ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಟಿಗ್ರೇಟೆಡ್ ಕಾರ್ಗೊ ಟರ್ಮಿನಲ್(ಐಸಿಟಿ) ಸೋಮವಾರ ಕಾರ್ಯಾರಂಭ ಮಾಡಿದೆ.
1,891 ಚದರ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿರುವ ಐಸಿಟಿ ವಾರ್ಷಿಕ 9,000 ಟನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಸರಕುಗಳನ್ನು ನಿರ್ವಹಿಸಬಹುದು. ಆರಂಭಿಕ ದಿನದಂದು ದೇಶೀಯ ಒಳಬರುವ ಮತ್ತು ಹೊರಹೋಗುವ ಸರಕುಗಳನ್ನು ನಿರ್ವಹಿಸುವ ಮೂಲಕ ವಿಮಾನ ನಿಲ್ದಾಣವು ಐಸಿಟಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಒಳಬರುವ ಮತ್ತು ಹೊರಹೋಗುವ ಸರಕುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು 10 ಟ್ರಕ್ ಬೇಗಳು, ಎರಡು ಡಾಕ್ ಲೆವೆಲ್ಲರ್‌ಗಳು ಮತ್ತು ಫೋರ್ಕ್ ಲಿಫ್ಟ್ ಸೌಲಭ್ಯ ಒದಗಿಸಿದ್ದು, ವಿಮಾನಯಾನ ಮತ್ತು ಕಸ್ಟಮ್ಸ್‌ಗೆ ಪ್ರತ್ಯೇಕ ಕಚೇರಿ ಸ್ಥಳವಿದೆ.
ವಾಯುಯಾನ ಸರಕು ನಿಯಂತ್ರಕರು ಸೂಚಿಸಿದ ಮಾನದಂಡಗಳ ಪ್ರಕಾರ ಸ್ಟ್ರಾಂಗ್ ರೂಮ್, ಕೋಲ್ಡ್ ಸ್ಟೋರೇಜ್ ಮತ್ತು ಅಪಾಯಕಾರಿ ಸರಕು ಶೇಖರಣಾ ಸೌಲಭ್ಯವನ್ನು ಸಹ ಒದಗಿಸುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ, ಹಣ್ಣುಗಳು, ತರಕಾರಿಗಳು, ಆಹಾರ ಪದಾರ್ಥಗಳು, ಶೀತಲೀಕೃತ ಮೀನು, ಬಿಡಿಭಾಗಗಳು ಮತ್ತು ಜವಳಿ ಸರಕುಗಳನ್ನು ನಿರ್ವಹಿಸುತ್ತದೆ. ದೇಶೀಯವಾಗಿ, ಸರಕು ಪೋಸ್ಟ್ ಆಫೀಸ್ (ಪಿಒ) ಮೇಲ್ ಅನ್ನು ಒಳಗೊಂಡಿದೆ. ಕೊರಿಯರ್ ಐಟಮ್ಸ್, ಹಾಳಾಗುವ ವಸ್ತುಗಳು, ಬೆಲೆಬಾಳುವ ವಸ್ತುಗಳು (ಆಭರಣಗಳು)ಔಷಧಕ್ಕಾಗಿ ರಕ್ತದ ಮಾದರಿಗಳು, ಮಾನವ ಅವಶೇಷಗಳು, ದಾಖಲೆಗಳು / ಸಾಮಾನ್ಯ ಮತ್ತು ಇ-ಕಾಮರ್ಸ್ ವಸ್ತುಗಳು ಮತ್ತು ಅಪಾಯಕಾರಿ ಸರಕುಗಳು ಇತ್ಯಾದಿ ನಿರ್ವಹಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ: BJP ಲೂಟಿ ಹೊಡೆದ ಹಣವನ್ನು ಕಾಂಗ್ರೆಸ್ ಸರ್ಕಾರ ಜನರಿಗೆ ವಾಪಸ್ ನೀಡಲಿದೆ: ರಾಹುಲ್