ವಿಜಯಪುರ: ಶೈಕ್ಷಣಿಕ, ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ವಿಜಯಪುರ ರೋಟರಿಯು ಮುಂದಿನ ವರ್ಷಗಳಲ್ಲಿ ಬೆಂಗಳೂರು ಮಿಡ್ ಟೌನ್ ರೋಟರಿಯೊಂದಿಗೆ ಜಂಟಿ ಸೇವಾ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದು, ಈ ಬಗ್ಗೆ ಯೋಜಿಸಲು ಜಂಟಿ ಸಭೆಯನ್ನು ರೋಟರಿ ಶಾಲಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ರೋಟರಿ ನಿಯೋಜಿತ ಅಧ್ಯಕ್ಷ ಚ.ವಿಜಯಬಾಬು ಮಾತನಾಡಿ, ಮುಂದಿನ ರೋಟರಿ ವರ್ಷದಲ್ಲಿ ಬೆಂಗ ಲೂರು ರೋಟರಿ ಮಿಡ್ ಟೌನ್ ಸಹಕಾರದಲ್ಲಿ ಡಿಸ್ಪೆ ನ್ಸರಿ ಆರಂಭ, ಒತ್ತಾದ ಫಾರೆಸ್ಟ್ ನಿರ್ಮಾಣ ಯೋಜನೆ ಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ಡಿಸ್ಪೆನ್ಸರಿಯನ್ನು ಆರಂಭಿಸಲು ಸುಮಾರು 1000 ಚ.ಅಡಿಗಳಷ್ಟು ವಿಶಾಲವಾದ ಕೊಠಡಿಗಳನ್ನು ಗುರುತಿ ಸಿಕೊಳ್ಳಲಾಗಿದೆ.
ಕೇವಲ 6 ತಿಂಗಳಲ್ಲಿ ಒತ್ತಾಗಿ ಬೆಳೆಯ ಬಹುದಾದ ಸಸಿಗಳನ್ನು ನೆಟ್ಟು ಫೋಷಿಸಿ ವನ ನಿರ್ಮಾಣ ಮಾಡಲು ಸರ್ಕಾರಿ, ಖಾಸಗಿ ಭೂಮಿ ಯನ್ನು ಗುರುತಿಸಲಾಗುತ್ತಿದೆ. ಆ ಮೂಲಕ ಈ ಭಾಗ ದಲ್ಲಿ ಆರೋಗ್ಯವೃದ್ಧಿ, ಪರಿಸರ ಸಂರಕ್ಷಣೆಗೆ ರೋಟ ರಿಯು ಮತ್ತಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಿದೆ ಎಂದರು.ಡಿಸ್ಪೆನ್ಸರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು, ಉಪಕರಣಗಳನ್ನು ಒದಗಿಸಲು ಮಿಡ್ ಟೌನ್ ರೋಟರಿ ವಿಜಯಪುರ ರೋಟರಿಯೊಂದಿಗೆ ಕೈಜೋಡಿಸಲಿದೆ ಎಂದರು.
ಬೆಂಗಳೂರು ಮಿಡ್ ಟೌನ್ ರೋಟರಿ ನಿಕಟ ಪೂರ್ವ ಅಧ್ಯಕ್ಷ ಕೆ.ಎ.ಕುಂಜಾ, ಪುನಿತಾ, ರವಿ, ಶೇಷ ಮಣಿ, ಜಿ.ಎಸ್.ಭಾಸ್ಕರ್, ವಿಜಯಪುರ ರೋಟರಿ ಅಧ್ಯಕ್ಷ ಬಿ.ನರೇಂದ್ರಕುಮಾರ್, ಕಾರ್ಯದರ್ಶಿ ಬಿ.ಕೆ. ರಾಜು, ಮಾಜಿ ಅಧ್ಯಕ್ಷ ರಾಮಬಸಪ್ಪ, ಕೆ. ಸದ್ಯೋ ಜಾತಪ್ಪ, ಸಿ.ಬಸಪ್ಪ, ಜಿ.ವೀರಭದ್ರಪ್ಪ, ಎಸ್.ಶೈಲೇಂದ್ರ ಕುಮಾರ್, ಪಿ.ಚಂದ್ರಪ್ಪ, ಬಿ.ಸಿ.ಸಿದ್ಧರಾಜು, ಖಜಾಂಚಿ ಎನ್.ರುದ್ರಮೂರ್ತಿ, ಎಚ್.ಎಸ್.ರುದ್ರೇಶಮೂರ್ತಿ, ಮಹೇಶ್, ಎ.ಎಂ.ಮಂಜುಳಾ, ಎನ್.ಆನಂದ ಕುಮಾರ್ ಮತ್ತಿತರರು ಉಪಸ್ಥಿತರಿದ್ದು ವಿವಿಧ ಜಂಟಿ ಸೇವಾ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಿದರು.