Advertisement

ಐಪಿಎಲ್‌: ವರುಣ್‌ ಧವನ್‌ಗೆ ಬಂಪರ್‌

06:50 AM Mar 30, 2018 | Team Udayavani |

ಹೊಸದಿಲ್ಲಿ: ಐಪಿಎಲ್‌ ಉದ್ಘಾಟನಾ ಸಮಾರಂಭಕ್ಕೆ ವೇದಿಕೆ ಸಜ್ಜಾಗುತ್ತಿದೆ. ಎಂದಿನಂತೆ ಬಾಲಿವುಡ್‌ ತಾರೆಯರು ಈ ಕಾರ್ಯಕ್ರಮದ ಪ್ರಧಾನ ಆಕರ್ಷಣೆ ಆಗಿರಲಿದ್ದಾರೆ. ಇವರಲ್ಲಿ ಹಾಲಿವುಡ್‌ ನಟ ವರುಣ್‌ ಧವನ್‌ ಹೆಸರು ಮುಂಚೂಣಿಯಲ್ಲಿದೆ. ಇವರಿಗೆ ಐಪಿಎಲ್‌ ಇತಿಹಾಸದಲ್ಲೇ ಅತ್ಯಧಿಕ 6 ಕೋಟಿ ರೂ. ಸಂಭಾವನೆ ನೀಡಲಾಗುವುದು ಎಂದು ವರದಿಯೊಂದು ತಿಳಿಸಿದೆ.

Advertisement

ಜಾಕ್ವೆಲಿನ್‌ ಫೆರ್ನಾಂಡಿಸ್‌, ರಣವೀರ್‌ ಸಿಂಗ್‌, ಪರಿಣೀತಿ ಚೋಪ್ರಾ ಕೂಡ ಐಪಿಎಲ್‌ ಉದ್ಘಾಟನೆಯ ರಂಗೇರಿಸಲಿದ್ದಾರೆ. ರಣವೀರ್‌ ಸಿಂಗ್‌ ಕೇವಲ 5 ನಿಮಿಷಗಳ ಕಾರ್ಯಕ್ರಮ ನಡೆಸಿಕೊಡಲಿದ್ದು, ಇದಕ್ಕಾಗಿ 5 ಕೋಟಿ ರೂ. ಪಡೆಯಲಿದ್ದಾರೆ ಎನ್ನಲಾಗಿದೆ.

ವರುಣ್‌ ಧವನ್‌ ಐಪಿಎಲ್‌ ರಿಹರ್ಸಲ್‌ಗಾಗಿ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಕ್ಯಾಶ್‌ ರಿಚ್‌ ಪಂದ್ಯಾವಳಿ ಎ. 7ರಂದು ಆರಂಭವಾಗಲಿದ್ದು, ಒಂದು ದಿನ ಮೊದಲು ಉದ್ಘಾಟನಾ ಸಮಾರಂಭ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next