ಸಿಡ್ನಿ: ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಆಡಿ, ಬಳಿಕ ಹಲವು ಕಾರಣದಿಂದ ಐಪಿಎಲ್ ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಪೇಸರ್ ಮಿಚೆಲ್ ಸ್ಟಾರ್ಕ್ ಮತ್ತೆ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈಗ ಮುಂದಿನ ವರ್ಷ ಜೂನ್ ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ ಎಯಲ್ಲಿ ನಡೆಯುವ ಟಿ 20 ವಿಶ್ವಕಪ್ ಗೆ ಮುಂಚಿತವಾಗಿ, ಐಪಿಎಲ್ 2024 ರ ಋತುವಿಗೆ ಲಭ್ಯವಾಗಲು ಸ್ಟಾರ್ಕ್ ನಿರ್ಧರಿಸಿದ್ದಾರೆ. ವಿಶ್ವದ ನಂ. 2 ಏಕದಿನ ಬೌಲರ್ ಆಗಿರುವ ಆಸ್ಟ್ರೇಲಿಯಾದ ವೇಗಿ, ಈ ವರ್ಷದ ಕೊನೆಯಲ್ಲಿ ಐಪಿಎಲ್ 2024 ಮಿನಿ ಹರಾಜಿನಲ್ಲಿ ಭಾಗವಹಿಸುವುದಾಗಿ ಖಚಿತಪಡಿಸಿದ್ದಾರೆ.
“ಐಪಿಎಲ್ ಆಡದೆ ಎಂಟು ವರ್ಷವಾಯಿತು. ಖಂಡಿತವಾಗಿಯೂ ಮುಂದಿನ ವರ್ಷ ಐಪಿಎಲ್ ಆಡಲಿದ್ದೇನೆ” ಎಂದು ಎಡಗೈ ವೇಗಿ ಹೇಳಿದ್ದಾರೆ.
ಇದನ್ನೂ ಓದಿ:Jawan: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ʼಜವಾನ್ʼ ಹೆಚ್‌ಡಿ ಪ್ರಿಂಟ್ ಲೀಕ್
ಐಪಿಎಲ್ 2024 ಹರಾಜಿನಲ್ಲಿ ಸ್ಟಾರ್ಕ್ ಅವರನ್ನು ಫ್ರಾಂಚೈಸಿ ಖರೀದಿಸಿದರೆ, ಇದು 2015 ರ ಋತುವಿನ ನಂತರ ಐಪಿಎಲ್ ನಲ್ಲಿ ಅವರ ಮೊದಲ ಪ್ರದರ್ಶನವಾಗಲಿದೆ. ತನ್ನ 27-ಪಂದ್ಯಗಳ ಐಪಿಎಲ್ ವೃತ್ತಿಜೀವನದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 20.38 ಸರಾಸರಿಯಲ್ಲಿ 34 ವಿಕೆಟ್‌ಗಳನ್ನು ಪಡೆಯುವಲ್ಲಿ ಸ್ಟಾರ್ಕ್ ಯಶಸ್ವಿಯಾಗಿದ್ದಾರೆ. 2015ರ ಐಪಿಎಲ್ ಸ್ಟಾರ್ಕ್ ಅವರ ಅತ್ಯುತ್ತಮ ಋತುವಾಗಿದ್ದು, ಅವರು 13 ಪಂದ್ಯಗಳಲ್ಲಿ 14.55 ರ ಸರಾಸರಿಯಲ್ಲಿ 20 ವಿಕೆಟ್ ಗಳನ್ನು ಪಡೆದರು.
2018 ರಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿತ್ತು. ಆದರೆ ಗಾಯದ ಕಾರಣದಿಂದ ಅವರು ಕೂಟದಿಂದ ಹೊರನಡೆದಿದ್ದರು. ಬಳಿಕ ರಾಷ್ಟ್ರೀಯ ಪಂದ್ಯಗಳ ಒತ್ತಡದಿಂದ ಅವರು ಐಪಿಎಲ್ ನಲ್ಲಿ ಆಡದಿರಲು ನಿರ್ಧರಿಸಿದ್ದರು.