Advertisement

IPL: ಬರೋಬ್ಬರಿ 6 ವರ್ಷಗಳ ಬಳಿಕ ವಿಶ್ವಕಪ್‌ ಹೀರೋ ಹೆಡ್‌ ಆಟ

12:32 AM Mar 18, 2024 | Team Udayavani |

ಹೈದರಾಬಾದ್‌: ಆಸ್ಟ್ರೇ ಲಿಯದ ಏಕದಿನ ವಿಶ್ವಕಪ್‌ ಗೆಲುವಿನ ಹೀರೋ ಟ್ರ್ಯಾವಿಸ್‌ ಹೆಡ್‌ ಬರೋಬ್ಬರಿ 6 ವರ್ಷಗಳ ಬಳಿಕ ಐಪಿಎಲ್‌ ಆಡಲು ಸಜ್ಜಾಗಿದ್ದಾರೆ. ಅವರು ಕಳೆದ ಹರಾಜಿನಲ್ಲಿ ಸನ್‌ರೈಸರ್ ಹೈದರಾಬಾದ್‌ ಪಾಲಾಗಿದ್ದು, ವಿಶ್ವಕಪ್‌ ವಿಜೇತ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಕೈಕೆಳಗೆ ಆಡಲಿದ್ದಾರೆ. ತಂಡವನ್ನು ಹೊಸ ಎತ್ತರಕ್ಕೆ ಏರಿಸಬೇಕೆಂಬ ಆಶಯದೊಂದಿಗೆ ಹೈದರಾಬಾದ್‌ಗೆ ಬಂದಿಳಿದಿದ್ದಾರೆ.

Advertisement

ಟ್ರ್ಯಾವಿಸ್‌ ಹೆಡ್‌ 2017ರ ಬಳಿಕ ಮೊದಲ ಬಾರಿಗೆ ಐಪಿಎಲ್‌ ಆಡುತ್ತಿ ದ್ದಾರೆ. ಅಂದು ಆರ್‌ಸಿಬಿ ತಂಡದ ಸದಸ್ಯರಾಗಿದ್ದರು. “ಐಪಿಎಲ್‌ಗೆ ಮರಳಿದ್ದಕ್ಕೆ ಖುಷಿ ಆಗುತ್ತಿದೆ. ಅತ್ಯುತ್ತಮ ಋತುವೊಂದನ್ನು ಎದುರು ನೋಡುತ್ತಿದ್ದೇನೆ. ಆರೇಂಜ್‌ ಆರ್ಮಿ ಕುರಿತು ಅನೇಕ ಅದ್ಭುತ ಸಂಗತಿಗಳನ್ನು ಕೇಳಿದ್ದೇನೆ. ತಂಡ ಶ್ರೇಷ್ಠ ಮಟ್ಟದ್ದಾಗಿದೆ. ನಾನೂ ತಂಡಕ್ಕಾಗಿ ಸಾಕಷ್ಟು ರನ್‌ ಗಳಿಸಬಲ್ಲೆ ಎಂಬ ವಿಶ್ವಾಸ ಹೊಂದಿದ್ದೇನೆ. ಭಾರೀ ಸಂಖ್ಯೆ ವೀಕ್ಷಕರ ಸಮ್ಮುಖದಲ್ಲಿ ಆಡಲು ಕಾತರಗೊಂಡಿದ್ದೇನೆ. ನಮ್ಮ ಪಾಲಿಗೆ ಇದೊಂದು ಯಶಸ್ವಿ ಋತು ಆಗಲಿದೆ ಎಂಬ ನಂಬಿಕೆ ನನ್ನದು. ತಂಡವನ್ನು ನೂತನ ಎತ್ತರಕ್ಕೆ ಏರಿಸಬೇಕಿದೆ’ ಎಂಬುದಾಗಿ ಎಡಗೈ ಆರಂಭಕಾರ ಟ್ರ್ಯಾವಿಸ್‌ ಹೆಡ್‌ ಹೇಳಿದ್ದಾರೆ.

ಪ್ರಸಕ್ತ ಋತುವಿನಲ್ಲಿ ಪ್ಯಾಟ್‌ ಕಮಿನ್ಸ್‌ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಮುನ್ನಡೆಸಲಿದ್ದಾರೆ. ಐಡನ್‌ ಮಾರ್ಕ್‌ರಮ್‌ ಬದಲು ಆಸೀಸ್‌ ಕ್ರಿಕೆಟಿಗನನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಹೈದರಾಬಾದ್‌ 2016ರಲ್ಲಿ ಡೇವಿಡ್‌ ವಾರ್ನರ್‌ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿತ್ತು. 2018ರಲ್ಲಿ ರನ್ನರ್ ಅಪ್‌ ಆಗಿತ್ತು. ಆಗ ಕೇನ್‌ ವಿಲಿಯಮ್ಸನ್‌ ನಾಯಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next