ಮುಂಬಯಿ: ಈ ಬಾರಿಯ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವು ಉತ್ತಮ ಆರಂಭ ಪಡೆದಿದೆ. ಇಷ್ಟರವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಎರಡಲ್ಲಿ ಗೆದ್ದಿರುವ ಕೆಕೆಆರ್ ಒಂದರಲ್ಲಿ ಸೋತಿದೆ. ಪೇಸ್ ಬೌಲಿಂಗ್‌ನಿಂದಾಗಿ ಅದರಲ್ಲಿಯೂ ಪವರ್‌ಪ್ಲೇ ಹಂತದಲ್ಲಿ ತಂಡದ ಉತ್ತಮ ನಿರ್ವಹಣೆಯಿಂದಾಗಿ ಗೆಲುವು ಸಾಧಿಸುವಂತಾಗಿದೆ.
ಪವರ್‌ಪ್ಲೇಯಲ್ಲಿ ಉಮೇಶ್ ಯಾದವ್ ನಿಖರ ದಾಳಿ ಸಂಘಟಿಸಿ ತಂಡ ಮೇಲುಗೈ ಸಾಧಿಸಲು
ಕಾರಣರಾಗಿದ್ದರು.
ಉಮೇಶ್ ಅವರ ಸಾಧನೆಯನ್ನು ಗಮನಿಸಿ ಕೆಕೆಆರ್ ತಂಡದ ಮೆಂಟರ್ ಆಗಿರುವ ಡೇವಿಡ್ ಹಸ್ಸಿ ಅವರು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಉಮೇಶ್ ಅವರನ್ನು ಆಯ್ಕೆ ಮಾಡಿರುವುದು ಒಳ್ಳೆಯದಾಗಿದೆ ಎಂದು ಹೇಳಿದ್ದಾರೆ.
ಉಮೇಶ್ ಯಾದವ್ ಅವರನ್ನು ಅವರ ಮೂಲ ಬೆಲೆಯಾದ ಎರಡು ಕೋಟಿ ರೂ. ನೀಡಿ ಕೆಕೆಆರ್ ಖರೀದಿಸಿತ್ತು.
ಆರಂಭದಲ್ಲಿಯೇ ವಿಕೆಟ್ ಉರುಳಿಸಲು ಉಮೇಶ್ ಅದ್ಭುತ ದಾಳಿ ಸಂಯೋಜಿಸುತ್ತಿದ್ದಾರೆ. ಅವರು ಮತ್ತೆ ಬೌಲಿಂಗ್ ಕೋಚ್ ಭರತ್ ಅರುಣ್ ಅವರು ಜತೆಯಾಗಿ ಅಭ್ಯಾಸ ನಡೆಸುತ್ತಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಒಟ್ಟಿಗೆ ಅಭ್ಯಾಸ ಮಾಡಿ ದಾಳಿಯ ವ್ಯೂಹದ ಬಗ್ಗೆ ಚರ್ಚಿಸುತ್ತಿದ್ದಾರೆ. ಪ್ರತಿಯೊಂದು ಪಂದ್ಯದ ಮೊದಲು ಉಮೇಶ್ ನೆಟ್‌ನಲ್ಲಿ ಕಠಿನ ಅಭ್ಯಾಸ ಮಾಡುತ್ತಿದ್ದಾರೆ. ಸಿಬಂದಿಗಳ ಪೂರ್ಣ ಬೆಂಬಲ ಸಿಕ್ಕಿರುವುದರಿಂದ ಅವರು ಯಾವುದೇ ಒತ್ತಡವಿಲ್ಲದೇ ಬೌಲಿಂಗ್ ನಡೆಸುತ್ತಾರೆ ಎಂದು ಹಸ್ಸಿ ಹೇಳಿದ್ದಾರೆ.