Advertisement

ಐಪಿಎಲ್‌: ಮೊದಲ ಸುತ್ತಿಗೆ ಆಸೀಸ್‌, ಇಂಗ್ಲೆಂಡ್‌ ಆಟಗಾರರು ಗೈರು

03:18 AM Aug 17, 2020 | Hari Prasad |

ಹೊಸದಿಲ್ಲಿ: ಆಸ್ಟ್ರೇಲಿಯ ಮತ್ತು ಇಂಗ್ಲೆಂಡಿನ ಸ್ಟಾರ್‌ ಆಟಗಾರರ ನೇಕರು ಐಪಿಎಲ್‌ ಪಂದ್ಯಾವಳಿಯ ಆರಂಭಿಕ ಸುತ್ತಿನ ಕೆಲವು ಪಂದ್ಯಗಳಿಗೆ ಗೈರಾಗಲಿದ್ದಾರೆ.

Advertisement

ಐಪಿಎಲ್‌ಗ‌ೂ ಸ್ವಲ್ಪ ಮೊದಲು ಇಂಗ್ಲೆಂಡ್‌-ಆಸ್ಟ್ರೇಲಿಯ ನಡುವೆ ತಲಾ 3 ಪಂದ್ಯಗಳ ಏಕದಿನ ಮತ್ತು ಟಿ20 ಸರಣಿ ನಡೆಯಲಿರುವುದೇ ಇದಕ್ಕೆ ಕಾರಣ.

ಆಸ್ಟ್ರೇಲಿಯ ಏಕದಿನ ತಂಡದ ನಾಯಕ ಆರನ್‌ ಫಿಂಚ್‌, ಸ್ಟೀವನ್‌ ಸ್ಮಿತ್‌, ಇಂಗ್ಲೆಂಡಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಇಯಾನ್‌ ಮಾರ್ಗನ್‌, ಜೋಫ್ರ ಆರ್ಚರ್‌, ಬೆನ್‌ ಸ್ಟೋಕ್ಸ್‌ ಮೊದಲಾದವರೆಲ್ಲ ಈ ಯಾದಿಯಲ್ಲಿದ್ದಾರೆ.
ಇವರ್ಯಾರಿಗೂ ಸೆ. 26ರ ಮೊದಲು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು. 2020ರ ಐಪಿಎಲ್‌ ಸೆ. 19ರಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next