Advertisement
ಸುಳ್ಯದಲ್ಲಿ ಈ ಬಾರಿ ಪ್ರಚಾರ ಹೇಗಿದೆ?ಒಂದು ತಿಂಗಳಿನಿಂದ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪಕ್ಷದ ಪರ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದೆ. ಪಕ್ಷದ ವಿವಿಧ ಜವಾಬ್ದಾರಿ ಹೊತ್ತ ನಾಯಕರು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಜನಪರ ಯೋಜನೆಗಳು ಮತ್ತು ಕಾಂಗ್ರೆಸ್ ಮುಖಂಡರ ಪ್ರಯತ್ನದ ಫಲವಾಗಿ ಕ್ಷೇತ್ರಕ್ಕೆ ಮಂಜೂರುಗೊಂಡಿರುವ 75 ಕೋ. ರೂ.ಗೂ ಅಧಿಕ ಮೊತ್ತದ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟಿದ್ದೇವೆ.
ಕಳೆದ 25 ವರ್ಷಗಳಿಂದ ಇಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಪೂರ್ಣ ವೈಫಲ್ಯ ಕಂಡಿದೆ. ವಿದ್ಯುತ್, ರಸ್ತೆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಪ್ರಚಾರ ಸಂದರ್ಭದಲ್ಲಿ ಜನರೇ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡು ಬಾರಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ಅವರ ಕೊಡುಗೆ ಕೂಡ ಶೂನ್ಯ. ಸಿಆರ್‌ಎಫ್ ನಿಧಿಯಿಂದ ರಸ್ತೆಗೆ ಅನುದಾನ ನೀಡಿದ್ದೇನೆ ಎಂದಿದ್ದರು. ವಾಸ್ತವವಾಗಿ ಅದಕ್ಕೆ ಇನ್ನೂ ತಾಂತ್ರಿಕ ಮಂಜೂರಾತಿ ಸಿಕ್ಕಿಲ್ಲ. ಸಂಸದರು ದತ್ತು ತೆಗೆದುಕೊಂಡ ಬಳ್ಪ ಗ್ರಾಮದಲ್ಲಿ ಹೇಳಿಕೊಳ್ಳುವಂತಹ ಯಾವ ಅಭಿವೃದ್ಧಿ ಕೆಲಸವೂ ಆಗಿಲ್ಲ. ಬಿಜೆಪಿ ವೈಫಲ್ಯದ ವಿರುದ್ಧ ಮತ್ತು ಕಾಂಗ್ರೆಸ್ ರಾಜ್ಯ ಸರಕಾರದ ಸಾಧನೆ ಪರವಾಗಿ ಜನರು ಮತ ಚಲಾಯಿಸುವ ವಿಶ್ವಾಸ ಇದೆ. 25 ವರ್ಷಗಳಿಂದ ಪಕ್ಷ ಗೆದ್ದಿಲ್ಲ. ಜನರು ಈ ಬಾರಿ ಬದಲಾವಣೆ ಬಯಸುವ ನಿರೀಕ್ಷೆ ಇದೆಯಾ?
ಈ ಹಿಂದಿನ ಚುನಾವಣೆಗೆ ಹೋಲಿಸುವುದಕ್ಕಿಂತಲೂ ಈ ಬಾರಿ ಪರಿಸ್ಥಿತಿ ಭಿನ್ನ. ಕೇಂದ್ರದ ಆಡಳಿತದ ಜನವಿರೋಧಿ ನೀತಿ, ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಾಚಾರ, 25 ವರ್ಷ ಕಳೆದರೂ ತಾಲೂಕಿನ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಸಿಗದಿರುವುದು ಇವೆಲ್ಲಗಳಿಂದ ಜನರು ರೋಸಿ ಹೋಗಿದ್ದಾರೆ. ಜನ ಪ್ರಜ್ಞಾವಂತರಾಗಿದ್ದು ಬದಲಾವಣೆ ಬಯಸಲಿದ್ದಾರೆ. ಕಾಂಗ್ರೆಸ್ ಪಕ್ಷವೂ ಸುಳ್ಯದ ವಿವಿಧ ನಾಯಕರಿಗೆ ಉನ್ನತ ಸ್ಥಾನಮಾನ ನೀಡಿರುವುದು ಸಂಘಟನೆ ದೃಷ್ಟಿಯಿಂದಲೂ ಪಕ್ಷಕ್ಕೆ ಬಲ ಸಿಕ್ಕಿದೆ. ಕಾರ್ಯಕರ್ತರೂ ಶ್ರಮಿಸುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಗೆಲ್ಲುವುದು ಶತಃಸಿದ್ಧ.
Related Articles
ಪಕ್ಷದ ಹೈಕಮಾಂಡ್ ಈ ನಿರ್ಧಾರ ಪ್ರಕಟಿಸಲಿದೆ. ಡಾ| ರಘು ಸಜ್ಜನ ವ್ಯಕ್ತಿ. ಜನಸೇವೆಗಾಗಿ ಸರಕಾರಿ ಹುದ್ದೆ ತೊರೆದು ಬಂದಿದ್ದಾರೆ. ಅವರ ಬಗ್ಗೆ ಕ್ಷೇತ್ರದ ಜನರಿಗೆ ಒಳ್ಳೆಯ ಅಭಿಪ್ರಾಯ ಇದೆ. ಇಲ್ಲಿ ಡಾ| ರಘು ಸ್ಪರ್ಧಿಸುತ್ತಾರೋ ಅಥವಾ ಹೊಸಬರೋ ಅನ್ನುವುದಕ್ಕಿಂತಲೂ ಕಾಂಗ್ರೆಸ್ಸೇ ಗೆಲ್ಲುತ್ತದೆ ಎನ್ನುವುದು ನಿಶ್ಚಿತ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್ ಗೆಲುವಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ.
Advertisement
ಕಿರಣ್ ಪ್ರಸಾದ್ ಕುಂಡಡ್ಕ