Advertisement

karnataka 2 ಕಡೆ ಸಂಶೋಧನ ಕೇಂದ್ರ ತೆರೆಯಲು ಆಪ್ಟೀವ್‌ ಕಂಪೆನಿಗೆ ಆಹ್ವಾನ

11:22 PM Sep 28, 2023 | Team Udayavani |

ಬೆಂಗಳೂರು: ಆಟೋಮೋಟಿವ್‌ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿ ಆಪ್ಟೀವ್‌ ಪಿಎಲ್ಸಿ ರಾಜ್ಯದ ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ತನ್ನ ಸಂಶೋಧನ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವಂತೆ ಘನ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಆಹ್ವಾನ ನೀಡಿದ್ದಾರೆ.

Advertisement

ಅಮೆರಿಕ ಪ್ರವಾಸದಲ್ಲಿರುವ ಸಚಿವರ ನೇತೃತ್ವದ ನಿಯೋಗವು ಬುಧವಾರ ಈ ಸಂಬಂಧ ಕಂಪೆನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಆಪ್ಟೀವ್‌ ಕಂಪೆನಿ ಜತೆಗಿನ ಮಾತುಕತೆ ಸಂದರ್ಭದಲ್ಲಿ ಸೆಮಿ ಕಂಡಕ್ಟರ್‌ ಉತ್ಪನ್ನಗಳಿಗೆ ಸ್ಥಳೀಯ ಪೂರೈಕೆ ಜಾಲ ಅಭಿವೃದ್ಧಿಗೆ ಇರುವ ಅವಕಾಶದ ಬಗ್ಗೆ ಚರ್ಚಿಸಲಾಗಿದೆ. ಇದರ ಜತೆಗೆ ಆಪ್ಟೀವ್‌ ಕಂಪೆನಿಯ ಉತ್ಪನ್ನಗಳ ಒಇಎಂ , ಅಸೆಂಬ್ಲಿ, ಟೆಸ್ಟಿಂಗ್‌, ಮಾರ್ಕಿಂಗ್‌ ಮತ್ತು ಪ್ಯಾಕೇಜಿಂಗ್‌ (ಎಟಿಪಿಎಂ) ಸೌಲಭ್ಯಗಳ ಬಗ್ಗೆಯೂ ವಿಚಾರ ವಿನಿಮಯ ನಡೆಸಲಾಯಿತು ಎಂದಿದ್ದಾರೆ.

ರಾಜ್ಯದ ಸೆಮಿ ಕಂಡಕ್ಟರ್‌ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಎಂಕೆಎಸ್‌ ಇನ್ಸು$óಮೆಂಟ್ಸ್‌ ಕಂಪೆನಿಯೊಂದಿಗೂ ಚರ್ಚಿಸಲಾಗಿದೆ. ರಾಜ್ಯದಲ್ಲಿ ವ್ಯಾಕ್ಯೂಮ್‌ ಮತ್ತು ಫೋಟಾನಿಕ್ಸ… ಕ್ಷೇತ್ರಗಳಲ್ಲಿ ತಂತ್ರಜ್ಞಾನ ಸುಧಾರಣೆಗಿರುವ ಅವಕಾಶಗಳನ್ನು ಗಮನಕ್ಕೆ ತರಲಾಗಿದೆ. ರಾಜ್ಯದಲ್ಲಿರುವ ಕಾರ್ಪೊರೇಟ್‌ ತೆರಿಗೆ ದರ, ವೇತನ ಮತ್ತು ಬೌದ್ಧಿಕ ಹಕ್ಕುಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next