Advertisement
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶ್ರೀ ಮಠದಲ್ಲಿ ಜ.22ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ರಾಮನಿಗೆ ವಿಶೇಷ ಪೂಜೆ ನಡೆಯಲಿದೆ. ಜಗದ್ಗುರುಗಳ ಆದೇಶದಂತೆ ಭಕ್ತರಿಂದ ಶ್ರೀರಾಮ ಜಪ, ಭಜನೆ ನಡೆಯುತ್ತಿದೆ. ಪಟ್ಟಣ ಸಹಿತ ಗ್ರಾಮೀಣ ಭಾಗದಲ್ಲಿರುವ ದೇವಸ್ಥಾನದಲ್ಲಿ ಶ್ರೀ ರಾಮತಾರಕ ಮಂತ್ರ ಜಪ, ಶ್ರೀ ರಾಮತಾರಕ ಹೋಮ ನಡೆಯಲಿದೆ. ಶ್ರೀಮಠದ ಶಕ್ತಿದೇವತೆ ಕೆರೆದಂಡೆಯಲ್ಲಿರುವ ಶ್ರೀ ಕೆರೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮ ತಾರಕ ಹೋಮ ಹಾಗೂ ವಿಶೇಷ ಪೂಜೆ ನಡೆಯಲಿದೆ.
ವಿಶೇಷ ದಿನವಾದ ಜ.22ರಂದೇ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಶ್ರೀ ರಾಮ ದೇವರ ಪುನರ್ ಅಷ್ಟಬಂಧ ಮತ್ತು ಕುಂಭಾಭಿಷೇಕ ನೆರವೇರಿಸಲಿದ್ದಾರೆ. ಕುಂಭಾಭಿಷೇಕದ ಅಂಗವಾಗಿ ಜ.21ರಂದು ಮಹಾಸಂಕಲ್ಪ, ಶಾಂತಿ ಹೋಮ, ಜಲಾ ವಾಸ, ಬಿಂಬಶುದ್ಧಿ, ರಾಕ್ಷೊಘ್ನ ಹೋಮ, ವಾಸ್ತು ಹೋಮ ಮುಂತಾದ ಕಾರ್ಯಕ್ರಮ ನಡೆಯಲಿದೆ. ಜ.22ರಂದು ನಡೆಯುವ ಕುಂಬಾಭಿಷೇಕ ಕಾರ್ಯಕ್ರಮದಲ್ಲಿ ರತ್ನನ್ಯಾಸ, ಪ್ರತಿಷ್ಠೆ, ಅಷ್ಟಬಂಧ ಸಂಯೋಜನೆ, ಪ್ರತಿಷ್ಠಾಂಗ ಹೋಮ ನಡೆಯಲಿದೆ. ಬೆಳಗ್ಗೆ ಶ್ರೀರಾಮತಾರಕ ಹೋಮದ ಪೂರ್ಣಾಹುತಿಯಲ್ಲಿ ಜಗದ್ಗುರುಗಳು ಪಾಲ್ಗೊಳ್ಳಲಿದ್ದಾರೆ.