Advertisement

ಐಫೋನ್ 13 ನಲ್ಲಿ ಇರಲಿದೆಯಂತೆ ಫೇಸ್ ರೆಕಗ್ನೈಸಿಂಗ್ ಫೀಚರ್ : ಮಾಹಿತಿ ಇಲ್ಲಿದೆ

01:32 PM Aug 28, 2021 | Team Udayavani |

ಸ್ಮಾರ್ಟ್ ಫೋನ್ ಗಳ ದೈತ್ಯ ಸಂಸ್ಥೆ ಎಂದೇ ಕರಸಿಕೊಳ್ಳುವ ಆ್ಯಪಲ್ ಕಂಪನಿ ತನ್ನ ಐಫೋನ್ 13 ನನ್ನು ಸಿದ್ಧಪಡಿಸುತ್ತಿದೆ. ಮುಂದಿನ ದಿನಗಳಲ್ಲಿ ಆ್ಯಪಲ್ ಪ್ರಿಯರಿಗೆ ಗ್ರಾಹಕರ ಕೈ ಸೇರಲಿದೆ.

Advertisement

ಸದ್ಯ, ಐಫೋನ್ 13 ಲೈನ್ ಅಪ್​ಗಾಗಿ ಹೊಸ ಫೇಸ್ಐಡಿ ಹಾರ್ಡ್​​ವೇರ್ ಅನ್ನು ಪರೀಕ್ಷಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸೆಲ್ಫಿ ಕ್ಯಾಮೆರಾದೊಂದಿಗೆ ಫೇಸ್ ರೆಕಗ್ನೈಸಿಂಗ್ ಅಥವಾ ಮುಖ ಗುರುತಿಸುವಿಕೆ ತಂತ್ರಜ್ನಾನ ಕೂಡ ಈ ಸ್ಮಾರ್ಟ್ ಫೋನ್ ನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದ್ದು, ಈ ತಂತ್ರಜ್ಞಾನದ ಅಳವಡಿಕೆಗಾಗಿ ಕುಪರ್ಟಿನೊ ಕಂಪನಿಯ ಸಹಾಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂಬ ವದಂತಿ ಮಾರುಕಟ್ಟೆಯವಲಯದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ : ಮೈಸೂರು ಪ್ರಕರಣ: ಬಾಲಾಪರಾಧಿ ಸೇರಿ ಐವರು ಅರೆಸ್ಟ್; ತರಕಾರಿ ಮಂಡಿಗೆ ಬಂದವರು ಅಪರಾಧ ಮಾಡಿದರು

ಆ್ಯಪಲ್ ಸಂಸ್ಥೆ ಹೊಸದಾಗಿ ನೀಡುತ್ತಿರುವ ಈ ಸ್ಮಾರ್ಟ್ ಫೋನ್ ನಲ್ಲಿ ಮಾಸ್ಕ್ ಹಾಗೂ ಕನ್ನಡಕ ಎರಡನ್ನು ಪರಿಶೀಲಿಸುವ ಫೆಸ್ ಐಡಿ ಫೀಚರನ್ನು ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ ಎನ್ನುವುದು ವಿಶೇಷ.

ಒಟ್ಟಿನಲ್ಲಿ ಐಫೋನ್ 12ಗಿಂತ ಹೆಚ್ಚಿನ ಫೀಚರ್ಸ್ ಹೊಂದಿರಲಿದೆ ಎನ್ನಲಾಗುತ್ತಿದ್ದು, ಐಪೋನ್ 13 ನಿರೀಕ್ಷೆಗೂ ಮೀರಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಹೇಳಲಾಗುತ್ತಿದೆ.

Advertisement

ಇದನ್ನೂ ಓದಿ : ಶೀಲ ಶಂಕಿಸಿ ಪತ್ನಿಯ ಗುಪ್ತಾಂಗವನ್ನೇ ಹೊಲಿದ ಪತಿ; ಪತಿಯನ್ನು ಬಂಧಿಸಬೇಡಿ ಎಂದ ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next