Advertisement

ಮಾಲೀಕನ ಮನೆಯ ಲಾಕರ್‌ ಹೊತ್ತೂಯ್ದ ಆರೋಪಿ ಸೆರೆ

11:51 AM Oct 30, 2018 | |

ಬೆಂಗಳೂರು: ಕೈಗಾರಿಕೋದ್ಯಮಿ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬಿಹಾರದ ಮದುಬನಿ ಜಿಲ್ಲೆಯ ಅಖೀಲೇಶ್‌ ಕುಮಾರ್‌ (21) ಬಂಧಿತ. ಈತನಿಂದ 90 ಲಕ್ಷ ರೂ. ಮೌಲ್ಯದ 2 ಕೆ.ಜಿ. ವಜ್ರ ಮತ್ತು ಚಿನ್ನಾಭರಣಗಳು ಮತ್ತು ಅರ್ಧ ಕೆ.ಜಿ. ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು ಉದ್ಯಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ.

ಆರೋಪಿ ಅ.17ರಂದು ಕೈಗಾರಿಕೋದ್ಯಮಿ ಸತ್ಯಪ್ರಕಾಶ್‌ ಮನೆಯಲ್ಲಿ ವಜ್ರ ಮತ್ತು ಚಿನ್ನಾಭರಣ, ಬೆಳ್ಳಿಯ ವಸ್ತುಗಳಿದ್ದ ಲಾಕರ್‌ ಕಳವು ಮಾಡಿದ್ದ. ಈ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ಬಿಹಾರದಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರೋಪಿ ಅಖೀಲೇಶ್‌ ಕುಮಾರ್‌ ಒಂದೂವರೆ ವರ್ಷಗಳ ಹಿಂದೆ ಉದ್ಯಮಿ ಸತ್ಯಪ್ರಕಾಶ್‌ ಮನೆಯಲ್ಲಿ ಅಡುಗೆ ಹಾಗೂ ಮನೆಗೆಲಸ ಮಾಡುತ್ತಿದ್ದ. ಬಳಿಕ ಹೆಚ್ಚಿನ ಸಂಬಳಕ್ಕಾಗಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಐದು ತಿಂಗಳ ಹಿಂದೆ ಪರಿಚಯಸ್ಥರ ಮೂಲಕ ಆರೋಪಿಯನ್ನು ಸಂಪರ್ಕಿಸಿದ ಸತ್ಯಪ್ರಕಾಶ್‌, ಮತ್ತೂಮ್ಮೆ ಕೆಲಸಕ್ಕೆ ಕರೆಸಿಕೊಂಡಿದ್ದರು.

ಮನೆಯ ಸದಸ್ಯರ ವಿಶ್ವಾಸ ಗಳಿಸಿದ್ದ ಆರೋಪಿಗೆ ಮನೆಯ ಎಲ್ಲ ಕೊಠಡಿಗಳ ಕೀಗಳನ್ನು ಕೊಟ್ಟಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ಆರೋಪಿ ಅ.17ರಂದು ದಸರಾ ಪ್ರಯುಕ್ತ ಸತ್ಯಪ್ರಕಾಶ್‌ ಕುಟುಂಬ ಸಮೇತ ಊರಿಗೆ ಹೋಗಿದ್ದಾಗ, ಮನೆಯ ಮೊದಲನೇ ಮಹಡಿಯ ಕೊಠಡಿಯ ಕಬೋರ್ಡ್‌ನಲ್ಲಿ ಅಳವಡಿಸಿದ್ದ ಲಾಕರ್‌ ಅನ್ನು ಕದ್ದೊಯ್ದಿದ್ದ.

Advertisement

ಇದರಲ್ಲಿ 2 ಕೆ.ಜಿ. ವಜ್ರ ಮತ್ತು ಚಿನ್ನದ ಒಡವೆಗಳು ಹಾಗೂ ಅರ್ಧ ಕೆ.ಜಿ. ಬೆಳ್ಳಿ ವಸ್ತುಗಳು ಇದ್ದವು. ಈ ಬಗ್ಗೆ ಸತ್ಯಪ್ರಕಾಶ್‌ ಮಡಿವಾಳ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ವಿಶೇಷ ತಂಡ ರಚಿಸಿದ್ದರು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ರೈಲು ಏರಿ ಬಿಹಾರಕ್ಕೆ ಪರಾರಿ: ಆರೋಪಿ ಅಖೀಲೇಶ್‌ ಮನೆಯಿಂದ ಲಾಕರ್‌ನ್ನು ಕೊಂಡೊಯ್ದು ಇಂದಿರಾನಗರದಲ್ಲಿ ಲಾಕರ್‌ನ್ನು ಹೊಡೆದು, ಅದರಲ್ಲಿದ್ದ ವಜ್ರ, ಚಿನ್ನಾಭರಣಗಳನ್ನು ತೆಗೆದುಕೊಂಡು, ರೈಲು ಮಾರ್ಗದ ಮೂಲಕ ಬಿಹಾರಕ್ಕೆ ಹೋಗಿದ್ದ. ಮತ್ತೂಂದೆಡೆ ಆರೋಪಿಯ ಬೆನ್ನುಬಿದ್ದಿದ್ದ ವಿಶೇಷ ತಂಡ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಮಾನದ ಮೂಲಕ ಬಿಹಾರದ ಮದುಬನಿ ಜಿಲ್ಲೆ ತಲುಪಿತ್ತು. ಬಳಿಕ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಗದ್ದೆಯಲ್ಲಿ ಚಿನ್ನಾಭರಣ ಹೂತಿಟ್ಟ ಖದೀಮ: ಆರೋಪಿ ಕಳವು ಮಾಡಿದ ಚಿನ್ನಾಭರಣ, ಬೆಳ್ಳಿ, ವಜ್ರದ ಆಭರಣಗಳನ್ನು ಮನೆ ಹತ್ತಿರದ ಗದ್ದೆಯಲ್ಲಿ ಗುಂಡಿಗಳನ್ನು ತೆಗೆದು ಚೀಲದಲ್ಲಿ ಹೂತು ಹಾಕಿದ್ದ. ಕೆಲ ದಿನಗಳ ಬಳಿಕ ಅವುಗಳನ್ನು ಬಿಹಾರ ಹಾಗೂ ಕೋಲ್ಕತ್ತಾದಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ.

ಅಷ್ಟರಲ್ಲಿ ಆರೋಪಿಯನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಡಿಸಿಪಿ ಡಾ.ಬೋರಲಿಂಗಯ್ಯ, ಮಡಿವಾಳ ಎಸಿಪಿ ಸೋಮೇಗೌಡ, ಮಡಿವಾಳ ಇನ್ಸ್‌ಪೆಕ್ಟರ್‌ ಭರತ್‌, ಪಿಎಸ್‌ಐ ಸಂಜೀವ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next