Advertisement

ಖಾಲಿ ಇರುವ ಹೃದಯಕ್ಕೆ ಅರ್ಜಿ ಆಹ್ವಾನ!

12:30 AM Feb 19, 2019 | |

ಏಕಾಂಗಿಯಾಗಿ ಅಲೆಯುತ್ತಿರುವ ಈ ಮನಸ್ಸನ್ನು ಒಲವಿನ ಆಲಯದೊಳಗೆ ಬಂಧಿಸಲು  ಪ್ರೇಯಸಿ ಒಬ್ಬಳು ಬೇಕಾಗಿದ್ದಾಳೆ.

Advertisement

ಹೃದಯದ ಚಿಪ್ಪಿನಲ್ಲಿ ಕೂಡಿಟ್ಟ ಪ್ರೀತಿಯನ್ನು ಬಟವಾಡೆ ಮಾಡಲು ಮನದರಸಿ ಒಬ್ಬಳು ಬೇಕು. ತುಂಬಿದ ಜೇಬು ಖರ್ಚಾಗಲು, ಫೋನಿಗೆ ಹೆಚ್ಚುವರಿ ಕೆಲಸ ನೀಡಲು, ಸುಸ್ತಾಗಿ ಹೋದ ಈ ಹೃದಯವನ್ನು ರಿಫ್ರೆಶ್‌ ಮಾಡಲು, ಜೀವನಕ್ಕೆ ಹೊಸ ಜೋಶ್‌ ತುಂಬಲು, ಖಾಲಿ ಮನಸ್ಸಿನಲ್ಲಿ ಬಣ್ಣ ಬಣ್ಣದ ಕನಸುಗಳನ್ನು ತುಂಬಲು ಮನದೊಡತಿಯೊಬ್ಬಳು ಬೇಕಾಗಿದ್ದು, ಈ ಪ್ರಕಟಣೆ ಹೊರಡಿಸಿದ್ದೇನೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಹುಡುಗಿ ನೋಡಲು ಅತಿ ರೂಪಸಿ ಆಗಿರಬೇಕೆಂಬ ನಿಯಮವಿಲ್ಲ. ತಾವರೆ ಮೊಗದ, ಕೋಗಿಲೆ ಕಂಠದ, ನೀಲಿ ಕಂಗಳ, ಗುಳಿಕೆನ್ನೆಯ, ಗಿಣಿ ಮೂಗಿನ ಹುಡುಗಿಯಾದರೆ ಸಾಕು. 

ಈ ಬಾರಿಯ ಪ್ರೇಮಿಗಳ ದಿನಾಚರಣೆಯಂದು ಈ ಹೃದಯದಲ್ಲಿ ಯಾವುದೇ ಚಟುವಟಿಕೆ ನಡೆಯದ ಕಾರಣ, ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನನ್ನ ಫೇಸ್‌ಬುಕ್‌ ಖಾತೆಗೆ ತಮ್ಮ ಬಯೊಡೇಟಾ ಕಳುಹಿಸಿ, ಮಾಹಿತಿ ಪಡೆಯಬಹುದು.

ಡಬ್‌ಸ್ಮ್ಯಾಶ್‌, ಟಿಕ್‌ಟಾಕ್‌ ವಿಡಿಯೊ ಮಾಡಲು ಗೊತ್ತಿರುವವರಿಗೆ ಮೊದಲ ಆದ್ಯತೆ.

Advertisement

ಇಂತಿ ನಿಮ್ಮ ಅರ್ಜಿಗಾಗಿ ಕಾಯುತ್ತಿರುವ 

ಆರೀಫ್ ವಾಲೀಕಾರ, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next