Advertisement
ಇಷ್ಟರವರೆಗಿನ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಆಟಗಾರರಾದ ಕೊಹ್ಲಿ, ನಾಯಕ ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಅವರು ಭರ್ಜರಿಯಾಗಿ ಆಡುತ್ತಿದ್ದಾರೆ. ಆವರ ಆಟದ ಉತ್ಸಾಹ, ವೇಗವನ್ನು ಮುಂದುವರಿಸಿಕೊಂಡು ಹೋಗಲು ತಂಡ ಬಹಳಷ್ಟು ಒದ್ದಾಡುತ್ತಿದೆ. ಈ ನಿಟ್ಟಿನಲ್ಲಿ ಮಧ್ಯಮ ಕ್ರಮಾಂಕದ ಆಟಗಾರರು ಪ್ರಯತ್ನಿಸಬೇಕಾಗಿದೆ. ದಿನೇಶ್ ಕಾರ್ತಿಕ್ ಸಹಿತ ಇತರ ಆಟಗಾರರ ವೈಫಲ್ಯ ಆರ್‌ಸಿಬಿಯ ಚಿಂತೆಗೆ ಕಾರಣವಾಗಿದೆ. ಕಾರ್ತಿಕ್ ಅವರಲ್ಲದೇ ಮಹಿಪಾಲ್ ಲೊನ್ರೋರ್, ಶಾಬಾಜ್ ಅಹ್ಮದ್ ಮಿಂಚುವುದು ಅನಿವಾರ್ಯವಾಗಿದೆ.
Related Articles
ಪಂಜಾಬ್ ವಿರುದ್ಧ ಬೃಹತ್ ಮೊತ್ತ ಪೇರಿಸಿದ್ದ ಲಕ್ನೋ ತಂಡವು ಆರ್‌ಸಿಬಿ ವಿರುದ್ಧವೂ ಇದೇ ಉತ್ಸಾಹದಲ್ಲಿ ಬ್ಯಾಟಿಂಗ್ ಪ್ರದರ್ಶಿಸುವ ಆತ್ಮವಿಶ್ವಾಸದಲ್ಲಿದೆ. ಕೈಲ್ ಮೇಯರ್, ಕೃಣಾಲ್ ಪಾಂಡ್ಯ, ಸ್ಟೋಯಿನಿಸ್, ನಿಕೋಲಾಸ್ ಪೂರಣ್, ಆಯುಷ್ ಬಧೋನಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ರಾಹುಲ್ ಪಡೆ ಗೆಲುವಿನ ಉತ್ಸಾಹವನ್ನು ಮುಂದುವರಿಸಲು ಪ್ರಯತ್ನಿಸಲಿದೆ.
Advertisement
ತಲಾ ಎಂಟು ಪಂದ್ಯಈ ಐಪಿಎಲ್‌ನಲ್ಲಿ ಉಭಯ ತಂಡಗಳು ಇಷ್ಟರವರೆಗೆ ತಲಾ ಎಂಟು ಪಂದ್ಯಗಳನ್ನು ಆಡಿದ್ದು ಲಕ್ನೋ ಐದರಲ್ಲಿ ಮತ್ತು ಬೆಂಗಳೂರು ನಾಲ್ಕರಲ್ಲಿ ಜಯ ಸಾಧಿಸಿದೆ. ಸದ್ಯ ಹತ್ತಂಕ ಹೊಂದಿರುವ ಲಕ್ನೋ ಭಾರೀ ಉತ್ಸಾಹದಲ್ಲಿದೆ. ಪಂಜಾಬ್ ವಿರುದ್ಧ ಈ ಐಪಿಎಲ್‌ನ ಬೃಹತ್ ಮೊತ್ತ (5ಕ್ಕೆ 257) ಪೇರಿಸಿದ ಲಕ್ನೋ ಭರ್ಜರಿ ಫಾರ್ಮ್ನಲ್ಲಿದೆ.
ಲಕ್ನೋ ಮತ್ತು ಆರ್‌ಸಿಬಿ ಇಷ್ಟರವರೆಗೆ ಮೂರು ಬಾರಿ ಮುಖಾಮುಖೀಯಾಗಿದ್ದು ಒಮ್ಮೆ ಲಕ್ನೋ ಜಯ ಸಾಧಿಸಿದೆ. ಆರ್‌ಸಿಬಿ ಎರಡು ಬಾರಿ ಗೆದ್ದಿದೆ. ಇದರಲ್ಲಿ 2022ರ ಎಲಿಮಿನೇಟರ್ ಪಂದ್ಯದ ಫಲಿತಾಂಶವೂ ಸೇರಿದೆ.