Advertisement
ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಡೆಲ್ಲಿ ತಂಡವನ್ನು ಹೈರಾಣಾಗಿಸಿದೆ. ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸಫìರಾಜ್ ಖಾನ್, ರಿಲೀ ರೋಸ್ಯೂ ಅವರ ರನ್ ಬರಗಾಲದಿಂದಾಗಿ ಲಕ್ನೋ ಮತ್ತು ಗುಜರಾತ್ ಎದು ರಿನ ಎರಡೂ ಪಂದ್ಯಗಳನ್ನು ಡೆಲ್ಲಿ ಕಳೆದುಕೊಳ್ಳುವಂತಾಯಿತು. ಇವರೆ ಲ್ಲರೂ ಬಿಗ್ ಹಿಟ್ಟರ್‌ಗಳಾಗಿದ್ದು, ಇಬ್ಬರು ಕ್ರೀಸ್ ಆಕ್ರಮಿಸಿಕೊಂಡರೂ ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತ ಸಾಧ್ಯ. ಇಂಥದೊಂದು “ಬ್ಯಾಟಿಂಗ್ ಶೋ’ ಸಾಧ್ಯವಾಗದ ಹೊರತು ಡೆಲ್ಲಿಗೆ ಉಳಿಗಾಲವಿಲ್ಲ ಎಂಬುದು ಈಗಿನ ಲೆಕ್ಕಾಚಾರ.
ಆ್ಯನ್ರಿಚ್ ನೋರ್ಜೆ ಆಗಮನ ದಿಂದ ಡೆಲ್ಲಿ ಬೌಲಿಂಗ್‌ಗೆ ಬಲ ಬಂದಿದೆ ಎಂದು ಹೇಳಲು ಧೈರ್ಯ ಸಾಲದು. ಗುಜರಾತ್ ವಿರುದ್ಧ ಡೆಲ್ಲಿಗೆ ಉರು ಳಿಸಲು ಸಾಧ್ಯವಾದದ್ದು 4 ವಿಕೆಟ್ ಮಾತ್ರ! ಹಾಗೆಯೇ ಅಕ್ಷರ್ ಪಟೇಲ್‌ಗೆ ಬೌಲಿಂಗ್ ನೀಡದ ವಾರ್ನರ್ ಕ್ರಮ ಭಾರೀ ಟೀಕೆಗೆ ಗುರಿಯಾಗಿತ್ತು.
Related Articles
ಡೆಲ್ಲಿಯ ಪ್ರಮುಖ ಆಟ ಗಾರ ಮಿಚೆಲ್ ಮಾರ್ಷ್ ಮುಂದಿನ ಕೆಲವು ಪಂದ್ಯಗಳಿಂದ ಹೊರಗುಳಿ ಯಲಿದ್ದಾರೆ. ಸದ್ಯದಲ್ಲೇ ವಿವಾಹ ಬಂಧಕ್ಕೆ ಒಳಗಾಗಲಿರುವ ಅವರು ಆಸ್ಟ್ರೇಲಿಯಕ್ಕೆ ವಾಪಸಾಗಲಿದ್ದಾರೆ ಎಂದು ಡೆಲ್ಲಿ ಬೌಲಿಂಗ್ ಕೋಚ್ ಹೋಪ್ಸ್ ಹೇಳಿದ್ದಾರೆ. ಹೀಗಾಗಿ ರಾಜಸ್ಥಾನ್ ವಿರುದ್ಧ ರೋವನ್ ಪೊವೆಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
Advertisement
ರಾಜಸ್ಥಾನ್ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ಕೂಟದ ಅತ್ಯಂತ ಬಲಾಡ್ಯ ತಂಡ. ಹೈದರಾ ಬಾದ್ ವಿರುದ್ಧ 72 ರನ್ನುಗಳಿಂದ ಭರ್ಜರಿಯಾಗಿ ಗೆದ್ದಿತ್ತು. ಆದರೆ ಇದೇ ಗುವಾಹಟಿ ಅಂಗಳದಲ್ಲಿ ಪಂಜಾಬ್ ವಿರುದ್ಧ 198 ರನ್ ಚೇಸ್ ಮಾಡು ವಾಗ ಅಗ್ರ ಕ್ರಮಾಂಕದ ವೈಫಲ್ಯಕ್ಕೆ ಸಿಲುಕಿತು. ಆರ್. ಅಶ್ವಿನ್ ಅವರನ್ನು ಓಪನಿಂಗ್ ಕಳುಹಿಸಿ ಎಡವಟ್ಟು ಮಾಡಿಕೊಂಡಿತು. ಆದರೂ ಸೋಲಿನ ಅಂತರ ಐದೇ ರನ್ ಎಂಬುದನ್ನು ಗಮನಿಸಬೇಕು. ಜೈಸ್ವಾಲ್, ಬಟ್ಲರ್, ಸ್ಯಾಮ್ಸನ್, ಪಡಿಕ್ಕಲ್, ಪರಾಗ್, ಹೆಟ್‌ಮೈರ್, ಹೋಲ್ಡರ್, ಜುರೆಲ್… ಹೀಗೆ ಕೊನೆಯ ತನಕವೂ ರಾಜಸ್ಥಾನ್ ಬ್ಯಾಟಿಂಗ್ ಸರದಿ ಬಲಿಷ್ಠವಾಗಿಯೇ ಇದೆ. ಬೌಲ್ಟ್, ಅಶ್ವಿನ್, ಚಹಲ್ ಬೌಲಿಂಗ್ ವಿಭಾಗದ ಪ್ರಮುಖರು.