ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಮುಖವಾಣಿ ಅಮೂಲ್ಯ ತ್ತೈಮಾಸಿಕದ ವತಿಯಿಂದ ಸಾಹಿತ್ಯಾಭಿಮಾನಿಗಳಿಗೆ ಕಥೆ ಮತ್ತು ವೈಚಾರಿಕ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕೃತಿಗಳು ಸ್ವಂತವಾಗಿದ್ದು, ಬೇರೆಲ್ಲೂ ಪ್ರಕಟಗೊಂಡಿರಬಾರದು. ಫುಲ್‌ಸ್ಕೇಪ್‌ಹಾಳೆಯ ಒಂದೇ ಮಗ್ಗುಲಲ್ಲಿ ಸು#ಟವಾಗಿ ಬರೆದಿರಬೇಕು. ಕಥೆ, ಲೇಖನಗಳನ್ನು ಹಿಂದೆ ಕಳುಹಿಸಲಾಗುವುದಿಲ್ಲ. ಕಾರ್ಬನ್ ಪ್ರತಿಗಳನ್ನು ಸ್ವೀಕರಿಸಲಾಗುವುದು. ಕಥೆಗಳು ಹಸ್ತಲಿಖೀತದಲ್ಲಿ 7-8 ಪುಟಗಳನ್ನು ಮೀರಬಾರದು. ಡಿಟಿಪಿಯಲ್ಲಿ 4 ಪೇಜ್‌ಗಳಿಗೆ ಸೀಮಿತವಾಗಿರಬೇಕು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಐದು ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು. ಉತ್ತಮ ಎಂದು ಪರಿಗಣಿಸಲಾಗುವ ಕಥೆಗಳನ್ನು ಅಮೂಲ್ಯದ ಮುಂದಿನ ಸಂಚಿಕೆಗಳಲ್ಲಿ ಹಂತ ಹಂತವಾಗಿ ಪ್ರಕಟಿಸಲಾಗುವುದು.
ಸಂಪಾದಕ ಮಂಡಳಿ ನಿಗದಿಪಡಿಸಿದ ಸಂಭಾವನೆಯನ್ನು ಲೇಖಕರಿಗೆ ಕಳುಹಿಸಲಾಗುವುದು. ಕೃತಿಗಳನ್ನು ಜೂ. 29ರೊಳಗೆ The Editor, Amoolya Quarterly, Kulala Sangha Mumbai, 102 Malhotra Chambers, 21/33 Police Court Lane, Fort, Mumbai-400001 ಈ ವಿಳಾಸಕ್ಕೆ ಕಳುಹಿಸತಕ್ಕದ್ದು.
ಲೇಖಕರು ತಮ್ಮ ಹೆಸರು, ಮೊಬೈಲ್ ನಂಬರ್, ಭಾವಚಿತ್ರ, ವಿಳಾಸವನ್ನು ಪ್ರತ್ಯೇಕ ಕಾಗದದಲ್ಲಿ ಲಗತ್ತಿಸಿರಬೇಕು. ಯಾವುದೇ ರೀತಿಯ ಪತ್ರ ವ್ಯವಹಾರಗಳಿಗೆ ಆಸ್ಪದವಿಲ್ಲ.
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ಫಲಿತಾಂಶವನ್ನು ಅಕ್ಟೋಬರ್‌ನ ಅಮೂಲ್ಯ ಸಂಚಿಕೆ ಮತ್ತು ಪ್ರಮುಖ ದಿನ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಸಂಸ್ಥೆಯ ಪತ್ರಿಕಾ ಪ್ರಕಟನೆ ತಿಳಿಸಿದೆ.