Advertisement

ಆರ್‌ಸಿಬಿ ಅಭ್ಯಾಸ ಪಂದ್ಯದಲ್ಲಿ ಎಬಿಡಿ ಸಿಡಿಲಬ್ಬರ

09:24 PM Sep 15, 2021 | Team Udayavani |

ಅಬುಧಾಬಿ: ಕಳೆದ ಮೇ ತಿಂಗಳಲ್ಲಿ ಐಪಿಎಲ್‌ ಸ್ಥಗಿತಗೊಂಡ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳದ ಆರ್‌ಸಿಬಿಯ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ ತಮ್ಮ ನೈಜ ರೂಪವನ್ನು ಪ್ರದರ್ಶಿಸಿದ್ದಾರೆ.

Advertisement

ಆರ್‌ಸಿಬಿ ತಂಡಗಳೆರಡರ ನಡುವಿನ ಅಭ್ಯಾಸ ಪಂದ್ಯದಲ್ಲಿ ಕೇವಲ 46 ಎಸೆತಗಳಿಂದ 104 ರನ್‌ ಬಾರಿಸಿ ಮಿಂಚಿದ್ದಾರೆ. ಈ ಸಿಡಿಲಬ್ಬರ ಬ್ಯಾಟಿಂಗ್‌ ವೇಳೆ ಅವರು 10 ಸಿಕ್ಸರ್‌ ಹಾಗೂ 7 ಬೌಂಡರಿ ಬಾರಿಸಿ ಐಪಿಎಲ್‌ ತಂಡಗಳಿಕೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದರು.

ಈ ಪಂದ್ಯ ಹರ್ಷಲ್‌ ಪಟೇಲ್‌ ಇಲೆವೆನ್‌ ಹಾಗೂ ದೇವದತ್ತ ಪಡಿಕ್ಕಲ್‌ ಇಲೆವೆನ್‌ ತಂಡಗಳ ನಡುವೆ ನಡೆದಿತ್ತು. ಎಬಿಡಿ ಅವರು ಪಟೇಲ್‌ ಇಲೆವೆನ್‌ ಪರ ಆಡಲಿಳಿದಿದ್ದರು. ಆದರೆ ಈ ಬ್ಯಾಟಿಂಗ್‌ ಆರ್ಭಟದ ಹೊರತಾಗಿಯೂ ಹರ್ಷಲ್‌ ಪಟೇಲ್‌ ತಂಡ ಸೋಲು ಕಾಣಬೇಕಾಯಿತು!

ಮೊದಲು ಬ್ಯಾಟಿಂಗ್‌ ನಡೆಸಿದ ಪಟೇಲ್‌ ತಂಡ 4 ವಿಕೆಟಿಗೆ 212 ರನ್‌ ಪೇರಿಸಿತು. ಎಬಿಡಿ ಹೊರತುಪಡಿಸಿ ಮೊಹಮ್ಮದ್‌ ಅಜರುದ್ದೀನ್‌ 43 ಎಸೆತಗಳಿಂದ 66 ರನ್‌ ಹೊಡೆದರು. ಆದರೆ ಪಡಿಕ್ಕಲ್‌ ಇಲೆವೆನ್‌ ತಂಡದ ಕೀಪರ್‌ ಕೆ.ಎಸ್‌. ಭರತ್‌ 46 ಎಸೆತಗಳಿಂದ 95 ರನ್‌ ಸಿಡಿಸಿ (4 ಸಿಕ್ಸರ್‌, 11 ಬೌಂಡರಿ) ತಂಡಕ್ಕೆ 7 ವಿಕೆಟ್‌ ಜಯ ತಂದಿತ್ತರು. ನಾಯಕ ಪಡಿಕ್ಕಲ್‌ 21 ಎಸೆತ ಎದುರಿಸಿ 36 ರನ್‌ ಹೊಡೆದರು. ಅವರ ತಂಡ ಸರಿಯಾಗಿ 20 ಓವರ್‌ಗಳಲ್ಲಿ 3 ವಿಕೆಟಿಗೆ 216 ರನ್‌ ಬಾರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next