Advertisement

IPL 2025: ಮತ್ತೆ ರಾಹುಲ್‌ ದ್ರಾವಿಡ್‌ ಜತೆ ಸೇರಿದ ವಿಕ್ರಮ್‌ ರಾಥೋರ್‌

05:32 PM Sep 20, 2024 | Team Udayavani |

ಹೊಸದಿಲ್ಲಿ: ಟೀಂ ಇಂಡಿಯಾದಲ್ಲಿ ಮುಖ್ಯ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌ (Rahul Dravid) ಅವರ ಜತೆ ಬ್ಯಾಟಿಂಗ್‌ ಕೋಚ್‌ ಆಗಿದ್ದ ವಿಕ್ರಮ್‌ ರಾಥೋರ್‌ (Vikram Rathour) ಅವರು ಇದೀಗ ಮತ್ತೆ ದ್ರಾವಿಡ್‌ ಜತೆ ಸೇರಿದ್ದಾರೆ. ಹೌದು, ಐಪಿಎಲ್‌ (IPL) ಫ್ರಾಂಚೈಸಿಯಾದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡಕ್ಕೆ ವಿಕ್ರಮ್‌ ರಾಥೋರ್‌ ಅವರು ಬ್ಯಾಟಿಂಗ್‌ ಕೋಚ್‌ ಆಗಿ ನೇಮಕವಾಗಿದ್ದಾರೆ.

Advertisement

ಕೆಲ ದಿನಗಳ ಹಿಂದೆಯಷ್ಟೇ ರಾಹುಲ್‌ ದ್ರಾವಿಡ್‌ ಅವರು ರಾಜಸ್ಥಾನ್‌ ರಾಯಲ್ಸ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದರು. ಇದೀಗ ಕಳೆದ ಟಿ20 ವಿಶ್ವಕಪ್‌ ನಲ್ಲಿ ಭಾರತ ತಂಡದ ಗೆಲುವಿನಲ್ಲಿ ರಾಹುಲ್‌ ದ್ರಾವಿಡ್‌ ಜತೆ ಸಹಾಯಕವಾಗಿದ್ದ ವಿಕ್ರಮ್‌ ರಾಥೋರ್‌ ಅವರು ಮತ್ತೆ ದ್ರಾವಿಡ್‌ ಬಳಗಕ್ಕೆ ಸೇರಿದ್ದಾರೆ.

“ಹಲವು ವರ್ಷಗಳಿಂದ ವಿಕ್ರಮ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ನಂತರ, ಅವರ ತಾಂತ್ರಿಕ ಪರಿಣತಿ, ಶಾಂತ ವರ್ತನೆ ಮತ್ತು ಭಾರತೀಯ ಪರಿಸ್ಥಿತಿಗಳ ಆಳವಾದ ತಿಳುವಳಿಕೆಯು ಅವರನ್ನು ರಾಯಲ್ಸ್‌ ಗೆ ಪರಿಪೂರ್ಣವಾಗಿಸುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ” ಎಂದು ರಾಹುಲ್ ದ್ರಾವಿಡ್ ಅವರು ವಿಕ್ರಮ್ ಹೇಳಿದರು. ‌

“ಒಟ್ಟಾಗಿ, ನಾವು ಬಲವಾದ ಬಾಂಧವ್ಯವನ್ನು ನಿರ್ಮಿಸಿದ್ದೇವೆ, ಯಶಸ್ವಿಯಾಗಿ ಭಾರತಕ್ಕೆ ಮಾರ್ಗದರ್ಶನ ನೀಡಿದ್ದೇವೆ. ಅವರೊಂದಿಗೆ ಮತ್ತೆ ಒಂದಾಗಲು ನಾನು ಸಂತೋಷವಾಗಿದ್ದೇವೆ. ಯುವ ಪ್ರತಿಭೆಗಳನ್ನು ಪೋಷಿಸುವ ಮತ್ತು ಆಟಗಾರರ ಸಾಮರ್ಥ್ಯವನ್ನು ಹೆಚ್ಚಿಸುವ ಅವರ ಸಾಮರ್ಥ್ಯವು ಅಮೂಲ್ಯವಾಗಿದೆ. ನಾವು ನಮ್ಮ ತಂಡವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದ್ದೇವೆ. ಇಲ್ಲಿ ರಾಜಸ್ಥಾನ್ ರಾಯಲ್ಸ್‌ ನಲ್ಲಿ ವಿಶ್ವ ದರ್ಜೆಯ ತಂಡವನ್ನು ನಿರ್ಮಿಸುವುದನ್ನು ಮುಂದುವರಿಸಲಿದ್ದೇವೆ” ಎಂದು ರಾಹುಲ್‌ ಹೇಳಿದರು.

Advertisement

2007 ರಿಂದ, ಭಾರತವು ಟಿ20 ವಿಶ್ವಕಪ್ ಗೆದ್ದಿರಲಿಲ್ಲ. 2013 ರಿಂದ ಐಸಿಸಿ ಟ್ರೋಫಿಯನ್ನು ಅನೇಕ ಸಂದರ್ಭಗಳಲ್ಲಿ ಸಮೀಪಿಸಿದರೂ ಬರಗಾಲವನ್ನು ಎದುರಿಸಿತ್ತು. 2024ರಲ್ಲಿ ರಾಹುಲ್-‌ ರಾಥೋರ್‌ ಜೋಡಿಯ ಕೋಚಿಂಗ್‌ ನಲ್ಲಿ ಟಿ20 ವಿಶ್ವಕಪ್‌ ಗೆಲುವು ಸಾಧಿಸಿತು. ಈತನ್ಮಧ್ಯೆ, ರಾಜಸ್ಥಾನ ರಾಯಲ್ಸ್‌ ನ ಏಕೈಕ ಐಪಿಎಲ್ ಪ್ರಶಸ್ತಿಯು 2008 ರಲ್ಲಿ ಅಂದರೆ ಐಪಿಎಲ್ ನ ಮೊದಲ ಋತುವಿನಲ್ಲಿ ಬಂದಿತ್ತು. ದೀರ್ಘಕಾಲದ ನಂತರ ಮತ್ತೊಂದು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಫ್ರಾಂಚೈಸಿ ರಾಹುಲ್‌ – ರಾಥೋರ್‌ ಜತೆ ಸಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next