Advertisement

IPL 2023: ಆರರಿಂದ ಮೇಲೇರಬೇಕಿದೆ ಮುಂಬೈ

12:15 AM May 21, 2023 | Team Udayavani |

ಮುಂಬಯಿ: ಐದು ಬಾರಿಯ ಚಾಂಪಿಯನ್‌, ಕಳೆದ ಸಲ ಕೊನೆಯ ಸ್ಥಾನದ ಸಂಕಟ ಅನುಭವಿಸಿದ್ದ ಮುಂಬೈ ಇಂಡಿಯನ್ಸ್‌ ಈ ಬಾರಿ ಪ್ಲೇ ಆಫ್ ರೇಸ್‌ನಲ್ಲಿ ಉಳಿದುಕೊಂಡಿದೆ. ಆದರೆ ಆರರಿಂದ ಮೇಲೆದ್ದು ಅಗ್ರ ನಾಲ್ಕರೊಳಗೆ ಬಂದು ನಿಲ್ಲುವ ಒತ್ತಡದಲ್ಲಿದೆ. ಇದಕ್ಕಿರುವುದು ಒಂದೇ ಅವಕಾಶ.

Advertisement

ರವಿವಾರ ತವರಿನ ವಾಂಖೇಡೆ ಅಂಗಳದಲ್ಲಿ ಸನ್‌ರೈಸರ್ ಹೈದ ರಾಬಾದ್‌ ವಿರುದ್ಧ ಕೊನೆಯ ಲೀಗ್‌ ಪಂದ್ಯ ಆಡಲಿರುವ ರೋಹಿತ್‌ ಪಡೆ ಇಲ್ಲಿ ದೊಡ್ಡ ಗೆಲುವನ್ನು ದಾಖಲಿಸಿದರಷ್ಟೇ ಮುನ್ನಡೆ ಸಾಧ್ಯ. ಮುಂಬೈ ರನ್‌ರೇಟ್‌ ಇನ್ನೂ ಮೈನಸ್‌ನಲ್ಲಿ ಇರುವುದರಿಂದ ಒತ್ತಡ ಹೆಚ್ಚು. ಆರ್‌ಸಿಬಿ, ರಾಜಸ್ಥಾನ್‌ ತಂಡಗಳೆರಡು ಮುಂಬೈಗೆ ಭಾರೀ ಪೈಪೋಟಿ ನೀಡುತ್ತಿವೆ.

ಮುಂಬೈ ಕಳೆದೆರಡು ಪಂದ್ಯಗಳಲ್ಲಿ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ಗುಜರಾತ್‌ ವಿರುದ್ಧ ವಾಂಖೇಡೆಯಲ್ಲಿ 5ಕ್ಕೆ 218 ರನ್‌ ಪೇರಿಸಿಯೂ ಗೆಲುವಿನ ಅಂತರ 27 ರನ್ನಿಗೆ ಸೀಮಿತಗೊಂಡಿತು. ಬಳಿಕ ಲಕ್ನೋ ವಿರುದ್ಧ ಅವರದೇ ಅಂಗಳದಲ್ಲಿ 5 ರನ್‌ ಸೋಲುಂಡಿತು. ಇಲ್ಲವಾದರೆ ಮುಂಬೈ ಈಗ ತೃತೀಯ ಸ್ಥಾನದಲ್ಲಿ ನೆಲೆಸಿರಬೇಕಿತ್ತು.

ಬೌಲರ್ ಬಹಳ ದುಬಾರಿ
ವಾಂಖೇಡೆಯಲ್ಲಿ ಮುಂಬೈ ಬೌಲರ್ ಬಹಳ ದುಬಾರಿ ಆಗುತ್ತಿ ರುವುದನ್ನು ಗಮನಿಸಬಹುದು. ಸತತ 4 ಪಂದ್ಯಗಳಲ್ಲಿ ಅದು ಎದುರಾಳಿಗೆ 200 ರನ್‌ ಬಿಟ್ಟುಕೊಟ್ಟಿತ್ತು; ಆರ್‌ಸಿಬಿ ಈ ಮೊತ್ತದಿಂದ ಒಂದೇ ರನ್‌ ಹಿಂದುಳಿದಿತ್ತು. ರವಿವಾರದ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಬೌಲಿಂಗ್‌ ಮತ್ತೆ ಕೈಕೊಟ್ಟರೆ ಬ್ಯಾಟರ್‌ಗಳು ಒತ್ತಡಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಕೂಟದಿಂದ ನಿರ್ಗಮಿ ಸಿದ್ದರಿಂದ ಹೈದರಾಬಾದ್‌ಗೆ ಇದು ಲೆಕ್ಕದ ಭರ್ತಿಯ ಪಂದ್ಯ. ಆದರೆ ಕೊನೆಯಲ್ಲೊಂದು ಜೋಶ್‌ ತೋರಿ ಗೆಲುವಿನೊಂದಿಗೆ ಗುಡ್‌ಬೈ ಹೇಳುವ ಯೋಜನೆಯಂತೂ ಇದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next