Advertisement
ಪಂಜಾಬ್ ಕಿಂಗ್ಸ್ ಕೂಡ ಮುಂಬೈಯಂತೆ 3 ಗೆಲುವು ಸಾಧಿಸಿದೆಯಾದರೂ ಇದಕ್ಕಾಗಿ 6 ಪಂದ್ಯಗಳನ್ನಾಡಿದೆ. ಮುಂಬೈ ಆಡಿದ್ದು 5 ಪಂದ್ಯ ಮಾತ್ರ. ಅಲ್ಲದೇ ಒಂದು ದಿನದ ಹಿಂದಷ್ಟೇ ತವರಿನ ಮೊಹಾಲಿ ಅಂಗಳದಲ್ಲಿ ಪಂಜಾಬ್ ಪಡೆ ಆರ್‌ಸಿಬಿಗೆ 24 ರನ್ನುಗಳಿಂದ ಸೋತ ಆಘಾತದಲ್ಲಿದೆ.
ಮುಂಬೈ ಒಮ್ಮೆ ಗೆಲುವಿನ ಹಳಿ ಏರಿತೆಂದರೆ ಅಷ್ಟು ಸುಲಭದಲ್ಲಿ ಜಾರದು. ಅದರಲ್ಲೂ ತವರಿನ ಅಂಗಳದಲ್ಲಿ ಗೆಲುವಿನ ರುಚಿ ಸಿಕ್ಕಿದೆ. ನಾಯಕ ರೋಹಿತ್ ಶರ್ಮ-ಇಶಾನ್ ಕಿಶನ್ ಬಿರುಸಿನ ಆರಂಭ ಒದಗಿಸುತ್ತಿದ್ದಾರೆ. ಹತ್ತರ ಸರಾಸರಿಯಲ್ಲಿ ರನ್ ಹರಿದು ಬರುತ್ತಿದೆ. ತಿಲಕ್ ವರ್ಮ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿದ್ದಾರೆ. ವಿದೇಶಿ ಜೋಡಿ ಕ್ಯಾಮರಾನ್ ಗ್ರೀನ್-ಟಿಮ್ ಡೇವಿಡ್ ಕಳೆದ ಮೂರೂ ಪಂದ್ಯಗಳಲ್ಲಿ ಮಿಂಚಿರುವುದನ್ನು ಮರೆಯುವಂತಿಲ್ಲ. ಸೂರ್ಯಕುಮಾರ್ ಮಾತ್ರ ಇನ್ನಷ್ಟು ಪ್ರಖರಗೊಳ್ಳಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ಜೂನಿಯರ್ ತೆಂಡುಲ್ಕರ್ ಉತ್ತಮ ಭರವಸೆ ಮೂಡಿಸುತ್ತಿದ್ದಾರೆ. ಜೋಫ್ರಾ ಆರ್ಚರ್ ಗೈರಲ್ಲಿ ಬೆಹ್ರೆಂಡ್ರಾಫ್, ರಿಲೀ ಮೆರೆಡಿತ್ ಜವಾಬ್ದಾರಿ ಹೊರುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ಪೀಯೂಷ್ ಚಾವ್ಲಾ ಅಚ್ಚುಕಟ್ಟು ಪ್ರದರ್ಶನ ನೀಡುತ್ತ ಬಂದಿದ್ದಾರೆ. ಕಾಡುತ್ತಿದೆ ಧವನ್ ಗೈರು
ಉತ್ತಮ ಫಾರ್ಮ್ನಲ್ಲಿದ್ದ ನಾಯಕ ಶಿಖರ್ ಧವನ್ ಭುಜದ ನೋವಿಗೆ ಸಿಲುಕಿರುವುದು ಪಂಜಾಬ್‌ಗ ಎದುರಾಗಿರುವ ಮತ್ತೂಂದು ಸಮಸ್ಯೆ. ಧವನ್ ಶನಿವಾರದ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಅವರು ಸಂಪೂರ್ಣ ಫಿಟ್‌ನೆಸ್ ಸಂಪಾದಿಸಲು ಇನ್ನೂ 2-3 ದಿನ ಬೇಕಾಗಿದೆ ಎಂಬುದಾಗಿ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಟ್ರೆವರ್ ಗೊನ್ಸಾಲ್ವೆಸ್ ಹೇಳಿದ್ದಾರೆ.