Advertisement

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

12:15 AM Sep 24, 2020 | Hari Prasad |

ಅಬುಧಾಬಿ: ಬಹಳ ನಿರೀಕ್ಷೆ ಮೂಡಿಸಿದ್ದ ಘಟಾನುಘಟಿಗಳ ಹೋರಾಟ ಠುಸ್ ಪಟಾಕಿಯಾಗಿದೆ.

Advertisement

ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕೊತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಮುಖಾಮುಖಿ ಹಿಂದಿನ ಯಾವ ಪಂದ್ಯಗಳಂತೆಯೂ ರೋಚಕತೆ ಪಡೆದುಕೊಳ್ಳದೇ ಏಕಪಕ್ಷೀಯವಾಗಿ ಮುಕ್ತಾಯಗೊಂಡಿದೆ.

ಮುಂಬೈ ಇಂಡಿಯನ್ಸ್ ನೀಡಿದ 195 ರನ್ ಗಳ ಸವಾಲನ್ನು ಬೆನ್ನಟ್ಟಿದ ಕೆಕೆಆರ್ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು 146 ರನ್ ಗಳಷ್ಟನ್ನೇ ಕಲೆಹಾಕಲು ಶಕ್ತವಾಯಿತು ಮತ್ತು ಆ ಮೂಲಕ 49 ರನ್ ಗಳ ಸೋಲನ್ನು ಒಪ್ಪಿಕೊಂಡಿತು.

ಇದನ್ನೂ ಓದಿ: ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ


ಕೆಕೆಆರ್ ಪರ ಪ್ಯಾಟ್ ಕಮಿನ್ಸ್ (33) ಅವರದ್ದೇ ಗರಿಷ್ಠ ಗಳಿಕೆಯಾಗಿತ್ತು. ಕಮಿನ್ಸ್ ಕೇವಲ 12 ಎಸೆತಗಳಲ್ಲಿ 33 ರನ್ ಸಿಡಿಸಿದರು. ಕಮಿನ್ಸ್ ಹೊರತುಪಡಿಸಿದರೆ ಕಪ್ತಾನ ದಿನೇಶ್ ಕಾರ್ತಿಕ್ 30 ರನ್ ಬಾರಿಸಿದರು. ನಿತೀಶ್ ರಾಣಾ 24 ರನ್ ಮಾಡಿದರೆ, ಇಯಾನ್ ಮೋರ್ಗನ್ 16 ರನ್ ಹೊಡೆದರು.

Advertisement

ಕೊಲ್ಕೊತ್ತಾ ಪರ ಟ್ರೆಂಟ್ ಬೌಲ್ಟ್, ಪ್ಯಾಟಿನ್ಸನ್, ಬುಮ್ರಾ, ಚಾಹರ್ ತಲಾ 2 ವಿಕೆಟ್ ಪಡೆದರು. ಪೊಲಾರ್ಡ್ 1 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next