Advertisement

IPL 2023: ಡೆಲ್ಲಿಗೆ ಅದೃಷ್ಟ ತಂದ ಇಶಾಂತ್‌ ಶರ್ಮಾ

12:25 AM Apr 22, 2023 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾದ ಮಾಜಿ ವೇಗಿ ಇಶಾಂತ್‌ ಶರ್ಮ ಮತ್ತೆ ಸುದ್ದಿಯಲ್ಲಿದ್ದಾರೆ. ಇವರ ಪುನರಾಗಮನ ಎನ್ನುವುದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅದೃಷ್ಟವನ್ನು ತಂದಿತ್ತಿದೆ. ಸತತ 5 ಪಂದ್ಯಗಳಲ್ಲಿ ಮುಗ್ಗರಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಡೆಲ್ಲಿ ಗುರುವಾರ ರಾತ್ರಿ ಕೆಕೆಆರ್‌ಗೆ 4 ವಿಕೆಟ್‌ಗಳ ಸೋಲುಣಿಸುವ ಮೂಲಕ ಪ್ರಸಕ್ತ ಕೂಟದಲ್ಲಿ ಮೊದಲ ಗೆಲುವು ಕಂಡಿತು.

Advertisement

ಬರೋಬ್ಬರಿ 717 ದಿನಗಳ ಐಪಿಎಲ್‌ ಆಡಲಿಳಿದ ಇಶಾಂತ್‌ ಶರ್ಮ 4 ಓವರ್‌ಗಳಲ್ಲಿ ಕೇವಲ 19 ರನ್‌ ನೀಡಿ 2 ವಿಕೆಟ್‌ ಕೆಡವಿ ಮಿಂಚಿದರು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಕುರಿತು ಪ್ರತಿಕ್ರಿಯಿಸಿದ ಡೆಲ್ಲಿ ನಾಯಕ ಡೇವಿಡ್‌ ವಾರ್ನರ್‌, “ಇಶಾಂತ್‌ ಶರ್ಮ ಅನಾರೋಗ್ಯದಿಂದ ಚೇತರಿಸಿಕೊಂದು ಇಂಥದೊಂದು ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿರುವುದು ಸಾಮಾನ್ಯ ಸಂಗತಿಯಲ್ಲ. ಹ್ಯಾಟ್ಸ್‌ ಆಫ್ ಇಶಾಂತ್‌…’ ಎಂದು ಪ್ರಶಂಸಿಸಿದ್ದಾರೆ.

ನನ್ನ ಸರದಿಗೆ ಕಾಯುತ್ತಿದ್ದೆ
“ನನ್ನ ಸರದಿಗಾಗಿ ಕಾಯುತ್ತ ಇದ್ದೆ. ಅವಕಾಶ ಸಿಕ್ಕಾಗ ತಂಡಕ್ಕೆ ಗೆಲುವನ್ನು ತಂದುಕೊಡುವುದೇ ನನ್ನ ಉದ್ದೇಶ. ಇಂದು ಇದು ಈಡೇರಿದೆ. ನೀವು ಎದುರಾಳಿ ಆಟಗಾರರ ವಿರುದ್ಧ ಯಾವ ಯೋಜನೆಯನ್ನು ಹಾಕಿಕೊಂಡಿದ್ದೀರಿ ಮತ್ತು ಅಂಗಳದಲ್ಲಿ ಇದನ್ನು ಎಷ್ಟರ ಮಟ್ಟಿಗೆ ಯಶಸ್ವಿಗೊಳಿಸುತ್ತೀರಿ ಎನ್ನುವುದು ಮುಖ್ಯ” ಎಂದು ಇಶಾಂತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next