Advertisement

ಐಪಿಎಲ್‌ 2022: ಬೆಂಗಳೂರು ವಿರುದ್ಧ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ಗಳ ಭರ್ಜರಿ ಗೆಲುವು

12:05 AM Mar 28, 2022 | Team Udayavani |

ಮುಂಬಯಿ: ಆರಂಭಿಕರ ಉತ್ತಮ ಆಟ ಮತ್ತು ಕೊನೆ ಹಂತದಲ್ಲಿ ಒಡೀನ್‌ ಸ್ಮಿತ್‌ ಸಿಡಿಸಿದ ಸ್ಫೋಟಕ ಆಟದಿಂದಾಗಿ ಪಂಜಾಬ್‌ ಕಿಂಗ್ಸ್‌ ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ.

Advertisement

ಕೊನೆ ಹಂತದಲ್ಲಿ ಶಾರುಖ್‌ ಖಾನ್‌ ಮತ್ತು ಸ್ಮಿತ್‌ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಪಂಜಾಬ್‌ ತಂಡವು 19 ಓವರ್‌ಗಳಲ್ಲಿ 5 ವಿಕೆಟಿಗೆ 208 ರನ್‌ ಪೇರಿಸಿ ವಿಜಯಿಯಾಯಿತು. ಈ ಮೊದಲು ಆರ್‌ಸಿಬಿ 20 ಓವರ್‌ಗಳಲ್ಲಿ 2 ವಿಕೆಟಿಗೆ 205 ರನ್‌ ಗಳಿಸಿತ್ತು.

ಶಾರುಖ್‌ ಮತ್ತು ಸ್ಮಿತ್‌ ಮುರಿಯದ ಆರನೇ ವಿಕೆಟಿಗೆ 52 ರನ್‌ ಪೇರಿಸಿ ತಂಡದ ಗೆಲುವನ್ನು ಸಾರಿದರು. ಸಿರಾಜ್‌ ಎಸೆದ 18ನೇ ಓವರಿನಲ್ಲಿ ಅವರಿಬ್ಬರು ಮೂರು ಸಿಕ್ಸರ್‌ ಸಿಡಿಸಿದ್ದರು. ಸ್ಮಿತ್‌ ಕೇವಲ 8 ಎಸೆತಗಳಿಂದ 1 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 25 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಗೆಲ್ಲಲು 206 ರನ್‌ ಗಳಿಸುವ ಗುರಿ ಪಡೆದ ಪಂಜಾಬ್‌ ಕಿಂಗ್ಸ್‌ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಶಿಖರ್‌ ಧವನ್‌ ಮತ್ತು ಮಯಾಂಕ್‌ ಅಗರ್ವಾಲ್‌ ಮೊದಲ ವಿಕೆಟಿಗೆ 71 ರನ್‌ ಪೇರಿಸಿ ಬೇರ್ಪಟ್ಟರು. ಸರಾಸರಿ ಓವರೊಂದಕ್ಕೆ 10ರಂತೆ ರನ್‌ ತೆಗೆದ ಅವರಿಬ್ಬರು ಉತ್ತಮ ಅಡಿಪಾಯ ಹಾಕಿಕೊಟ್ಟರು. 7.1 ಓವರ್‌ಗಳಲ್ಲಿ 71 ರನ್‌ ತಲುಪಿದಾಗ ತಂಡ ಅಗರ್ವಾಲ್‌ ಅವರನ್ನು ಕಳೆದುಕೊಂಡಿತು. ಆಬಳಿಕ ಧವನ್‌ ಅವರನ್ನು ಸೇರಿಕೊಂಡ ಭಾನುಕ ರಾಜಪಕ್ಷ ಬಿರುಸಿನ ಆಟವಾಡಿ ತಂಡದ ಒತ್ತಡವನ್ನು ಕಡಿಮೆ ಮಾಡಿದರು.

ಮೊಹಮ್ಮದ್‌ ಸಿರಾಜ್‌ ದುಬಾರಿ
ಈ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ ದುಬಾರಿ ಆಗಿರುವುದು ಆರ್‌ಸಿಬಿ ಸೋಲಿಗೆ ಕಾರಣವೆನ್ನಬಹುದು. ತನ್ನ 4 ಓವರ್‌ಗಳ ದಾಳಿಯಲ್ಲಿ ಅವರು 14 ವೈಡ್‌ ಸೇರಿದಂತೆ 59 ರನ್‌ ಬಿಟ್ಟುಕೊಟ್ಟಿದ್ದರು. ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ ಪಡೆದಿದ್ದರೂ ಅವರ ಬೌಲಿಂಗ್‌ ತೀಕ್ಷ್ಣವಾಗಿರಲಿಲ್ಲ. ಸಿರಾಜ್‌ ತನ್ನ ನಾಲ್ಕನೇ ಓವರಿನಲ್ಲಿ ಮೂರು ಸಿಕ್ಸರ್‌ ಸಹಿತ 25 ರನ್‌ ನೀಡಿದ್ದರು.

Advertisement

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ಫಾ ಡು ಪ್ಲೆಸಿಸ್‌ ಶಾರೂಖ್‌ ಬಿ ಆರ್ಷದೀಪ್‌ 88
ಅನುಜ್‌ ರಾವತ್‌ ಬಿ ರಾಹುಲ್‌ 21
ವಿರಾಟ್‌ ಕೊಹ್ಲಿ ಔಟಾಗದೆ 41
ದಿನೇಶ್‌ ಕಾರ್ತಿಕ್‌ ಔಟಾಗದೆ 32
ಇತರ 23
ಒಟ್ಟು (2 ವಿಕೆಟಿಗೆ) 205
ವಿಕೆಟ್‌ ಪತನ: 1-50, 2-168.
ಬೌಲಿಂಗ್‌: ಸಂದೀಪ್‌ ಶರ್ಮ 4-0-37-0
ಆರ್ಷದೀಪ್‌ ಸಿಂಗ್‌ 4-0-31-1
ಒಡೀನ್‌ ಸ್ಮಿತ್‌ 4-0-52-0
ರಾಹುಲ್‌ ಚಹರ್‌ 4-0-22-1
ಹರ್‌ಪ್ರೀತ್‌ ಬ್ರಾರ್‌ 3-0-38-0
ಲಿಯಮ್‌ ಲಿವಿಂಗ್‌ಸ್ಟೋನ್‌ 1-0-14-0

ಪಂಜಾಬ್‌ ಕಿಂಗ್ಸ್‌
ಮಯಾಂಗ್‌ ಅಗರ್ವಾಲ್‌ ಸಿ ಶಾಬಾಜ್‌ ಬಿ ಹಸರಂಗ 32
ಶಿಖರ್‌ ಧವನ್‌ ಸಿ ರಾವತ್‌ ಬಿ ಪಟೇಲ್‌ 43
ಭಾನುಕ ರಾಜಪಕ್ಷ ಸಿ ಶಾಬಾಜ್‌ ಬಿ ಸಿರಾಜ್‌ 43
ಲಿಯಮ್‌ ಲಿವಿಂಗ್‌ಸ್ಟೋನ್‌ ಸಿ ರಾವತ್‌ ಬಿ ಆಕಾಶ್‌ದೀಪ್‌ 19
ರಾಜ್‌ ಬಾವ ಎಲ್‌ಬಿಡಬ್ಲ್ಯು ಬಿ ಸಿರಾಜ್‌ 0
ಶಾರುಖ್‌ ಖಾನ್‌ ಔಟಾಗದೆ 24
ಒಡೀನ್‌ ಸ್ಮಿತ್‌ ಔಟಾಗದೆ 25
ಇತರ 22
ಒಟ್ಟು (19 ಓವರ್‌ಗಳಲ್ಲಿ 5 ವಿಕೆಟಿಗೆ) 208
ವಿಕೆಟ್‌ ಪತನ: 1-71, 2-118, 3-139, 4-139, 5-156
ಬೌಲಿಂಗ್‌: ಡೇವಿಡ್‌ ವಿಲ್ಲೆ 3-0-28-0
ಮೊಹಮ್ಮದ್‌ ಸಿರಾಜ್‌ 4-0-59-2
ಶಾಬಾಜ್‌ ಅಹ್ಮದ್‌ 1-0-6-0
ಆಕಾಶ್‌ದೀಪ್‌ 3-0-38-1
ವನಿಂದು ಹಸರಂಗ 4-0-40-1
ಹರ್ಷಲ್‌ ಪಟೇಲ್‌ 4-0-36-1

ಪಂದ್ಯಶ್ರೇಷ್ಠ: ಒಡೀನ್‌ ಸ್ಮಿತ್‌

Advertisement

Udayavani is now on Telegram. Click here to join our channel and stay updated with the latest news.

Next