ನವದೆಹಲಿ: ಆ್ಯಪಲ್ ಸಂಸ್ಥೆ ಇತ್ತೀಚಿಗಷ್ಟೆ ಐಫೊನ್ 12 ಸೀರಿಸ್ ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಐಫೋನ್ 12 ಮಿನಿ, ಐಫೋನ್ 12, ಐಫೋನ್ 12 ಪ್ರೋ, ಐಫೋನ್ 12 ಪ್ರೋ ಮ್ಯಾಕ್ಸ್ ಸ್ಮಾರ್ಟ್ ಫೋನ್ ಗಳು ಸೇರಿದ್ದವು. ಇದೀಗ ಆ್ಯಪಲ್ ಸಂಸ್ಥೆ ಈ ದುಬಾರಿ ಪೋನ್ ಗಳ ಬ್ಯಾಟರಿ ಸಾಮರ್ಥ್ಯವನ್ನು ಬಹಿರಂಗಗೊಳಿಸಿದೆ.
ವರದಿಗಳ ಪ್ರಕಾರ, ಐಫೋನ್ 12 ಸರಣಿಯಲ್ಲಿನ ಅತ್ಯಂತ ಕಡಿಮೆ ದರದ ಮತ್ತು ತೆಳು ಗಾತ್ರವನ್ನು ಹೊಂದಿರುವ ಐಫೋನ್ 12 ಮಿನಿ 2,227 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಈ ವರ್ಷಾರಂಭದಲ್ಲಿ ಆ್ಯಪಲ್ ಬಿಡುಗಡೆ ಮಾಡಿದ್ದ ಐಫೋನ್ SE 2020 ಇದರ ಬ್ಯಾಟರಿ ಸಾಮರ್ಥ್ಯ ಕೇವಲ 1,821 mAh ರಷ್ಟಿತ್ತು. ಇದೀಗ ಐಫೋನ್ 12 ಮಿನಿಯಲ್ಲಿ SE 2020ಕ್ಕಿಂತ 18% ಹೆಚ್ಚಳ ಬ್ಯಾಟರಿ ಬಾಳಿಕೆ ಬರುತ್ತದೆ.
ಆ್ಯಪಲ್ ವೆಬ್ ಸೈಟ್ ಪ್ರಕಾರ ಐಪೋನ್ 12 ಮಿನಿಯಲ್ಲಿ 15 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಸಮಯವನ್ನು ನಿಗದಿಪಡಿಸಲಾಗಿದೆ. ಆದರೇ SE 2020 ಫೋನ್ ಗಳಲ್ಲಿ 13 ಗಂಟೆ ಸಮಯವನ್ನು ನೀಡಲಾಗಿದೆ. ಗಮನಾರ್ಹ ಸಂಗತಿಯೆಂದರೇ ಐಫೋನ್ 11 ನಲ್ಲಿ 17 ಗಂಟೆಗಳ ಕಾಲ ವಿಡಿಯೋ ಪ್ಲೇ ಬ್ಯಾಕ್ ಸಮಯವನ್ನು ನಿಗದಿಪಡಿಸಲಾಗಿತ್ತು.
ಮತ್ತೊಂದೆಡೆ 6.1 ಇಂಚಿನ ಡಿಸ್ ಪ್ಲೇ ಹೊಂದಿರುವ ಐಫೋನ್ -12ನ ಬ್ಯಾಟರಿ ಸಾಮರ್ಥ್ಯ 2,815 mAh ನಷ್ಟಿದೆ. (ಐಪೋನ್ 11 ನಲ್ಲಿ 3,110mAh ಬ್ಯಾಟರಿ ಸಾಮರ್ಥ್ಯವಿದೆ)
ಆದರೇ ಐಫೋನ್ 12 ಪ್ರೋ ಮತ್ತು ಮ್ಯಾಕ್ಸ್ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಇನ್ನಷ್ಟೆ ವಿವರಗಳು ಲಭ್ಯವಾಗಬೇಕಿದೆ.