Advertisement
ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ತಂಡವು ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಸಂಭ್ರಮದಲ್ಲಿದ್ದು ಲಕ್ನೋ ವಿರುದ್ಧವೂ ಜಯಭೇರಿ ಬಾರಿಸಲು ಸನ್ನದ್ಧವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಚೆನ್ನೈ ಬಲಿಷ್ಠವಾಗಿದೆ.
Related Articles
Advertisement
ಲಕ್ನೋ ತಂಡ ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ತಂಡದ ಯುವ ವೇಗಿ ಮಾಯಾಂಕ್ ಯಾದವ್ ಗಾಯದಿಂದಾಗಿ ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಬುಧವಾರ ತರಬೇತಿ ಆರಂಭಿಸಿರುವ 21ರ ಹರೆಯದ ಯಾದವ್ ಚೆನ್ನೈ ವಿರುದ್ಧ ಆಡುವ ಸಾಧ್ಯತೆಯಿದೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಅವರು ಆಡಿದರೆ ಲಕ್ನೋ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಸ್ಪಿನ್ ವಿಭಾಗದಲ್ಲಿ ರವಿ ಬಿಷ್ಣೋಯಿ ಬಿಗು ದಾಳಿ ಸಂಘ ಟಿಸು ತ್ತಿದ್ದಾರೆ. ಆದರೆ ತಂಡದ ಬ್ಯಾಟಿಂಗ್ ಹೇಳುವಷ್ಟು ಪರಿಣಾಮಕಾರಿಯಾಗಿಲ್ಲ. ಸತತ ಮೂರು ಅರ್ಧಶತಕಗಳ ಬಳಿಕ ಕ್ವಿಂಟನ್ ಕಾಕ್ ಕಳೆದ ಮೂರು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಇಂಪ್ಯಾಕ್ಟ್ ಆಟಗಾರ ಕೃಣಾಲ್ ಪಾಂಡ್ಯ ಮಿಂಚಲಿಲ್ಲ. ನಾಯಕ ಕೆಎಲ್ ರಾಹುಲ್ ಅವರಿಂದ ಸ್ಫೋಟಕ ಆಟ ಇನ್ನಷ್ಟೇ ಬರಬೇಕಾಗಿದೆ. ಯುವ ಆಯುಷ್ ಬದೋನಿ, ನಿಕೋಲಾಸ್ ಪೂರಣ್ ಅಪಾಯಕಾರಿಯಾಗಿ ಕಾಣುತ್ತಿದ್ದಾರೆ.
ಪಿಚ್ ವರದಿ:
ಇಲ್ಲಿನ ಪಿಚ್ ನಿಧಾನಗತಿಯಿಂದ ಕೂಡಿದೆ. ಚೆಂಡು ಹಳತು ಆಗುತ್ತಿದ್ದಂತೆ ಬೌಲರ್‌ಗಳು ಪರಿಣಾಮಕಾರಿಯಾಗಿ ದಾಳಿ ಮಾಡಲು ಸಾಧ್ಯವಾಗುವ ಕಾರಣ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಇಲ್ಲಿನ ಪಿಚ್ ಸ್ಪಿನ್‌ಗೂ ನೆರವಾಗಲಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ ಹೆಚ್ಚಿನ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಆರು ಪಂದ್ಯಗಳಲ್ಲಿ ಗೆದ್ದಿದ್ದರ ಚೇಸ ಮಾಡಿದ ವೇಳೆ ಮೂರು ತಂಡಗಳು ಗೆದ್ದಿವೆ. ಹೀಗಾಗಿ ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ.