Advertisement
ಈ ಸಲದ ಹರಾಜಿನಲ್ಲಿ ಫ್ರಾಂಚೈಸಿ ಗಳು ಆಲ್‌ರೌಂಡರ್‌ಗಳತ್ತ ಹೆಚ್ಚು ಗಮನ ಕೊಡುವ ಸಾಧ್ಯತೆಯೇ ಹೆಚ್ಚು. ಟಿ20ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕವೂ ತಂಡಕ್ಕೆ ನೆರವಾಗುವಂಥವರ ಅಗತ್ಯವಿದೆ. ಉಳಿದಂತೆ ಗೌತಮ್ ಗಂಭೀರ್, ಯುವರಾಜ್ ಸಿಂಗ್, ರಿಷಭ್ ಪಂತ್ ಮೇಲೆ ಕೂಡ ನಿರೀಕ್ಷೆ ಇದೆ. ಆದರೆ ಯುವಿ ಇತ್ತೀಚೆಗೆ ಫಾರ್ಮ್ ಕಳೆದುಕೊಂಡಂತಿದ್ದಾರೆ. ಹೀಗಾಗಿ ಇವರು ದೊಡ್ಡ ಮೊತ್ತಕ್ಕೆ ಹರಾಜುಗೊಳ್ಳುವ ಸಾಧ್ಯತೆ ಕಡಿಮೆ.
ಒಟ್ಟು 16 ಆಟಗಾರರ ಮೇಲೆ ಎಲ್ಲರ ಕಣ್ಣಿದೆ. ಇವರು ತಾರಾ ಆಟಗಾರರಾಗಿದ್ದು ಮೂಲಬೆಲೆ 2 ಕೋಟಿ ರೂ. ಹೊಂದಿದ್ದಾರೆ. ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಸ್ಪಿನ್ನರ್ ಆರ್.ಅಶ್ವಿನ್, ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ಮಿಚೆಲ್ ಸ್ಟಾರ್ಕ್, ಕ್ರಿಸ್ ಗೇಲ್ ಹಾಗೂ ಡ್ವೇನ್ ಬ್ರಾವೊ ಮತ್ತಿತರ ತಾರಾ ಆಟಗಾರರು ಕೂಡ ಇದ್ದಾರೆ. ಸ್ಟೋಕ್ಸ್ ಕಳೆದ ಆವೃತ್ತಿಯಲ್ಲಿ 14.5 ಕೋಟಿ ರೂ. ದಾಖಲೆ ಮೊತ್ತಕ್ಕೆ ಮಾರಾಟಗೊಂಡಿದ್ದರು. ಸ್ಪಿನ್ನರ್ ಅಶ್ವಿನ್ ಮತ್ತೆ ಚೆನ್ನೈ ತಂಡಕ್ಕೆ ಮರಳುತ್ತಾರೆಯೇ ಎನ್ನುವ ಪ್ರಶ್ನೆ ಇದೆ. ಅವರನ್ನು ಹರಾಜಿನಲ್ಲಿ ಉಳಿಸಿಕೊಳ್ಳಲಿದ್ದೇವೆ ಎನ್ನುವ ಸೂಚನೆಯನ್ನು ಧೋನಿ ನೀಡಿದ್ದಾರೆ. ಕುಲದೀಪ್, ಚಾಹಲ್ ಫೇವರಿಟ್
ಟಿ20 ಬ್ಯಾಟ್ಸ್‌ಮನ್‌ಗಳ ಆಟ. ಬೌಲರ್‌ಗಳಿಗೆ ಇಲ್ಲಿ ಮೆರೆಯುವುದು ಕಷ್ಟ ಎನ್ನುವ ಮಾತಿದೆ. ಆದರೆ ಸಿಕ್ಸರ್‌ಗಳ ಮೂಲಕ ಅಬ್ಬರಿಸುತ್ತಿದ್ದ ಬ್ಯಾಟ್ಸ್‌ಮನ್‌ಗಳ ರನ್ ವೇಗಕ್ಕೆ ಕಡಿವಾಣ ಹಾಕಿದ ಸ್ಪಿನ್ ಬೌಲರ್‌ಗಳಿದ್ದರೆ ಅದು ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್. ಇವರು ಟಿ20ಯಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ. ಈ ಬಾರಿ ಹೆಚ್ಚಿನ ಮೊತ್ತಕ್ಕೆ ಮಾರಾಟಗೊಳ್ಳುವ ನಿರೀಕ್ಷೆ ಇದೆ. ಜತೆಗೆ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಕೂಡ ಫ್ರಾಂಚೈಸಿಗಳ ಫೇವರಿಟ್ ಆಗಿದ್ದಾರೆ.
Related Articles
ಎಂ.ಎಸ್.ಧೋನಿ ಈ ಸಲ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಹಿಂದೆ ಯಶಸ್ವಿ ನಾಯಕರಾಗಿ ಚೆನ್ನೈ ಮುನ್ನಡೆಸಿದ್ದ ಕೀರ್ತಿ ಧೋನಿಗಿದೆ. ಮಾಲಿಕರ ಬೆಟ್ಟಿಂಗ್ ಪ್ರಕರಣದಿಂದ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ವಾಪಸ್ ಆಗಿದೆ. ಚೆನ್ನೈಮೇಲೆ ನಿರೀಕ್ಷೆಗಳ ಮಹಾಪೂರವೇ ಇದೆ. ಸ್ಪಿನ್ನರ್ ಅಶ್ವಿನ್ ಜತೆಗೆ ಆಲ್‌ರೌಂಡರ್ ಡ್ವೇನ್ ಬ್ರಾವೋ ಅವರನ್ನೂ ತಂಡದಲ್ಲಿ ಉಳಿಸಿಕೊಳ್ಳುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆರ್‌ಟಿಎಂ ಉಪಯೋಗಿಸಿ ಬ್ರಾವೊ ಖರೀದಿಸುವ ಸಾಧ್ಯತೆ ಹೆಚ್ಚಿದೆ.
Advertisement
ದಿಲ್ಲಿ ಪಾಲಾಗುತ್ತಾರೆಯೇ ಗಂಭೀರ್?ಗೌತಮ್ ಗಂಭೀರ್ ಹಿಂದಿನ ಆವೃತ್ತಿಗಳಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ನೇತೃತ್ವದ ಕೋಲ್ಕತಾ ನೈಟ್‌ರೈಡರ್ ತಂಡದಲ್ಲಿ ಆಡಿದ್ದರು. ಈ ಸಲ ಅವರನ್ನು ಕೆಕೆಆರ್ ತಂಡ ಉಳಿಸಿಕೊಳ್ಳುವುದಿಲ್ಲ ಎಂದು ಖಚಿತವಾಗಿದೆ. ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಗಂಭೀರ್ ಅವರನ್ನು ಖರೀದಿಸುವ ಚಿಂತನೆ ನಡೆಸಿದೆ ಎನ್ನಲಾಗಿದೆ. ಫ್ರಾಂಚೈಸಿಗಳ ಬಳಿ ಉಳಿದ ಹಣ