Advertisement
ರೈತ ಎಂದರೆ ಹಸಿರು, ಹಸಿರನ್ನೆ ಉಸಿರಾಗಿಸಿಕೊಂಡು ತನ್ನ ಜಮೀನಿನಲ್ಲಿ ಎತ್ತುಗಳ ಸಹಾಯದೊಂದಿಗೆ ಹಗಲು-ರಾತ್ರಿ ಎನ್ನದೆ ನೇಗಿಲು ಹಿಡಿದು ಉಳುಮೆ ಮಾಡುತ್ತಿದ್ದ ಅನ್ನದಾತನಿಗೆ ನೆರವಾಗಲು ಜಗತ್ತಾದ್ಯಂತ ಹಲವು ಕಂಪನಿ, ವಿಜ್ಞಾನಿಗಳು ಹೊಸ ಹೊಸ ಅವಿಷ್ಕಾರಗಳನ್ನು ಮಾಡುತ್ತಿರುವುದು ಸಹಜ ವಾಗಿ ದ್ದರೂ, ತಾಲೂಕಿನ ಬಾಲಕಿಯೊಬ್ಬಳು ಪರಿಸರ ಸ್ನೇಹಿ ಹಾಗೂ ಬಹುಪಯೋಗಿ ಕೃಷಿ ಉಪಕರ ಣವನ್ನು ಆವಿಷ್ಕಾರ ಮಾಡಿದ್ದು, ಇವರ ಸಾಧನೆ ಕಂಡು ಜಪಾನ್ ದೇಶದಲ್ಲಿ ನಡೆಯುವ ನ.5ರಿಂದ ನಡೆಯುವ ವಿಶ್ವಮಟ್ಟದ 7ದಿನಗಳ ಕಾರ್ಯಗಾರದಲ್ಲಿ ಭಾಗವಹಿಸಲು ಆಹ್ವಾನ ಬಂದಿರುವುದು ಇಡೀ ದೇಶವೇ ಮೆಚ್ಚುವಂತಾಗಿದೆ.
Related Articles
Advertisement
ಶಿಕ್ಷಕಿ ಕವಿತಾರ ಮಾರ್ಗದರ್ಶನ: ಎನ್.ಅನುಶ್ರೀ ಪ್ರಸ್ತುತ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಜಪಾನ್ ದೇಶದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಪಾಲ್ಗೊಳ್ಳವ ಅವಕಾಶ ಪಡೆದುಕೊಂಡಿದ್ದಾರೆ. ರಾಜ್ಯದಿಂದ ಭಾಗವಹಿಸು ತ್ತಿರುವ 6 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಎನ್. ಅನುಶ್ರೀ ಇಷ್ಟೆಲ್ಲಾ ವಿಶ್ವಮಟ್ಟದ ಸಾಧನೆ ಮಾಡಲು ಮುಖ್ಯವಾಗಿ ದೊಡ್ಡಬೊಂಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ವಿ.ಕವಿತಾ ಅವರೇ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪರಿಸರ ಸ್ನೇಹಿ ಬಹು ಉಪಯೋಗಿ ಕೃಷಿ ಉಪಕರಣವನ್ನು ಆವಿಷ್ಕಾರಗೊಳಿಸಿದ್ದರು. ಇದಕ್ಕೆಲ್ಲಾ ಆರ್ಥಿಕ ವಾಗಿ ಯೂ ಕಷ್ಟದಲ್ಲಿರುವ ಈ ವಿದ್ಯಾರ್ಥಿಗೆ ಶಿಕ್ಷಕಿ ವಿ.ಕವಿತಾ ಅವರೇ ಆಗಿದ್ದು, ದೊಡ್ಡಬೊಂಪಲ್ಲಿ ಸರ್ಕಾರಿ ಶಾಲೆಯಿಂದ ಮಾಲೂರು ತಾಲೂಕಿಗೆ ಶಿಕ್ಷಕಿ ವಿ.ಕವಿತಾ ವರ್ಗಾವಣೆ ಆಗಿದ್ದರೂ, ಎನ್.ಅನುಶ್ರೀ ಅವರಿಗೆ ಈಗಲೂ ಸಹ ಪ್ರೇರಕರಾಗಿದ್ದಾರೆ.
ಜಿಲ್ಲೆಗೆ ಕೀರ್ತಿ ತಂದ ಪ್ರತಿಭೆ: ರಾಷ್ಟ್ರಮಟ್ಟದ ಇನ್ಸ್‌ಪೆçರ್ ಅವಾರ್ಡ್‌ನ್ನು ದೆಹಲಿಯ ಐಐಟಿಯಲ್ಲಿ ಪಡೆದುಕೊಂಡಿದ್ದರು. ಇದಾದ ಬಳಿಕ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಈಗಾಗಲೇ ಗುಜರಾತ್, ಫಿಲಿಪೈನ್ಸ್‌ನಲ್ಲಿ ನಡೆದಿದ್ದ 2ನೇ ಅಸ್ಕಾಂ ಇಂಡಿಯಾ ಗ್ರಾಸ್‌ರೂಟ್ಸ್ ಅಂಡ್ 2ನೇ ಇನೊ³àಟಿಕ್ ಸಬ್‌ಮಿಟ್‌ನಲ್ಲಿಯೂ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದ ಪ್ರತಿಭೆಯಾಗಿದ್ದಾರೆ. ಪರಿಸರ ಸ್ನೇಹಿ ಬಹು ಉಪಯೋಗಿ ಕೃಷಿ ಉಪಕರಣವನ್ನು ಆವಿಷ್ಕಾರಗೊಳಿಸಿದ ನಂತರ ಖುದ್ದು ಶಾಲೆಗೆ ಭೇಟಿ ನೀಡಿದ ಬೆಂಗಳೂರಿನ ಎಂಎನ್‌ಸಿ ಕಂಪನಿಯವರು ಎನ್.ಅನುಶ್ರೀ ಸಾಧನೆಗೆ ಮೆಚ್ಚಿ ಸರ್ಕಾರಿ ಶಾಲೆಗೆ ಮುಖ್ಯವಾಗಿ ಅಗತ್ಯವಾಗಿರುವ ಕಂಪ್ಯೂಟರ್ ಸೇರಿದಂತೆ ಆಧುನಿಕ ತಾಂತ್ರಿಕತೆಯನ್ನು ಹೊಂದಿರುವ 6 ಲಕ್ಷ ರೂ. ವೆಚ್ಚದ ಸಲಕರಣಿಗಳನ್ನು ಉಚಿತವಾಗಿ ಕೊಡುಗೆಯಾಗಿ ನೀಡಿದ್ದಾರೆ.
ಕೃಷಿ ಯಂತ್ರದ ಬೆಲೆ ಕೇವಲ 3 ಸಾವಿರ ರೂಪಾಯಿ: ವಾಯು ಮಾಲಿನ್ಯ ಇಲ್ಲದೆ ಪ್ರತಿಯೂಬ್ಬ ಬಡ ರೈತನಿಗೂ ಕೈಗೆಟುಕುವ ಬೆಲೆಯಲ್ಲೇ ಬಹು ಉಪಯೋಗಿ ಕೃಷಿ ಉಪಕರಣ ತಯಾರಿಸಲಾಗಿದ್ದು, ಬೀಜ ಬಿತ್ತನೆ ಉಳುಮೆ, ಕಳೆ ಕೀಳುವುದು ಸೇರಿದಂತೆ ಟ್ರ್ಯಾಕ್ಟರ್ ಮಾಡುವ ಎಲ್ಲಾ ಕೆಲಸವನ್ನು ಈ ಯಂತ್ರ ಮಾಡಿ ಸಮಯ ಮತ್ತು ಹಣವನ್ನು ಉಳಿಸಲಿದೆ. ಈ ಯಂತ್ರದ ಬೆಲೆ ಕೇವಲ 3 ಸಾವಿರ ರೂ. ಮಾತ್ರ ಆಗಿದೆ. ಈ ಯಂತ್ರವು ಮುಖ್ಯವಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚಾಗಿ ರೈತರ ಬಳಕೆಗೆ ಬರುತ್ತಿದೆ.
ಗ್ರಾಮೀಣ ಪ್ರದೇಶದ ಬಡ ಕುಟುಂಬದಲ್ಲಿ ಹುಟ್ಟಿರುವ ಹೆಣ್ಣು ಮಗಳೊಂದು ವಿಶ್ವಮಟ್ಟದಲ್ಲಿ ಖ್ಯಾತಿಯನ್ನು ಪಡೆಯುತ್ತಿರುವುದು ನಿಜಕ್ಕೂ ಸಂತಸವಾಗಿದೆ. ವಿದ್ಯಾರ್ಥಿನಿ ಸಾಧನೆಗೆ ಮುಖ್ಯಶಿಕ್ಷಕರಾಗಿದ್ದ ಕೇಶವರೆಡ್ಡಿ, ಶಿಕ್ಷಕಿ ವನಿತಾ, ಸುಮಾ ಸಹಕಾರ ನೀಡಿದ್ದಾರೆ. ರೈತರು ಈ ಉಪಕರಣವನ್ನು ಖರೀದಿಸುವುದರ ಮೂಲಕ ಗ್ರಾಮೀಣ ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಸರ್ಕಾರವು ಸಹ ಗುರುತಿಸುವ ಕೆಲಸ ಮಾಡಬೇಕಾಗಿದೆ. ●ವಿ.ಕವಿತಾ, ಶಿಕ್ಷಕಿ ಹಾಗೂ ಮಾರ್ಗದರ್ಶಕರು,
-ಎಂ. ಸಿ. ಮಂಜುನಾಥ್