ಶಾರ್ಜಾ: ಪಂಜಾಬ್ ವಿರುದ್ಧ ನಿರ್ಣಾಯಕ ಪಂದ್ಯವನ್ನಾಡುತ್ತಿರುವ ಕೋಲ್ಕತಾ ನೈಟ್‌ರೈಡರ್, ಆರಂಭಕಾರ ಶುಭಮನ್ ಗಿಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಸಾಹಸದಿಂದ ಹೀನಾಯ ಕುಸಿತದಿಂದ ಪಾರಾಗಿ 9 ವಿಕೆಟಿಗೆ 149 ರನ್ ಪೇರಿಸಿದೆ.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ 19ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಗಿಲ್ ಬಹುಮೂಲ್ಯ 57 ರನ್ ಬಾರಿಸಿದರು. 45 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್, 3 ಬೌಂಡರಿ ಸೇರಿತ್ತು. ಅವರಿಗೆ ನಾಯಕ ಇಯಾನ್ ಮಾರ್ಗನ್ ಉತ್ತಮ ಬೆಂಬಲ ನೀಡಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಳ್ಳುವ ಪಂಜಾಬ್ ಕಪ್ತಾನ ಕೆ.ಎಲ್. ರಾಹುಲ್ ಅವರ ನಿರ್ಧಾರ ಮೊದಲ ಓವರಿನಿಂದಲೇ ಯಶಸ್ಸು ಪಡೆಯುತ್ತ ಹೋಯಿತು. ಗ್ಲೆನ್ ಮ್ಯಾಕ್ಸ್‌ವೆಲ್ 2ನೇ ಎಸೆತದಲ್ಲೇ ನಿತೀಶ್ ರಾಣಾ ವಿಕೆಟ್ ಹಾರಿಸಿದರು. ರಾಣಾ ಖಾತೆಯನ್ನೇ ತೆರೆದಿರಲಿಲ್ಲ.
ಮೊಹಮ್ಮದ್ ಶಮಿ ಪಂದ್ಯದ ದ್ವಿತೀಯ ಓವರಿನಲ್ಲಿ ಅವಳಿ ಆಘಾತವಿಕ್ಕಿದರು. 3 ಎಸೆತಗಳ ಅಂತರದಲ್ಲಿ ರಾಹುಲ್ ತ್ರಿಪಾಠಿ (7) ಮತ್ತು ದಿನೇಶ್ ಕಾರ್ತಿಕ್ (0) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಕೆಕೆಆರ್ 10 ರನ್ನಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು.
ಈ ಹಂತದಲ್ಲಿ ಆರಂಭಕಾರ ಶುಭಮನ್ ಗಿಲ್ ಮತ್ತು ನಾಯಕ ಇಯಾನ್ ಮಾರ್ಗನ್ 81 ರನ್ನುಗಳ ಬಿರುಸಿನ ಜತೆಯಾಟವೊಂದನ್ನು ನಡೆಸಿದರು. ತಂಡ ಚೇತರಿಸಿಕೊಳ್ಳುವ ಸೂಚನೆ ಲಭಿಸಿತು. ಆದರೆ 10ನೇ ಓವರಿನಲ್ಲಿ ರವಿ ಬಿಶ್ನೋಯಿ ಕೆಕೆಆರ್ ಕಪ್ತಾನನ ವಿಕೆಟ್ ಕಿತ್ತು ಮತ್ತೂಂದು ಸುತ್ತಿನ ಕುಸಿತಕ್ಕೆ ಮುಹೂರ್ತವಿರಿಸಿದರು. ಮಾರ್ಗನ್ ಗಳಿಕೆ 25 ಎಸೆತಗಳಿಂದ 40 ರನ್ (5 ಬೌಂಡರಿ, 2 ಸಿಕ್ಸರ್). 3ಕ್ಕೆ 91ರಲ್ಲಿದ್ದ ಕೋಲ್ಕತಾ 114ಕ್ಕೆ ತಲಪುವಷ್ಟರಲ್ಲಿ 7 ವಿಕೆಟ್ ಉದುರಿಸಿಕೊಂಡಿತು. ಬಳಿಕ ಲಾಕಿ ಫರ್ಗ್ಯುಸನ್ ಮಿಂಚಿನ ಗತಿಯಲ್ಲಿ 24 ರನ್ ಹೊಡೆದು 150ರ ಟಾರ್ಗೆಟ್ ನಿಗದಿಪಡಿಸುವಲ್ಲಿ ಯಶಸ್ವಿಯಾದರು.
ಸ್ಕೋರ್‌ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಶುಭಮನ್ ಗಿಲ್ ಸಿ ಪೂರಣ್ ಬಿ ಶಮಿ 57
ನಿತೀಶ್ ರಾಣಾ ಸಿ ಗೇಲ್ ಬಿ ಮ್ಯಾಕ್ಸ್‌ವೆಲ್ 0
ರಾಹುಲ್ ತ್ರಿಪಾಠಿ ಸಿ ರಾಹುಲ್ ಬಿ ಶಮಿ 7
ದಿನೇಶ್ ಕಾರ್ತಿಕ್ ಸಿ ರಾಹುಲ್ ಬಿ ಶಮಿ 0
ಇಯಾನ್ ಮಾರ್ಗನ್ ಸಿ ಅಶ್ವಿನ್ ಬಿ ಬಿಶ್ನೋಯಿ 40
ಸುನೀಲ್ ನಾರಾಯಣ್ ಬಿ ಜೋರ್ಡನ್ 6
ಕಮಲೇಶ್ ನಾಗರಕೋಟಿ ಬಿ ಅಶ್ವಿನ್ 6
ಪ್ಯಾಟ್ ಕಮಿನ್ಸ್ ಎಲ್‌ಬಿಡಬ್ಲ್ಯುಬಿಶ್ನೋಯಿ 1
ಲಾಕಿ ಫರ್ಗ್ಯುಸನ್ ಔಟಾಗದೆ 24
ವರುಣ್ ಚಕ್ರವರ್ತಿ ಬಿ ಜೋರ್ಡನ್ 2
ಪ್ರಸಿದ್ಧ್ ಕೃಷ್ಣ ಔಟಾಗದೆ 0
ಇತರ 6
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 149
ವಿಕೆಟ್ ಪತನ: 1-1, 2-10, 3-10, 4-91, 5-101, 6-113, 7-114, 8-136, 9-149.
ಬೌಲಿಂಗ್:
ಗ್ಲೆನ್ ಮ್ಯಾಕ್ಸ್‌ವೆಲ್ 2-0-21-1
ಮೊಹಮ್ಮದ್ ಶಮಿ 4-0-35-3
ಆರ್ಶ್‌ದೀಪ್ ಸಿಂಗ್ 2-0-18-0
ಮುರುಗನ್ ಅಶ್ವಿನ್ 4-0-27-1
ಕ್ರಿಸ್ ಜೋರ್ಡನ್ 4-0-25-2
ರವಿ ಬಿಶ್ನೋಯಿ 4-1-20-2