ್ಪಟ್ಟಿದ್ದಾರೆ. 77 ಆಟಗಾರರ ಅಗತ್ಯವಿದೆ. ಇವುಗಳಲ್ಲಿ 30 ಸ್ಥಾನ ವಿದೇಶಿಗರಿಗೆ ಮೀಸಲು. ಫ್ರಾಂಚೈಸಿಗಳ ಬಳಿ ಮಿರುವ ಒಟ್ಟು ಮೊತ್ತ 262.95 ಕೋಟಿ ರೂ.

ವಿಶ್ವಕಪ್‌ ವಿಜೇತ ಆಸ್ಟ್ರೇಲಿಯ ತಂಡದ ಟ್ರ್ಯಾವಿಸ್‌ ಹೆಡ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌ ಮೊದಲಾದವರು ಈ ಹರಾಜಿನ ಪ್ರಮುಖ ಆಕರ್ಷಣೆ ಆಗಿದ್ದಾರೆ. ಈ ಮೂವರ ಮೂಲಬೆಲೆಯೇ 2 ಕೋಟಿ ರೂ. ಆಗಿದೆ. ವಿಶ್ವಕಪ್‌ ಹೀರೋ, ನ್ಯೂಜಿಲ್ಯಾಂಡ್‌ನ‌ ರಚಿನ್‌ ರವೀಂದ್ರ ಕೂಡ ರೇಸ್‌ನಲ್ಲಿದ್ದಾರೆ. ಆದರೆ ಇವರ ಮೂಲಬೆಲೆ ಕೇವಲ 50 ಲಕ್ಷ ರೂ. ಆಗಿದೆ. ಬಹುತೇಕ ಎಲ್ಲ ಫ್ರಾಂಚೈಸಿಗಳೂ ಇವರ ಮೇಲೆ ಕಣ್ಣಿಟ್ಟಿವೆ.

ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಯಾದಿಯನ್ನು ಈಗಾಗಲೇ ಐಪಿಎಲ್‌ ಆಡಳಿತ ಮಂಡಳಿಗೆ ನೀಡಿವೆ. ನ. 26ರ ಗಡುವಿನ ತನಕ ಒಟ್ಟು 173 ಕ್ರಿಕೆಟಿಗರು ತಮ್ಮ ತಮ್ಮ ತಂಡಗಳಲ್ಲಿ ಉಳಿದುಕೊಂಡಿದ್ದಾರೆ. ತಂಡಗಳು ಬಹುತೇಕ ಆಟಗಾರರನ್ನು ಬಿಡುಗಡೆ ಮಾಡಿವೆ. ಆದರೆ “ಟ್ರೇಡ್‌ ವಿಂಡೋ’ ಡಿ. 12ರ ತನಕ ತೆರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next