ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರನ್ನು ಸಿಬಿಐ ಗುರುವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಾದ, ಪ್ರತಿವಾದ ನಡೆಯುತ್ತಿದೆ.
ಅಭಿಷೇಕ್ ಸಿಂಘ್ವಿ ವಾದ:
ಚಿದಂಬರಂ ಅವರು ತಲೆಮರೆಸಿಕೊಂಡಿದ್ದರು ಎಂಬುದನ್ನು ಹೇಳಲಿಕ್ಕೆ ಸಾಧ್ಯವೇ ಇಲ್ಲ ಎಂಬುದಾಗಿ ಚಿದಂಬರಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದಾರೆ.
ಒಂದು ವೇಳೆ ಸಿಬಿಐ ಐದು ಬಾರಿ ನೋಟಿಸ್ ನೀಡಿ, ಒಂದು ಬಾರಿಯೂ ಹೋಗದಿದ್ದರೆ ಅದು ಅಸಹಕಾರ ಎಂದು ಹೇಳಬಹುದು. ಉತ್ತರ ಕೊಡದಿರುವುದು ಸಹಕರಿಸುತ್ತಿಲ್ಲ ಎಂದು ಹೇಗೆ ಹೇಳುವುದು. ಚಿದಂಬರಂ ಅವರನ್ನು ಸಿಬಿಐ ಕರೆದಿರುವುದೇ ಒಂದು ಬಾರಿ, ಆಗ ತೆರಳಿದ್ದಾರೆ. ಹೀಗಿದ್ದ ಮೇಲೆ ಸಹಕರಿಸುತ್ತಿಲ್ಲ ಎಂದು ಹೇಳುವುದು ಸರಿಯೇ ಎಂದು ಅಭಿಷೇಕ್ ಮನು ಸಿಂಘ್ವಿ ಪ್ರಶ್ನಿಸಿದರು.
ಪಿ.ಚಿದಂಬರಂಗೆ ಮಾತನಾಡಲು ಅವಕಾಶ ನೀಡಬಾರದು ಎಂಬ ಸಿಬಿಐ ಆಕ್ಷೇಪಣೆಯನ್ನು ತಿರಸ್ಕರಿಸಿದ ಕೋರ್ಟ್, ಸ್ವತಃ ವಾದ ಮಂಡಿಸಲು ಅವಕಾಶ ಮಾಡಿಕೊಟ್ಟಿತ್ತು. ವಾದ, ಪ್ರತಿವಾದ ಆಲಿಸಿದ ಸಿಬಿಐ ವಿಶೇಷ ಕೋರ್ಟ್ ಶೀಘ್ರದಲ್ಲಿಯೇ ತೀರ್ಪು ಪ್ರಕಟಿಸಲಿದೆ