Advertisement

‘ಸಾಗರದಾಚೆಗೆ ಭಾರತೀಯ ಸಂಸ್ಕೃತಿ ಪರಿಚಯಿಸಿದವರು ವಿವೇಕಾನಂದರು’

10:25 AM Jan 13, 2018 | Team Udayavani |

ಮಹಾನಗರ: ಭಾರತೀಯ ಸಂಸ್ಕೃತಿಯನ್ನು ದೇಶ ವಿದೇಶಗಳಲ್ಲಿ ಪಸರಿಸಿದ ಮಹಾನ್‌ ಮೇಧಾವಿ ವಿವೇಕಾನಂದರ ಆದರ್ಶಗಳು ಎಲ್ಲರಿಗೂ ಮಾದರಿ ಎಂದು ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಷ್ಟವಧಾನಿ ಕಬ್ಬಿನಾಲೆ ಡಾ| ಬಾಲಕೃಷ್ಣ ಭಾರದ್ವಾಜ್‌ ಹೇಳಿದರು.

Advertisement

ಗಣಪತಿ ಅನುದಾನಿತ ಪದವಿಪೂರ್ವ ಕಾಲೇಜು ಹಾಗೂ ಗಣಪತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಹಯೋಗದಲ್ಲಿ 156ನೇ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ತನವನ್ನು ನಾವು ಕಳೆದುಕೊಂಡಾಗ ನಾವು ಸಾಯುತ್ತೇವೆ. ನಮ್ಮ ತನದ ಬಗ್ಗೆ ಹೆಮ್ಮೆಯಿಂದ ವಿದೇಶಗಳಲ್ಲಿ ಹೇಳಿಕೊಂಡ ಧೀಮಂತ ಸನ್ಯಾಸಿ ಮತ್ತೆ ನಮ್ಮಲ್ಲಿ ಹುಟ್ಟಿ ಬಾರದಿರುವುದು ದುಃಖದ ವಿಷಯ ಎಂದು ಹೇಳಿದರು.

ಬೇರೆ ಸಂಸ್ಕೃತಿಯತ್ತ ಒಲವು
ಎಲ್ಲದಕ್ಕೂ ಕಾಲ ಬದಲಾಗಿದೆ ಎಂಬ ಉತ್ತರ ಸಿಗುತ್ತದೆ ಆದರೆ ಕಾಲ ಬದಲಾಗಿಲ್ಲ. ನಮ್ಮ ಹೃದಯಗಳು ಬದಲಾಗಿವೆ.
ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿಯನ್ನು ಕಡೆಗಣಿಸಿ ಬೇರೆ ಸಂಸ್ಕೃತಿಯತ್ತ ಒಲವು ಹೆಚ್ಚಾಗಿದೆ ಇದರಿಂದ ನಮ್ಮ ಅಂತ್ಯವನ್ನು ನಾವೇ ತೊಡಿಕೊಂಡಂತೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾಸಂಸ್ಥೆ ಪ್ರಾಂಶುಪಾಲ ರತ್ನಾಕರ್‌ ಬನ್ನಾಡಿ, ಮುಖ್ಯೋಪಾಧ್ಯಾಯಿನಿ ರಂಜಿತಾ ಜೋಷಿ, ಎನ್‌.ಎಸ್‌.ಎಸ್‌.
ಕಾರ್ಯಕ್ರಮಾಧಿಕಾರಿ ಬಾಲಕೃಷ್ಣ ಜೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೇಕಲ್‌ ರಾಮಚಂದ್ರ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next