Advertisement

ರಾಮಮಂದಿರ ಸಂಕೀರ್ಣ ವಿನ್ಯಾಸ ಸಲಹೆಗೆ ಆಹ್ವಾನ

11:54 PM Nov 04, 2020 | mahesh |

ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಯೋಧ್ಯೆ ರಾಮಮಂದಿರ ಸುತ್ತಲಿನ 70 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ “ಮಂದಿರ ಸಂಕೀರ್ಣ’ಕ್ಕೆ ಸಾರ್ವಜನಿಕರಿಂದ ವಿನ್ಯಾಸ ಸಲಹೆ- ಪರಿಕಲ್ಪನೆಗಳನ್ನು ಆಹ್ವಾನಿಸಿದೆ. ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲು ಈಗಾಗಲೇ ವಿನ್ಯಾಸ ಸಿದ್ಧಗೊಂಡಿದೆ. ಮಂದಿರ ಸುತ್ತಮುತ್ತಲಿನ ಪುಷ್ಕರಣಿ, ಯಜ್ಞ ಮಂಟಪ, ಅನುಷ್ಠಾನ ಮಂಟಪ, ಕಲ್ಯಾಣ ಮಂಟಪ ಸೇರಿದಂತೆ ರಾಮಜನ್ಮೋತ್ಸವ, ಹನುಮಾನ್‌ ಜಯಂತಿ, ರಾಮಚರ್ಚಾ, ಸೀತಾ ವಿವಾಹ ಆಚರಣೆಗೆ ಸೂಕ್ತ ವಿನ್ಯಾಸ ಗಳು ಬಾಕಿಯಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.

Advertisement

ಕಳಿಸೋದ್ಹೇಗೆ?: ಟ್ರಸ್ಟ್‌ನ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿಗಳಿವೆ. ವಿನ್ಯಾಸ ಪರಿಕಲ್ಪನೆಯು ಭಾರತೀಯ ವಾಸ್ತುವಿಜ್ಞಾನ ಆಧಾರಿತವಾಗಿರಬೇಕು. ಮಂದಿರ ಸನಿಹದಲ್ಲಿ 51 ವಿದ್ಯಾರ್ಥಿಗಳಿಗೆ ಗುರುಕುಲ, ಆಚಾರ್ಯರಿಗೆ ಗುರುಶಾಲಾ, ಮ್ಯೂಸಿಯಂ, ನಳನೀಲ ತಿಲ, ಸೀತಾ ಕಿ ರಸೋಯಿ, ಕುಬರ್‌ ಟಿಲಾ ಅಂಗದ್‌ ತಿಲಾಗಳ ನಿರ್ಮಾಣ ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ಸಿದ್ಧಪಡಿಸಬೇಕು. ಪ್ರತಿನಿತ್ಯ 1 ಲಕ್ಷ, ವಿಶೇಷ ದಿನಗಳಲ್ಲಿ 5 ಲಕ್ಷ ಭಕ್ತರ ದಟ್ಟಣೆ ಗಮನದಲ್ಲಿಟ್ಟುಕೊಂಡು ಸಲಹೆ ನೀಡಬಹುದು ಎಂದು ಟ್ರಸ್ಟ್‌ ಈ ಕುರಿತಾಗಿ ನೀಡಿರುವ ಜಾಹೀರಾತಿನಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next