Advertisement
ಆದರೆ ಪಂಜಾಬ್ ಕಿಂಗ್ಸ್ ಮುಂದಿನ ಹಾದಿ ಸುಗಮವಲ್ಲ. ಅದು 11 ಪಂದ್ಯಗಳಿಂದ 10 ಅಂಕವನ್ನಷ್ಟೇ ಹೊಂದಿದೆ. ರನ್‌ರೇಟ್ ಕೂಡ ಮೈನಸ್‌ನಲ್ಲಿದೆ. ಹೀಗಾಗಿ ಮುಂದಿನ ಮೂರೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಾದ ತೀವ್ರ ಒತ್ತಡ ಮಾಯಾಂಕ್ ಅಗರ್ವಾಲ್ ಪಡೆಯ ಮೇಲಿದೆ. ಆದರೆ ಮೊದಲ ಸುತ್ತಿನಲ್ಲಿ ಆರ್‌ಸಿಬಿಯನ್ನು ಮಣಿಸಿದ ಆತ್ಮವಿಶ್ವಾಸವಂತೂ ಇದೆ.
Related Articles
Advertisement
ಸತತ 2 ಪಂದ್ಯ ಗೆಲ್ಲದ ಪಂಜಾಬ್: ಪಂಜಾಬ್‌ನ ದುರಂತವೆಂದರೆ, ಅದು ಈ ಕೂಟದಲ್ಲಿ ಸತತ 2 ಪಂದ್ಯಗಳನ್ನು ಜಯಿಸಿದ್ದೇ ಇಲ್ಲ. ಗುಜರಾತ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಬಳಿಕ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ 6 ವಿಕೆಟ್‌ಗಳಿಂದ ಎಡವಿ ಅಸ್ಥಿರ ಆಟವನ್ನು ತೆರೆದಿರಿಸಿದೆ. ಪಂಜಾಬ್ 5ಕ್ಕೆ 189 ರನ್ನುಗಳ ಬೃಹತ್ ಸ್ಕೋರ್ ದಾಖಲಿಸಿದರೂ ರಾಜಸ್ಥಾನ್ 19.4 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 190 ರನ್ ಪೇರಿಸಿ ಜಯಭೇರಿ ಮೊಳಗಿಸಿತ್ತು. ಕಾಗಿಸೊ ರಬಾಡ, ಸಂದೀಪ್ ಶರ್ಮ, ರಾಹುಲ್ ಚಹರ್, ರಿಷಿ ಧವನ್ ಅವರೆಲ್ಲ ಬೌಲಿಂಗ್‌ನಲ್ಲಿ ಘೋರ ವೈಫಲ್ಯ ಅನುಭವಿಸಿದ್ದರು. ಇವರೆಲ್ಲ ಆರ್‌ಸಿಬಿ ಬ್ಯಾಟರ್‌ಗಳಿಗೆ ನಿಯಂತ್ರಣ ಹೇರಬಲ್ಲರೇ?
ಆರ್‌ಸಿಬಿ ಸೋಲಿನ ಆರಂಭ… :
ಆರ್‌ಸಿಬಿ ಈ ಐಪಿಎಲ್ ಪಂದ್ಯಾವಳಿಯನ್ನು ಆರಂಭಿಸಿದ್ದೇ ಸೋಲಿನಿಂದ, ಹಾಗೆಯೇ ಈ ಸೋಲು ಎದುರಾದದ್ದೇ ಪಂಜಾಬ್ ವಿರುದ್ಧ!
ಅದು ಕೂಟದ ದ್ವಿತೀಯ ದಿನದ ಮುಖಾಮುಖೀ. ಆರ್‌ಸಿಬಿ 2 ವಿಕೆಟಿಗೆ 205 ರನ್ ಪೇರಿಸಿಯೂ ಈ ಪಂದ್ಯವನ್ನು 5 ವಿಕೆಟ್‌ಗಳಿಂದ ಕಳೆದುಕೊಂಡಿತು. ಪಂಜಾಬ್ 19 ಓವರ್‌ಗಳಲ್ಲಿ 5 ವಿಕೆಟಿಗೆ 208 ರನ್ ಬಾರಿಸಿ ಸ್ಮರಣೀಯ ಆರಂಭ ಪಡೆಯಿತು.
ಬೆಂಗಳೂರು ಪರ ನಾಯ ಫಾ ಡು ಪ್ಲೆಸಿಸ್ 88, ವಿರಾಟ್ ಕೊಹ್ಲಿ ಅಜೇಯ 41, ದಿನೇಶ್ ಕಾರ್ತಿಕ್ ಕೇವಲ 14 ಎಸೆತಗಳಿಂದ ಅಜೇಯ 32 ರನ್ (3 ಬೌಂಡರಿ, 3 ಸಿಕ್ಸರ್) ಸಿಡಿಸಿದ್ದರು. ಚೇಸಿಂಗ್ ವೇಳೆ ಪಂಜಾಬ್ ಸರದಿಯಲ್ಲಿ ಯಾರಿಂದಲೂ ದೊಡ್ಡ ಮೊತ್ತ ಸಂದಾಯವಾಗಲಿಲ್ಲ. ತಲಾ 43 ರನ್ ಮಾಡಿದ ಶಿಖರ್ ಧವನ್ ಮತ್ತು ಭನುಕ ರಾಜಪಕ್ಸ ಅವರದೇ ಹೆಚ್ಚಿನ ಗಳಿಕೆ. ಆದರೆ ಕೊನೆಯಲ್ಲಿ ಶಾರೂಖ್ ಖಾನ್ ಮತ್ತು ಒಡೀನ್ ಸ್ಮಿತ್ ಸಿಡಿದು ನಿಂತು ಆರ್‌ಸಿಬಿ ಗೆಲುವನ್ನು ಕಸಿದರು. ಇವರು ಮುರಿಯದ 6ನೇ ವಿಕೆಟಿಗೆ 4.1 ಓವರ್‌ಗಳಿಂದ 42 ರನ್ ಬಾರಿಸಿ ಪಂಜಾಬ್ ಜಯಭೇರಿ ಮೊಳಗಿಸಿದರು.