Advertisement
“ಹೋಮ್ ಕಮಿಂಗ್’ ಎಂಬುದು ಡೆಲ್ಲಿ ಪಾಲಿಗೆ ವರದಾನವಾಗೇನೂ ಆಗಲಿಲ್ಲ. ಆರಂಭದಲ್ಲೇ ಬಿಗ್ ಹಿಟ್ಟರ್‌ಗಳನ್ನು ಒಳಗೊಂಡ ಹೈದರಾಬಾದನ್ನು ತವರಲ್ಲಿ ಎದುರಿಸುವ ಅವಕಾಶ ಎದುರಾದದ್ದು ಡೆಲ್ಲಿಗೆ ಉಭಯಸಂಕಟವಾಗಿ ಪರಿಣಮಿಸಿತು. ಎ. 20ರಂದು ನಡೆದ ಈ ಮುಖಾಮುಖೀಯಲ್ಲಿ ಹೈದರಾಬಾದ್ 7ಕ್ಕೆ 266 ರನ್ ರಾಶಿ ಹಾಕಿತು. ಜವಾಬಿತ್ತ ಡೆಲ್ಲಿ 199ಕ್ಕೆ ಆಲೌಟ್ ಆಯಿತು. ಇದು 8 ಪಂದ್ಯಗಳಲ್ಲಿ ಡೆಲ್ಲಿಗೆ ಎದುರಾದ 5ನೇ ಸೋಲು. ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಗುಜರಾತ್ ವಿರುದ್ಧ ಗೆಲುವು ಸಾಧಿಸಿ ಈ ಓಟವನ್ನು ಮುಂದುವರಿಸಿಕೊಂಡು ಹೋಗಬೇಕಿದೆ.
Related Articles
Advertisement
ಗುಜರಾತ್ ಎಂಟರಲ್ಲಿ 4 ಪಂದ್ಯ ಗೆದ್ದು 6ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅವರದೇ ಅಂಗಳದಲ್ಲಿ 3 ವಿಕೆಟ್ ಗೆಲುವು ಸಾಧಿಸಿದ ಉತ್ಸಾಹ ಗುಜರಾತ್ ತಂಡದಲ್ಲಿ ಮನೆಮಾಡಿದೆ. ಆದರೆ ಗುಜರಾತ್ ಇನ್ನೂ ಅಪಾಯಕಾರಿಯಾಗಿ ಗೋಚರಿಸಿಲ್ಲ. ಬ್ಯಾಟಿಂಗ್ ಸರದಿಯಲ್ಲಿ ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಒಮರ್‌ಜಾಯ್, ತೆವಾಟಿಯ ಇನ್ನಿಂಗ್ಸ್ ಬೆಳೆಸುವ ಜತೆಗೆ ಬಿರುಸಿನ ಆಟ ಆಡಬೇಕಿದೆ.
ಬೌಲಿಂಗ್‌ನಲ್ಲಿ ಸಾಯಿ ಕಿಶೋರ್, ರಶೀದ್ ಖಾನ್, ಮೋಹಿತ್ ಶರ್ಮ, ನೂರ್ ಅಹ್ಮದ್ ಗುಜರಾತ್ ಪಾಲಿನ ಭರವಸೆಯಾಗಿದ್ದಾರೆ.