ದುಬಾಯಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಇಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ 10ನೇ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಬೆಂಗಳೂರು ತಂಡವು 20 ಓವರ್ ಗಳಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡು 201 ರನ್ ಗಳಿಸಿದೆ.
ಈ ಮೂಲಕ ಮುಂಬೈ ಇಂಡಿಯನ್ಸ್ ಗೆಲುವಿಗೆ 202 ರನ್ ಗಳ ಗುರಿ ನಿಗದಿಯಾಗಿದೆ.
ಫಿಂಚ್ (52) ಮತ್ತು ಪಡಿಕ್ಕಲ್ (54) ಅವರ ಉತ್ತಮ ಓಪನಿಂಗ್ ಜೊತೆಯಾಟ ಮತ್ತು ಸ್ಟೈಲಿಷ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅವರ ಹೊಡಿಬಡಿ ಫಿಪ್ಟೀ ನೆರವಿನಿಂದ ರಾಯಲ್ ಚಾಲೆಂಜರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಈ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
13ನೇ ಓವರಿನಲ್ಲಿ ಕ್ರೀಸಿಗಿಳಿದ ಎಬಿಡಿ ಮುಂಬೈ ಬೌಲರ್ ಗಳನ್ನು ಸಖತ್ತಾಗಿಯೇ ಕಾಡಿದರು. ಕೇವಲ 24 ಎಸೆತಗಳಿಂದ ಅಜೇಯ 55 ರನ್ ಗಳಿಸಿದ ಅವರ ಈ ಬ್ಯಾಟಿಂಗ್ ವೈಭವದಲ್ಲಿ 4 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸೇರಿತ್ತು.
ಇದನ್ನೂ ಓದಿ: ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB
Related Articles
ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಕೊಹ್ಲಿ ಪಡೆಗೆ ಬ್ಯಾಟಿಂಗ್ ಚಾಲೆಂಜ್ ನೀಡಿದರು. ಮುಂಬೈ ಬೌಲಿಂಗ್ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದ ರಾಯಲ್ ಚಾಲೆಂಜರ್ಸ್ ಓಪನಿಂಗ್ ಜೋಡಿ ದೇವದತ್ತ ಪಡಿಕ್ಕಲ್ (54) ಹಾಗೂ ಅರೋನ್ ಫಿಂಚ್ (52) ಇಬ್ಬರೂ ಅರ್ಧಶತಕ ದಾಖಲಿಸಿ ಉತ್ತಮ ಆರಂಭ ಒದಗಿಸಿದರು.
ಫಿಂಚ್ ಬಿರುಸಿನ ಆಟವಾಡಿದರೆ, ಪಡಿಕ್ಕಲ್ ಅವರಿಗೆ ಉತ್ತಮ ಬೆಂಬಲ ನೀಡಿದರು. ಈ ಜೋಡಿ ಮೊದಲ ವಿಕೆಟಿಗೆ 81 ರನ್ ಗಳನ್ನು ಕಲೆ ಹಾಕಿತು. 35 ಎಸೆತಗಳಲ್ಲಿ 52 ರನ್ ಗಳಿಸಿದ್ದ ಫಿಂಚ್ ಔಟಾಗುತ್ತಿದ್ದಂತೆ ಆಡಲು ಬಂದ ಒನ್ ಡೌನ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ 11 ಎಸೆತ ಎದುರಿಸಿ ಕೇವಲ 3 ರನ್ ಮಾಡಿ ಔಟಾದರು. ಈ ಪಂದ್ಯದಲ್ಲೂ ಕೊಹ್ಲಿ ಬ್ಯಾಟಿಂಗ್ ಅಬ್ಬರ ನೋಡುವ ಅವರ ಅಭಿಮಾನಿಗಳ ಕನಸು ನನಸಾಗದೇ ಉಳಿಯಿತು.
ಕೊಹ್ಲಿ ಔಟಾದ ಬಳಿಕ ಕ್ರೀಸಿಗೆ ಬಂದ ಎಬಿಡಿ ವಿಲಿಯರ್ಸ್ ಬಿರುಸಿನ ಆಟಕ್ಕೆ ಮನ ಮಾಡಿದರು. ಇತ್ತ ಎಬಿಡಿ ಬ್ಯಾಟ್ ಬೀಸುತ್ತಿದ್ದಂತೆ ಇನ್ನೊಂದು ಕಡೆ ಸೆಟಲ್ ಆಗಿದ್ದ ಪಡಿಕ್ಕಲ್ ಸಹ ಮುಂಬೈ ಬೌಲರ್ ಗಳಿಗೆ ಚುರುಕು ಮುಟ್ಟಿಸಲಾರಂಭಿಸಿದರು. ಈ ನಡುವೆ ಪಡಿಕ್ಕಲ್ ಈ ಕೂಟದಲ್ಲಿ ತಮ್ಮ ಎರಡನೇ ಅರ್ಧಶತಕವನ್ನು ಪೂರೈಸಿದರು.
ಫಿಂಚ್ (52) ಮತ್ತು ಪಡಿಕ್ಕಲ್ (54) ಅವರ ಉತ್ತಮ ಓಪನಿಂಗ್ ಜೊತೆಯಾಟ ಮತ್ತು ಸ್ಟೈಲಿಷ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅವರ ಅಜೇಯ ಹೊಡಿಬಡಿ ಫಿಪ್ಟೀ ನೆರವಿನಿಂದ ರಾಯಲ್ ಚಾಲೆಂಜರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. ಇನ್ನಿಂಗ್ಸ್ ಕೊನೆಯಲ್ಲಿ ಎಬಿಡಿಗೆ ಉತ್ತಮ ಸಾಥ್ ನೀಡಿದ ಶಿವಂ ದುಬೆ ಅವರು ಕೇವಲ 10 ಎಸೆತಗಳಿಂದ 27 ರನ್ ಗಳಿಸಿದರು ಇದರಲ್ಲಿ 3 ಸಿಕ್ಸರ್ ಸೇರಿತ್ತು.