Advertisement

IPL 2024; ಮತ್ತೆ ಪದಾರ್ಪಣೆಯ ಅನುಭವ: ರಿಷಭ್‌ ಪಂತ್‌

12:32 AM Mar 14, 2024 | Team Udayavani |

ಹೊಸದಿಲ್ಲಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಷಭ್‌ ಪಂತ್‌ 14 ತಿಂಗಳ ಬಳಿಕ ಐಪಿಎಲ್‌ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗುತ್ತಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಅವರು, “ನನಗೆ ಮತ್ತೆ ಕ್ರಿಕೆಟ್‌ ಪದಾರ್ಪಣೆ ಮಾಡುತ್ತಿರುವ ಅನುಭವ ಆಗುತ್ತಿದೆ’ ಎಂದಿದ್ದಾರೆ.

Advertisement

ಐಪಿಎಲ್‌ ವಾಪಸಾತಿ ಬಗ್ಗೆ ಮಾತನಾಡಿರುವ ಪಂತ್‌, “ನನಗೆ ಉತ್ಸಾಹ ಮತ್ತು ಮುಜುಗರ ಎರಡೂ ಜತೆಯಾಗಿ ಆಗುತ್ತಿದೆ. ನಾನು ಮತ್ತೆ ಪದಾರ್ಪಣೆ ಮಾಡುತ್ತಿದ್ದೇನೆ ಎಂಬಂತೆ ಭಾಸವಾಗುತ್ತಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಮಾರ್ಚ್‌ 22ರಿಂದ ಆರಂಭಗೊಳ್ಳಲಿರುವ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಕಣಕ್ಕಿಳಿಯಲು ರಿಷಭ್‌ ಪಂತ್‌ಗೆ ಗ್ರೀನ್‌ ಸಿಗ್ನಲ್‌ ಲಭಿಸಿದೆ. ಹೀಗಾಗಿ ಮಾ. 23ರಂದು ಪಂಜಾಬ್‌ ಕಿಂಗ್ಸ್‌ ಎದುರಿನ ಡೆಲ್ಲಿಯ ಮೊದಲ ಪಂದ್ಯದಲ್ಲಿ ಪಂತ್‌ ಕಣಕ್ಕಿಳಿಯುವ ಎಲ್ಲ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next