ಶಾರ್ಜಾ: ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯ ವೀಕ್ಷಕರಿಗೆ ಭರಪೂರ ಮನರಂಜನೆ ನೀಡಿ ಮುಕ್ತಾಯ ಕಂಡಿದೆ. ಅಂತಿಮವಾಗಿ ಚೆನ್ನೈ ಹೋರಾಟ ಮಾಡಿ ಸೋಲೊಪ್ಪಿಕೊಂಡಿದ್ದು,ರಾಜಸ್ಥಾನ್ ಗೆಲುವಿನ ನಗೆಬೀರಿದೆ.
ಟಾಸ್ ಸೋತು ಬ್ಯಾಟಿಂಗ್ ಗೀಳಿದ ರಾಜಸ್ಥಾನ್ ರಾಯಲ್ಸ್ ಆರಂಭದಿಂದಲೇ ಸಂಜು ಸ್ಯಾಮ್ಸನ್ ಹಾಗೂ ಸ್ಟಿವ್ ಸ್ಮಿತ್ ಜೊತೆಯಾಟ ದೊಂದಿಗೆ ಕ್ರಿಕೆಟ್ ಪ್ರಿಯರಿಗೆ ಮನರಂಜನೆ ನೀಡಿದರು. ಮೊದಲ ಇನ್ನಿಂಗ್ಸ್ ನ 18 ನೇ ಓವರ್ ನಲ್ಲಿ ಕ್ರಿಸ್ ನಲ್ಲಿದ್ದ ಟಾಮ್ ಕರನ್ ಗೆ ದೀಪಕ್ ಚಹಾರ್ ಎಸೆದ ಚೆಂಡು ಬ್ಯಾಟಿನ ತುದಿ ತಾಗಿ ಕೀಪರ್ ಎಂ.ಎಸ್.ಧೋನಿ ಕೈಗೆ ಸೇರುತ್ತದೆ. ಔಟಿನ ಮನವಿ ಮಾಡಿದ ಎಸತೆಗಾರನ ಧ್ವನಿಗೆ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಾರೆ. ದಾಂಡಿಗ ಟಾಮ್ ಕರನ್ ರಿವ್ಯೂ ಗಾಗಿ ಹೋದರೆ, ಇದ್ದ ರಿವ್ಯೂ ಬಳಸಿದ್ದರಿಂದ ಟಾಮ್ ಕರನ್ ಪೆವಿಲಿಯನ್ ಅತ್ತ ಹೋಗುತ್ತಿದ್ದರು, ಆ ಕೂಡಲೇ ಲೆಗ್ ಅಂಪೈರ್ ಮುಖ್ಯ ತೀರ್ಪುಗಾರರೊಂದಿಗೆ ಚರ್ಚಿಸಿ ಟಾಮ್ ಕರನ್ ರನ್ನು ನಿಲ್ಲುವಂತೆ ಹೇಳುತ್ತಾರೆ.
ಲೆಗ್ ಅಂಪೈರ್ ಮಾಡಿದ ಮನವಿನಿಂದ ದೀಪಕ್ ಚಹಾರ್ ಎಸತೆದಿಂದ ಧೋನಿ ಪಡೆದ ಕ್ಯಾಚ್ ನ್ನು ಮತ್ತೆ ಪರಿಶೀಲಿಸಿದಾಗ ಕ್ಯಾಚ್ ಪಡೆಯುವ ಮುನ್ನ ಚೆಂಡು ಪಿಚ್ ಆಗಿರುವುದರಿಂದ ನಿರ್ಣಯಕರು ತಮ್ಮ ತೀರ್ಮಾನವನ್ನು ಬದಲಾಯಿಸಿ ನಾಟ್ ಔಟ್ ಎಂದು ಹೇಳುತ್ತಾರೆ. ಈ ನಿರ್ಧಾರವನ್ನು ಪ್ರಶ್ನೆ ಮಾಡಿದ ಚೆನ್ನೈ ತಂಡದ ಕಪ್ತಾನ ಎಂ.ಎಸ್ ಧೋನಿ ನಿರ್ಣಾಯಕರ ಜೊತೆ ಒಂದಿಷ್ಟು ಹೊತ್ತು ನಿರ್ಧಾರದ ಕುರಿತು ಮಾತಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾರೆ. ಧೋನಿಯವರ ಇಂಥ ವರ್ತನೆ ಸದ್ಯ ಅವರ ಕೂಲ್ ಕ್ಯಾಪ್ಟನ್ ಹಣೆಪಟ್ಟಿಯನ್ನು ಪ್ರಶ್ನೆ ಮಾಡಿದಂತೆ ಇದೆ.
ಧೋನಿ ನಿರ್ಣಾಯಕರೊಂದಿಗೆ ಈ ರೀತಿಯಾಗಿ ತಾಳ್ಮೆ ಕಳೆದುಕೊಂಡು ಚರ್ಚೆ ಮಾಡಿದ್ದು ಇದೇ ಮೊದಲಲ್ಲ.2019 ರಲ್ಲಿ ರಾಜಸ್ಥಾನ್ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲೂ ಧೋನಿ ಅಂಪೈರ್ ನಿರ್ಣಾಯವನ್ನು ಪ್ರಶ್ನಿಸಿ ಮೈದಾನಕ್ಕೆ ಬಂದದ್ದನ್ನು ಸ್ಮರಿಸಿಕೊಳ್ಳಬಹುದು.
ಚೆನ್ನೈ ತಂಡಕ್ಕೆ ಅಂತಿಮ ಮೂರು ಎಸೆತದಲ್ಲಿ 8 ರನ್ ಗಳ ಅವಶ್ಯಕತೆಯಿದ್ದಾಗ ಮಿಚೆಲ್ ಸ್ಯಾಂಟ್ನರ್ ಅವರಿಗೆ ಪಂದ್ಯದ ಅಂತಿಮ ಓವರ್ ಎಸೆದ ಬೆನ್ ಸ್ಟೋಕ್ಸ್ ಅವರ ನಾಲ್ಕನೇ ಚೆಂಡು ಫುಲ್ ಟಾಸ್ ಆಗಿ ಬಿದ್ದಾಗ ಅದನ್ನು ಪಂದ್ಯದ ನಿರ್ಣಾಯಕರಲ್ಲಿ ಒಬ್ಬರಾಗಿದ್ದ ಉಲ್ಲಾಸ್ ಗಾಂಧೆ ನೋ ಬಾಲ್ಎಂದು ಸೂಚಿಸಿದ್ದರು. ಆದರೆ ಲೆಗ್ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್ ಅಂತಿಮ ನಿರ್ಧಾರದಿಂದ ಎಮ್.ಎಸ್ ಧೋನಿ ತಾಳ್ಮೆ ಕಳೆದುಕೊಂಡು ನಿರ್ಣಾಯಕರೊಂದಿಗೆ ಚರ್ಚೆ ಮಾಡಿದ್ದರು.