Advertisement

ಜೈಶ್‌ ವಿರುದ್ಧ ತನಿಖೆ ನಡೆಸಿ : ಪಾಕಿಸ್ತಾನಕ್ಕೆ ಅಮೆರಿಕ ಸೂಚನೆ

07:10 PM Jul 20, 2021 | Team Udayavani |

ವಾಷಿಂಗ್ಟನ್‌: ಪ್ಯಾರಿಸ್‌ ಮೂಲದ ಉಗ್ರರಿಗೆ ಹಣಕಾಸು ತಡೆಯುವ ಸಂಸ್ಥೆ, ಎಫ್ಎಟಿಎಫ್ನ 27 ಶಿಫಾರಸುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪಾಕಿಸ್ತಾನಕ್ಕೆ ಅಮೆರಿಕ ಸೂಚಿಸಿದೆ.

Advertisement

ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕರು ಎಂಬ ಹಣೆಪಟ್ಟಿ ಗಳಿಸಿಕೊಂಡಿರುವ ಉಗ್ರ ಸಂಘಟನೆಗಳಾದ ಜೈಶ್‌-ಎ-ಮೊಹಮ್ಮದ್‌ ಸಂಸ್ಥಾಪಕ ಮಸೂದ್‌ ಅಜರ್‌ ಮತ್ತು ಲಷ್ಕರ್‌-ಎ-ತೊಯ್ಬಾ ಸಂಸ್ಥಾಪಕ ಹಫೀಜ್‌ ಸಯೀದ್‌ ವಿರುದ್ಧ ತನಿಖೆ ನಡೆಸಬೇಕು ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್‌ ಪ್ರಿನ್‌ ಒತ್ತಾಯಿಸಿದ್ದಾರೆ.

ಎಫ್ಎಟಿಎಫ್ ಸೂಚಿಸಿದ ಮೊದಲ ಹಂತದ ಸೂತ್ರವನ್ನು ಪಾಕಿಸ್ತಾನ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಅದನ್ನೇ 2 ಹಂತದಲ್ಲಿಯೂ ಅನುಸರಿಸಬೇಕು ಎಂದೂ ಪ್ರಿನ್‌ ಹೇಳಿದ್ದಾರೆ.

ಇದನ್ನೂ ಓದಿ :ಯಡಿಯೂರಪ್ಪ ಬೆನ್ನಿಗೆ ಶ್ರೀಶೈಲ ಜಗದ್ಗುರು ಪೀಠವಿದೆ : ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next