Advertisement
ಆದರೆ ಶನಿವಾರ ಬಿಸಿಸಿಐ ಮೂಲ ವೊಂದರಿಂದ ಹೊರಬಿದ್ದ ಸುದ್ದಿಯಂತೆ, ಹಾರ್ದಿಕ್ ಪಾಂಡ್ಯ 2024ರ ಐಪಿಎಲ್‌ನಲ್ಲೂ ಆಡುವ ಸಾಧ್ಯತೆ ಇಲ್ಲ! ಐಪಿಎಲ್ ಆರಂಭಕ್ಕೆ 3 ತಿಂಗಳಿರುವಾಗಲೇ ಪಾಂಡ್ಯ ಗೈರಿನ ಕುರಿತು ನಿಖರವಾಗಿ ಹೇಳಲು ಹೇಗೆ ಸಾಧ್ಯ? ಈ ಸುದೀರ್ಘ ಅವಧಿಯಲ್ಲೂ ಪಾಂಡ್ಯ ಅವರ ಚೇತರಿಕೆ ಅಸಾಧ್ಯವೇ? ಅವರಿಗೆ ಪಾದದ ಶಸ್ತ್ರಚಿಕಿತ್ಸೆಯ ಅಗತ್ಯ ವಿದೆಯೇ? ಎಂಬುದೆಲ್ಲ ಇಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಕಾಡುವ ಪ್ರಶ್ನೆಗಳು. ಆದರೆ ಅವರು ಸಂಪೂರ್ಣ ಫಿಟ್‌ನೆಸ್‌ಗೆ ಮರಳಲು ಎರಡರಿಂದ 3 ತಿಂಗಳ ಅಗತ್ಯ ವಿದೆ ಎಂದು ವರದಿಯೊಂದು ತಿಳಿಸಿದೆ.
ಪಾಂಡ್ಯ ಆಗಮನದಿಂದ ಮುಂಬೈ ಪಾಳೆಯದಲ್ಲಿ ಅಸಮಾಧಾನ ಹೊಗೆಯಾ ಡಿದ್ದು ರಹಸ್ಯವೇನಲ್ಲ. ರೋಹಿತ್ ಅವ ರನ್ನು ನಾಯಕತ್ವದಿಂದ ಕೆಳಗಿಳಿಸಿದ ಕಾರಣ ಮುಂಬೈ ಅಭಿಮಾನಿಗಳೂ ಗರಂ ಆಗಿದ್ದಾರೆ. ಇದೀಗ ಪಾಂಡ್ಯ ಅನ್‌ಫಿಟ್ ಎಂಬ ಸುದ್ದಿ ಮುಂಬೈ ಇಂಡಿಯನ್ಸ್‌ಗೆ ಹೇಗೆ ಟ್ವಿಸ್ಟ್ ಕೊಟ್ಟಿàತು ಎಂಬುದು ತೀವ್ರ ಕುತೂಹಲದ ಸಂಗತಿ. ನಾಯಕ ಯಾರು?
ಒಂದು ವೇಳೆ ಹಾರ್ದಿಕ್ ಪಾಂಡ್ಯ ಐಪಿಎಲ್ ಆಡದೇ ಹೋದರೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬುದು ಮುಖ್ಯ ಪ್ರಶ್ನೆ. ಮರಳಿ ರೋಹಿತ್ ಶರ್ಮ ಅವರಿಗೆ ನಾಯಕತ್ವ ನೀಡಬಹುದೇ? ಒಮ್ಮೆ ಕೆಳಗಿಳಿಸಿದ ಕಾರಣ ರೋಹಿತ್ ಪುನಃ ಜವಾಬ್ದಾರಿ ವಹಿಸಲು ಒಪ್ಪುವರೇ? ಗೊಂದಲ ಸಹಜ. ಇಲ್ಲವೇ ನಾಯಕತ್ವದ ಉಮೇದಿನಲ್ಲಿದ್ದ ಜಸ್‌ಪ್ರೀತ್ ಬುಮ್ರಾಗೆ ಈ ಜವಾಬ್ದಾರಿ ಲಭಿಸೀತು.
ಕಳೆದೆರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಹಾರ್ದಿಕ್ ಪಾಂಡ್ಯ ಅವರದು. ಅನಿರೀಕ್ಷಿತ ಹಾಗೂ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅವರನ್ನು 15 ಕೋಟಿ ರೂ. ಮೊತ್ತಕ್ಕೆ ಮುಂಬೈಗೆ ಟ್ರೇಡ್ ಮಾಡಲಾಯಿತು. ಇಷ್ಟೊಂದು ಹಣ ಸುರಿದ ಮೇಲೆ ಆಡಲು ಸಾಧ್ಯವಿಲ್ಲ ಎಂದಾದರೆ ಇದರಿಂದ ಮುಂಬೈಗೆ ಹಿನ್ನಡೆ ಖಚಿತ.